ಮಕ್ಕಳ ಕಳ್ಳತನ ತಡೆಗೆ ನಂದಿಕೇಶ್ವರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ

Team Udayavani, Oct 1, 2019, 12:36 PM IST

ಬಾದಾಮಿ: ಮಕ್ಕಳು ನಾಪತ್ತೆಯಾಗುವುದನ್ನು ತಡೆಯಲು ಪೊಲೀಸ್‌ ಇಲಾಖೆ ನಂದಿಕೇಶ್ವರ ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಕಳೆದ 15 ದಿನಗಳ ಹಿಂದೆ ನಂದಿಕೇಶ್ವರ ಗ್ರಾಮದ ಸಿದ್ದಪ್ಪ ಹುಲಸಗೇರಿ ಎಂಬುವರ 8 ವರ್ಷದ ಮಗುವನ್ನು ಮನೆಯಲ್ಲಿ ಯಾರೂ ಇಲ್ಲವೆಂಬ ಕಾರಣಕ್ಕೆ ಅವರ ಸಂಬಂ ಧಿಕರೊಬ್ಬರು ಬೈಕ್‌ನಲ್ಲಿ ಕೆಂದೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಆ ಗ್ರಾಮದವರು

ಅಪರಿಚಿತರು ಮಗುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಪಿಎಸ್‌ಐ.ಪ್ರಕಾಶ ಬಣಕಾರ ಅವರಿಗೆ ತಿಳಿಸಿದ್ದರು. ನಂತರ ವಿಚಾರಿಸಿದಾಗ ಅವರ ಸಂಬಂ ಧಿಕರೇ ಕರೆದುಕೊಂಡು ಹೋಗಿರುವುದು ದೃಢಪಟ್ಟಿತ್ತು.

ಗ್ರಾಮದಲ್ಲಿ 2009ರಿಂದ 2016ರ ಅವಧಿಯಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದವು. 2009 ರ ಶ್ರಾವಣ ಮಾಸದಲ್ಲಿ ಗುರಮ್ಮ ಮಾಗುಂಡಯ್ಯ ತೋಗುಣಸಿ ಎಂಬ 3 ವರ್ಷ 6 ತಿಂಗಳು ಮಗು, 2010ರಲ್ಲಿ ರಂಗನಾಥ ಬಸಪ್ಪ ಮಡ್ಡಿ ಕುಟುಂಬದ ಇಬ್ಬರು ಮಕ್ಕಳು, 2016ರಲ್ಲಿ ಮಹಾಕೂಟಿ ತಿಪ್ಪಣ್ಣ ಢಾಣಕಶಿರೂರ (5) ಎಂಬ ಮಗು ಕಾಣೆಯಾಗಿತ್ತು. ಇದರಲ್ಲಿ ಎರಡು ಮಕ್ಕಳು ಶವವಾಗಿ ಪತ್ತೆಯಾಗಿವೆ. ಇನ್ನೆರಡು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಸಹ ಪತ್ತೆಯಾಗಿಲ್ಲ. ಮಕ್ಕಳ ಕಳ್ಳತನ, ಕಾಣೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌

ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಂದಿಕೇಶ್ವರ ಗ್ರಾಮದ ದ್ವಾರಬಾಗಿಲಿನಿಂದ ಊರ ಪ್ರಮುಖ ಬೀದಿಗಳಲ್ಲಿ, ಶಾಲೆ, ಗ್ರಾಪಂ ಮತ್ತು ಡಿಸಿಸಿ ಬ್ಯಾಂಕ್‌ ಶಾಖೆ ಹತ್ತಿರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿದೆ.

ಸಭೆ ಆಯೋಜನೆ: ಪಿಎಸ್‌ಐ ಪ್ರಕಾಶ ಬಾಣಕಾರ ನಂದಿಕೇಶ್ವರ ಗ್ರಾಮದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಕ್ಕಳ ಬಗ್ಗೆ ಜಾಗೃತಿ ವಹಿಸಲು ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಈಗ ಸುಮಾರು 20ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿನಿತ್ಯ ಇಬ್ಬರು ಪೊಲೀಸರನ್ನು ಬಂದೋಬಸ್ತ್ ನಿಯೋಜಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಹಾಲಿಂಗಪುರ: ಅಸಮರ್ಪಕ ನಿರ್ವಹಣೆಯಿಂದ ಪಟ್ಟಣದ ಹಿಂದೂ ಸಮಾಜದ ರುದ್ರಭೂಮಿ ಅವ್ಯವಸ್ಥೆ ಆಗರವಾಗಿದ್ದು, ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಅವ್ಯವಸ್ಥೆಗಳ ಆಗರ:...

  • ಮುಧೋಳ: ಜಿಲ್ಲೆಯ 619 ಕಂದಾಯ ಗ್ರಾಮಗಳಲ್ಲೇ ಒಳಚರಂಡಿ ವ್ಯವಸ್ಥೆ ಹೊಂದುವ ಮೂಲಕ ಇಡೀ ರಾಜ್ಯದ ಗಮನ ಸೆಳೆದ ತಾಲೂಕಿನ ಮೆಳ್ಳಿಗೇರಿ ಗ್ರಾಮ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಸಾರ್ವಜನಿಕರ...

  • ಬಾಗಲಕೋಟೆ: ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಲಕ್ಷಾಂತರ ಅತ್ಯುತ್ತಮ ಗ್ರಂಥಗಳನ್ನು ಹೊಂದಿರುವ "ಜಿಲ್ಲೆಯ ಅತ್ಯಂತ ಹಳೆಯ ಗ್ರಂಥಾಲಯ' ಎಂದೇ ಖ್ಯಾತಿ ಹೊಂದಿದ...

  • ಬಾಗಲಕೊಟೆ : ಘಟಪ್ರಭಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಚಿಚಖಂಡಿ ಬಳಿ ರವಿವಾರ ಸಂಜೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು...

  • ಬಾದಾಮಿ: ಅಯ್ಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಬಾದಾಮಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು. ಶಾಲಾ-ಕಾಲೇಜು...

ಹೊಸ ಸೇರ್ಪಡೆ