Udayavni Special

ಮೈದುಂಬಿದ ಕೃಷ್ಣೆ, ರೈತರಲ್ಲಿ ಆಶಾಭಾವ

•ಕೃಷ್ಣಾ ನದಿಗೆ ಬರುತ್ತಿದೆ ಭಾರಿ ಪ್ರಮಾಣದ ನೀರು•ಎದುರಾಗಿದೆ ಪ್ರವಾಹ ಭೀತಿ•ಸಂಚಾರಕ್ಕೆ ತೊಂದರೆ

Team Udayavani, Jul 14, 2019, 9:42 AM IST

bk-tdy-2..

ಬೀಳಗಿ: ಗುಳಬಾಳ ಹತ್ತಿರ ತುಂಬಿ ಹರಿಯುತ್ತಿರುವ ಕೃಷ್ಣೆ.

ಬೀಳಗಿ: ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಕೃಷ್ಣಾನದಿ ತುಂಬಿಕೊಂಡು ಹರಿಯುತ್ತಿದೆ. ಮೈದುಂಬಿಕೊಳ್ಳುತ್ತಿರುವ ಕೃಷ್ಣೆಯ ಕಂಡು ಇನ್ನೇನು ಏತ ನೀರಾವರಿ ಕಾಲುವೆಗೆ ನೀರು ಹರಿಯಲಿದೆ ಎಂಬ ಆಶಾಭಾವನೆ ರೈತರಲ್ಲಿ ಮೂಡಿದೆ.

ಅಂತರ್ಜಲ ವೃದ್ಧಿ: ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ಕೊಳವೆಬಾವಿ, ಬಾವಿ, ಕೆರೆ-ಕಟ್ಟೆಗಳು ಬರಿದಾಗಿದ್ದವು. ಕೃಷ್ಣೆಯಲ್ಲಿ ಮತ್ತೆ ನೀರು ತುಂಬಿಕೊಂಡು ಬಂದಿರುವ ಕಾರಣ, ಅಂತರ್ಜಲ ವೃದ್ಧಿಯ ಆಶಾಭಾವನೆ ಮೊಳಕೆಯೊಡೆದಿದೆ. ದಿನದಿಂದ ದಿನಕ್ಕೆ ಆಲಮಟ್ಟಿ ಜಲಾನಯನ ಪ್ರದೇಶದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೃಷ್ಣೆಯ ನದಿಪಾತ್ರದಲ್ಲಿ ಎಲ್ಲ ಏತ ನೀರಾವರಿ ಜಾಕವೆಲ್ ಹತ್ತಿರ ಭರಪುರ ನೀರು ಬಂದಿದೆ.

80ಟಿಎಂಸಿ ಸಂಗ್ರಹ: ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ 516.7 ಇದೆ. ಜು. 2ರ ರಾತ್ರಿಯಿಂದ ಇದುವರೆಗೆ ಸುಮಾರು 60 ಟಿಎಂಸಿ ನೀರು ಹರಿದು ಬಂದಿದೆ. ಮೊದಲಿನ ಸಂಗ್ರಹ ಹಿಡಿದು ಜಲಾಶಯದಲ್ಲಿ ಈಗಾಗಲೆ ಒಟ್ಟು 80 ಟಿಎಂಸಿ ನೀರು ಸಂಗ್ರಹವಿದೆ. ಜೀವಜಲ 63 ಟಿಎಂಸಿ ಇದೆ ಎಂದು ಕೆಬಿಜಿಎನ್‌ಎಲ್ ಮುಖ್ಯ ಅಭಿಯಂತರ ಆರ್‌.ಪಿ.ಕುಲಕರ್ಣಿ ತಿಳಿಸಿದ್ದಾರೆ.

ನೀರಿಗಾಗಿ ಕಾಯುತ್ತಿದ್ದಾರೆ: ಏತ ನೀರಾವರಿ ಕಾಲುವೆಗೆ ನೀರು ಹರಿದ ತಕ್ಷಣವೇ ಬಿತ್ತನೆ ಮಾಡಬೇಕೆಂದು ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದವರೂ ಕೂಡ ಕಾಲುವೆ ನೀರನ್ನು ಅವಲಂಬಿಸಿದ್ದಾರೆ. ಹೀಗಾಗಿ ತಾಲೂಕಿನ ತೆಗ್ಗಿ-ಸಿದ್ದಾಪುರ, ರೊಳ್ಳಿ, ಲಿಂಗಾಪುರ ಎಸ್‌ಕೆ ಸೇರಿದಂತೆ ತಾಲೂಕಿನ ಹಲವು ಏತ ನೀರಾವರಿ ಕಾಲುವೆಗೆ ನೀರು ಹರಿಸುವುದು ಶೀಘ್ರಗತಿಯಲ್ಲಿ ನಡೆಯಬೇಕಿದೆ.

ಕೃಷ್ಣಾ ನದಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಾರಣ, ಜು. 15 ರೊಳಗೆ ತಾಲೂಕಿನ ತೆಗ್ಗಿ-ಸಿದ್ದಾಪುರ, ಸೊನ್ನ, ರೊಳ್ಳಿ, ಕಳಸಕೊಪ್ಪ ಸೇರಿದಂತೆ ಎಲ್ಲ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕೆಬಿಜಿಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಏತ ನೀರಾವರಿ ಕಾಲುವೆಗೆ ನೀರು ಬಿಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.•ಮುರುಗೇಶ ನಿರಾಣಿ, ಶಾಸಕರು, ಬೀಳಗಿ

ಕೆಬಿಜಿಎನ್‌ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಲಾಶಯದ ನೀರಿನ ಸಂಗ್ರಹ ಹಾಗೂ ಕುಡಿಯಲು, ಕೆರೆ ತುಂಬಲು ಹಾಗೂ ನೀರಾವರಿಗೆ ಎಷ್ಟೆಷ್ಟು ನೀರು ತೆಗೆದಿರಿಸಬೇಕೆನ್ನುವುದು ಕುರಿತು ಚರ್ಚೆ, ನಿರ್ಧಾರವಾಗಬೇಕು. ಈ ಎಲ್ಲ ಪ್ರಕ್ರಿಯೆಗೆ ವಿಳಂಬವಾಗುತ್ತದೆ. ಆದರೂ, ಏತ ನೀರಾವರಿ ಯೋಜನೆಗಳಿಗೆ ಎಷ್ಟು ಪ್ರಮಾಣ ನೀರು ಬಿಡಬೇಕಾಗುತ್ತದೆ ಎನ್ನುವ ಕುರಿತು ನೀರಾವರಿ ಸಲಹಾ ಸಮಿತಿ ಗಮನಕ್ಕೆ ನೀಡುವ ಮೂಲಕ ಕೂಡಲೇ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.•ಆರ್‌.ಪಿ.ಕುಲಕರ್ಣಿ, ಕೆಬಿಜಿಎನ್‌ಎಲ್ ಮುಖ್ಯ ಅಭಿಯಂತರರು

 

•ರವೀಂದ್ರ ಕಣವಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

jamess-bond

ಜೇಮ್ಸ್‌ ಬಾಂಡ್‌ ಖ್ಯಾತಿಯ ನಟ ಸೀನ್ ಕಾನೆರಿ ನಿಧನ

IPHONE

Flipkart, Amazon Diwali Sale: ಯಾವೆಲ್ಲ ಫೋನ್ ಗಳಿಗಿವೆ ಡಿಸ್ಕೌಂಟ್? ಇಲ್ಲಿದೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bk-tdy-2

ಸತತ ಮಳೆಯಿಂದ ಬೆಳೆ ಹಾಳು

ಸೌಲಭ್ಯ ಪಡೆಯಲು ಸಂಘಟನೆ ಅವಶ್ಯ: ಬೀರಪ್ಪ

ಸೌಲಭ್ಯ ಪಡೆಯಲು ಸಂಘಟನೆ ಅವಶ್ಯ: ಬೀರಪ್ಪ

ಇದ್ದೂ ಇಲ್ಲದಂತಾದ ಶುದ್ಧ ಕುಡಿವ ನೀರಿನ ಘಟಕ

ಇದ್ದೂ ಇಲ್ಲದಂತಾದ ಶುದ್ಧ ಕುಡಿವ ನೀರಿನ ಘಟಕ

ಕಬ್ಬು ಹೇರಲು ಯಂತ್ರ ತಯಾರಿಸಿದ ರೈತ! ಕೂಲಿಯಾಳು ಸಮಸ್ಯೆಗೆ ಸಿಕ್ಕಿತು ಪರಿಹಾರ

ಕಬ್ಬು ಹೇರಲು ಯಂತ್ರ ತಯಾರಿಸಿದ ರೈತ! ಕೂಲಿಯಾಳು ಸಮಸ್ಯೆಗೆ ಸಿಕ್ಕಿತು ಪರಿಹಾರ

ಶಾಸಕರು-ಮಾಜಿ ಸಚಿವರ ಸ್ಪರ್ಧೆ ತಂದ ಕುತೂಹಲ!

ಶಾಸಕರು-ಮಾಜಿ ಸಚಿವರ ಸ್ಪರ್ಧೆ ತಂದ ಕುತೂಹಲ!

MUST WATCH

udayavani youtube

ಈ ಮತ್ಸ್ಯಪ್ರೇಮಿಗೆ ಮನೆಯ ಬಾವಿಯೇ ಅಕ್ವೇರಿಯಂ

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

ಹೊಸ ಸೇರ್ಪಡೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.