ಉ.ಕ.ದಲ್ಲಿ ಮೋದಿ ಸ್ಪರ್ಧಿಸಿದ್ರೂ ಚುನಾವಣೆ ಎದುರಿಸ್ತೇವೆ

Team Udayavani, Sep 18, 2017, 6:05 AM IST

ಬಾಗಲಕೋಟೆ: “ಉತ್ತರ ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ ಅಲ್ಲ, ಪ್ರಧಾನಿ ಮೋದಿ ಬಂದು ಸ್ಪ ರ್ಧಿಸಿದರೂ ಚುನಾವಣೆ ಎದುರಿಸುತ್ತೇವೆ’ ಎಂದು ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಮನವಿ ಮಾಡಲಾಗಿದೆ. ಜಿಲ್ಲೆಯ ಬೀಳಗಿ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪ ರ್ಧಿಸುವಂತೆ ಬೇಡಿಕೆ ಇದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಬಹುತೇಕ ಮೈಸೂರಿನಿಂದಲೇ ಸ್ಪರ್ಧಿಸಬಹುದು’ ಎಂದರು. ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಸಿಎಂ ಮತ್ತು ಪಕ್ಷ ತೀರ್ಮಾನಿಸುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಯಾವುದೇ ಭಯವಿಲ್ಲ. ಚುನಾವಣೆಗೆ ಯಾರು ಎಲ್ಲಿ ಬೇಕಾದರೂ ಬಂದು ಸ್ಪರ್ಧೆ ಮಾಡಬಹುದು. ಜನ ಆಯ್ಕೆ ಮಾಡುತ್ತಾರೆ.
– ತನ್ವೀರ್‌ ಸೇಠ್ ಶಿಕ್ಷಣ ಸಚಿವ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ