ಶಿಕ್ಷಣಕ್ಕಾಗಿ ಮಕ್ಕಳ ನಿತ್ಯ ಪಾದಯಾತ್ರೆ

ಗಡಿಗ್ರಾಮದ ಮಕ್ಕಳಿಗೆ ಬಸ್‌ ವ್ಯವಸ್ಥೆ ಮರೀಚಿಕೆ

Team Udayavani, Mar 24, 2021, 12:19 PM IST

ಶಿಕ್ಷಣಕ್ಕಾಗಿ ಮಕ್ಕಳ ನಿತ್ಯ ಪಾದಯಾತ್ರೆ

ಮುಧೋಳ: ಸರಿಯಾದ ಸಮಯಕ್ಕೆ ಬಸ್‌ ವ್ಯವಸ್ಥೆಯಿಲ್ಲದೆ ಸಮೀಪದ ಅರಕೇರಿ ತಾಂಡಾದ ವಿದ್ಯಾರ್ಥಿಗಳು ನಿತ್ಯ ಮೂರ್‍ನಾಲ್ಕು ಕಿಮೀ ದೂರ ಕಾಲ್ನಡಿಗೆಯಲ್ಲಿಯೇ ತೆರಳಿ ಶಿಕ್ಷಣ ಪಡೆಯಬೇಕಾಗಿದೆ.

ತಾಂಡಾದಿಂದ 20ರಿಂದ 30ವಿದ್ಯಾರ್ಥಿಗಳಿಗೆ ಶಾಲೆ ತಲುಪಲುನಿತ್ಯ ಪಾದಯಾತ್ರೆ ಅನಿವಾರ್ಯವಾಗಿದೆ. 6ರಿಂದ 10ನೇ ತರಗತಿಯಲ್ಲಿಓದುವ ಚಿಕ್ಕಮಕ್ಕಳು ಬಿಸಿಲು, ಮಳೆ, ಚಳಿಗಾಳಿಯೆನ್ನದೆ ಅಕ್ಷರ ಕಲಿಕೆಗೆ ಹರಸಾಹಸ ಪಡುವಂತಾಗಿದೆ.

ವಿದ್ಯಾರ್ಥಿಗಳ ನಿತ್ಯ ಪರದಾಟ: ಬೀಳಗಿ ತಾಲೂಕು ವ್ಯಾಪ್ತಿಗೊಳಪಡುವ ಅರಕೇರಿ ತಾಂಡಾದಲ್ಲಿ 1ರಿಂದ5ನೇ ತರಗತಿವರೆಗೆ ಮಾತ್ರ ಶಿಕ್ಷಣಕ್ಕೆಅವಕಾಶವಿದೆ. ಅದಾದ ನಂತರ 6ನತರಗತಿಯಿಂದ ಶಿಕ್ಷಣಕ್ಕೆ ಬೇರೆ ಕಡೆ  ಹೋಗಲೇಬೇಕು. ತಾಂಡಾದಿಂದಅರಕೇರಿ ಗ್ರಾಮ 5 ಕಿಮೀ ಹಾಗೂಮುಧೋಳ ತಾಲೂಕಿನ ಹಲಗಲಿ ಗ್ರಾಮ 3 ಕಿಮೀ ದೂರವಾಗುತ್ತದೆ.ತಾಂಡಾದ ಹೆಚ್ಚಿನ ಮಕ್ಕಳು ಹಲಗಲಿ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಆದರೆ ಅವರು ಆಗಮಿಸುವ ವೇಳೆಗೆ ಯಾವುದೇ ಬಸ್‌ ಸೌಕರ್ಯವಿಲ್ಲ.ಇದರಿಂದಾಗಿ ತಾಂಡಾ ಮಕ್ಕಳು ಪ್ರತಿನಿತ್ಯ 3 ಕಿಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ಶಿಕ್ಷಣ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಂದೇ ಬಸ್‌: ಹಲಗಲಿ ಹಾಗೂ ಅರಕೇರಿ ತಾಂಡಾ ಮಧ್ಯೆ ದಿನಕ್ಕೆ ಒಂದೇಬಾರಿ ಬಸ್‌ ಸಂಚಾರದ ಅನುಕೂಲತೆ ಇದೆ. ಪ್ರತಿದಿನ ಬಾಗಲಕೋಟೆಯಿಂದರಾತ್ರಿ ಹಲಗಲಿಗೆ ವಸತಿ ಬಸ್‌ಬಂದು ಬೆಳಗ್ಗೆ 6 ಗಂಟೆಗೆ ಮರಳಿ ಬಾಗಲಕೋಟೆಗೆ ಹೊರಡುತ್ತದೆ. ಇದಾದ ಬಳಿಕ ತಾಂಡಾ ಹಾಗೂಹಲಗಲಿ ಗ್ರಾಮದ ಮಧ್ಯೆ ಯಾವುದೇ ಬಸ್‌ ಸಂಚಾರವಿಲ್ಲ. ಈ ಮಾರ್ಗದಲ್ಲಿಆಟೋ, ಮ್ಯಾಕ್ಸಿ ಕ್ಯಾಬ್‌ನಂತಹಖಾಸಗಿ ವಾಹನಗಳ ಓಡಾಟವೂ ಇಲ್ಲ.ಇದರಿಂದಾಗಿ ಮಕ್ಕಳಿಗೆ ಕಾಲ್ನಡಿಗೆ ಬಿಟ್ಟರೆ ಬೇರೆ ಮಾರ್ಗವೇ ಇಲ್ಲದಂತಾಗಿದೆ.

ಅಧಿಕಾರಿಗಳ ನಿರಾಸಕ್ತಿ: ಅರಕೇರಿ ತಾಂಡಾ ಬೀಳಗಿ ತಾಲೂಕು ಹಾಗೂಹಲಗಲಿ ಗ್ರಾಮ ಮುಧೋಳತಾಲೂಕು ವ್ಯಾಪ್ತಿಯಲ್ಲಿ ಬರುವುದರಿಂದವಿದ್ಯಾರ್ಥಿಗಳ ಗೋಳು ಯಾರಿಗೂಕೇಳುತ್ತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಬಸ್‌ಸೌಲಭ್ಯಕ್ಕಾಗಿ ಅಧಿ ಕಾರಿಗಳ ಮುಂದೆಪ್ರಸ್ತಾಪಿಸಿದರೆ ಒಂದು ತಾಲೂಕಿನ ಅಧಿಕಾರಿಗಳು ಮತ್ತೂಂದು ತಾಲೂಕಿನ ಅಧಿಕಾರಿಗಳ ಕಡೆಗೆ ಬೆರಳು ತೋರಿಸುತ್ತಾರೆ. ಆದರೆ, ವಿದ್ಯಾರ್ಥಿಗಳ ಸಮಸ್ಯೆಗೆ ಮಾತ್ರ ಯಾರು ಸ್ಪಂದಿಸುತ್ತಿಲ್ಲ.

20ರಿಂದ 30 ವಿದ್ಯಾರ್ಥಿಗಳು:

ತಾಂಡಾದಿಂದ ನಿತ್ಯ 20ರಿಂದ 30 ವಿದ್ಯಾರ್ಥಿಗಳು ಅರಕೇರಿ ತಾಂಡಾದಿಂದಹಲಗಲಿ ಗ್ರಾಮಕ್ಕೆ ಶಿಕ್ಷಣಕ್ಕಾಗಿ ಆಗಮಿಸುತ್ತಾರೆ. 6ರಿಂದ 10 ನೇತರಗತಿವರೆಗಿನ ಚಿಕ್ಕ ಮಕ್ಕಳು ಶಾಲೆಗೆ ಪ್ರತಿನಿತ್ಯ 3 ಕಿಮೀ ನಡೆದುಕೊಂಡು ಬರಬೇಕು. ತಾಂಡಾ ಹಾಗೂಹಲಗಲಿ ಗ್ರಾಮದ ನಡುವಿನ ರಸ್ತೆಯಡಹಳ್ಳಿ ಚೀಂಕಾರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ನಿತ್ಯಮಕ್ಕಳಲ್ಲಿ ಕಾಡು ಪ್ರಾಣಿಗಳ ಭಯವೂ ಕಾಡುತ್ತದೆ. ಹಲವಾರು ಜನರುತಮ್ಮ ಮಕ್ಕಳು ನಿತ್ಯ ನಡೆದುಕೊಂಡುಹೋಗಬೇಕು ಎಂಬ ಚಿಂತೆಯಿಂದಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದಾರೆ. ಮತ್ತುಅನೇಕರು ಬೇರೆ ಬೇರೆ ಊರುಗಳಲ್ಲಿಹಾಸ್ಟೆಲ್‌ಗ‌ಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದಾರೆ.

ನಾವು ನಿತ್ಯ ತಾಂಡಾದಿಂದ 3 ಕೀಮೀ ದೂರವಿರುವ ಹಲಗಲಿ ಗ್ರಾಮಕ್ಕೆ ನಡೆದುಕೊಂಡು ಶಾಲೆಗೆ ಹೋಗಬೇಕು. ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ. ನಮಗೆ ಶಾಲೆ ಅವಧಿಯಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. –ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ

ಹಲಗಲಿ ಗ್ರಾಮವು ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಬರುವುದರಿಂದ ಬಸ್‌ ಸೌಲಭ್ಯ ಕಲ್ಪಿಸುವ ಕುರಿತು ಮೇಲಧಿಕಾರಿಗಳ ಗಮನ ಸೆಳೆಯುತ್ತೇವೆ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇನೆ. – ಅಶೋಕ ಕೋರಿ, ಬೀಳಗಿ ಘಟಕ ವ್ಯವಸ್ಥಾಪಕ

ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವುದು ನನ್ನ ಗಮನದಲ್ಲಿ ಇಲ್ಲ. ಹೊಸ ಮಾರ್ಗಕ್ಕೆ ಬಸ್‌ ಓಡಿಸುವುದು ಮೇಲಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು,ಸ್ಥಳೀಯ ಗ್ರಾಮಸ್ಥರು ಬಸ್‌ ಓಡಿಸುವಂತೆ ನಮಗೆ ಒಂದು ಮನವಿ ನೀಡಿದರೆ ನಾವು ಈ ಬಗ್ಗೆ ಮೇಲಧಿ ಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ. – ಜಿ.ಎಸ್‌. ಬಿರಾದಾರ, ಮುಧೋಳ ಘಟಕ ವ್ಯವಸ್ಥಾಪಕ

 

-ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.