Breaking news : ಜಮೀನು ಜಗಳ : ಜಮಖಂಡಿಯಲ್ಲಿ ನಾಲ್ವರ ಸಹೋದರರ ಬರ್ಬರ ಹತ್ಯೆ
Team Udayavani, Aug 28, 2021, 9:26 PM IST
ಜಮಖಂಡಿ: ಆಸ್ತಿ ವ್ಯಾಜ್ಯದ ಸಲುವಾಗಿ ನಾಲ್ವರ ಸಹೋದರರ ಬರ್ಬರ ಹತ್ಯೆ ನಡೆದಿರುವಂತಹ ಬೆಚ್ಚಿ ಬೀಳಿಸುವ ಘಟನೆ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮುದರಡ್ಡಿ ಮತ್ತು ಪುಠಾಣಿ ಮನೆತನದ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಪುಠಾಣಿ ಮನೆತನದವರು ಮುದರಡ್ಡಿ ಮನೆತನದ ನಾಲ್ಕು ಜನ ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ (37), ಈಶ್ವರ ಮುದರಡ್ಡಿ (35) ಮತ್ತು ಮಲ್ಲು ಮುದರಡ್ಡಿ (33) ಕೊಲೆಯಾದ ಸಹೋದರರು.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ವರ್ಷಗಳಿಂದ ಈ ಎರಡು ಮನೆತನದ ನಡುವೆ ಆಸ್ತಿ ಸಲುವಾಗಿ ಜಗಳಗಳು ಇತ್ತು. ಪುರಾಣಿ ಮನೆತನದವರು ಹೊರಗಿನವರನ್ನು ಕರೆಸಿ ಕೊಲೆ ಮಾಡಿಸಿರುವದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ, ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ