Udayavni Special

ಬಾದಾಮಿ ಭಾಗ್ಯ ತೆರೆದೀತೇ


Team Udayavani, Sep 27, 2019, 12:09 PM IST

bk-tdy-2

ಬಾದಾಮಿ: ವಿಶ್ವದ ಗಮನ ಸೆಳೆದ ಬಾದಾಮಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಅಥವಾ ರಾಜ್ಯ ಸರ್ಕಾರ ಗಮನ ಸೆಳೆಯುತ್ತಿಲ್ಲ ಎಂಬ ಕೂಗು ಇಲ್ಲಿಗೆ ನಿತ್ಯ ಬರುವ ನೂರಾರು ಪ್ರವಾಸಿಗರಿಂದ ಕೇಳಿ ಬರುತ್ತಿವೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸುಂದರ ತಾಣಗಳು ಇಲ್ಲಿದ್ದರೂ ಅವುಗಳ ಬಗ್ಗೆ ಸೂಕ್ತ ಪ್ರಚಾರ, ಪ್ರವಾಸಿಗರಿಗೆ ಉತ್ತಮ ದರ್ಜೆಯ ಸೌಲಭ್ಯಗಳಿಲ್ಲ. ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ ಎಂಬ ಮಾತಿದೆ. ಜಿಲ್ಲೆಗೆ ಬರುವ ಕೆಲ ಅಧಿಕಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆಸಕ್ತಿಯಿಂದ ಕೆಲಸ ಮಾಡಿದರೂ ಅವರೆಲ್ಲ ಅತಿ ಬೇಗ ವರ್ಗವಾಗಿ ಹೋಗುತ್ತಾರೆ.ಇನ್ನು ಜನಪ್ರತಿನಿಧಿಗಳಂತೂ ಇತ್ತ ಕಡೆ ಗಮನ ಹರಿಸುವುದೇ ಇಲ್ಲ. ಬಾದಾಮಿಗೆ ಸಿದ್ದರಾಮಯ್ಯ ಶಾಸಕರಾದ ಬಳಿಕ ಒಂದಷ್ಟು ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಗೊಳ್ಳುತ್ತಿವೆಯಾದರೂ ಅವು

ಅನುಷ್ಠಾನಕ್ಕೆ ಬರಲಿ ಎಂಬುದು ಇಲ್ಲಿನ ಜನ ಒತ್ತಾಸೆ. ಕೇಂದ್ರದ ಭಾರತೀಯ ಪುರಾತತ್ವ ಇಲಾಖೆ, ರಾಜ್ಯದ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಪುರಸಭೆ, ಗ್ರಾಪಂಗಳ ಮಧ್ಯೆ ಸಿಲುಕಿ ಇಲ್ಲಿನ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುತ್ತಿಲ್ಲ. ಐಹೊಳೆ, ಪಟ್ಟದಕಲ್ಲು, ಬಾದಾಮಿಯ ತಟಕೋಟೆ ಬಳಿಯ ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮಟ್ಟದಲ್ಲೇ ಓರ್ವ ಉತ್ಸಾಹಿ ಅಧಿಕಾರಿ ನೇಮಕಗೊಳ್ಳಬೇಕಿದೆ. ಆ ಅಧಿಕಾರಿಗೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ಹೊಣೆ ಬಿಟ್ಟು ಬೇರೆ ಕೆಲಸ ಕೊಡಬಾರದು. ಆ ಅಧಿಕಾರಿ ಕನಿಷ್ಠ 3 ವರ್ಷ ಇಲ್ಲಿಂದ ವರ್ಗಗೊಳ್ಳಬಾರದು. ಆಗ ಸ್ಥಳಾಂತರ ಸಮಸ್ಯೆಗೆ ಬೇಗ ಮುಕ್ತಿ ಸಿಗಲು ಸಾಧ್ಯ ಎನ್ನುತ್ತಾರೆ ತಜ್ಞರು.

ಜಿಪಂಗೆ ಎಸ್‌.ಎಸ್‌. ನಕುಲ್‌ ಸಿಇಒ ಆಗಿದ್ದಾಗ, ವಿಕಾಸ ಕಿಶೋರ ಸುರಳ್ಕರ ಉಪ ವಿಭಾಗಾಧಿಕಾರಿ ಇದ್ದಾಗ ಬಾದಾಮಿಯಲ್ಲಿ ಒಂದಷ್ಟು ಜಟಿಲ, ನನೆಗುದಿಗೆ ಬಿದ್ದ ಕಾರ್ಯಗಳಿಗೆ ಚಾಲನೆ ಸಿಕ್ಕಿದ್ದವು. ಅವರನ್ನು ಬಾದಾಮಿ ಜನ ಇಂದಿಗೂ ಸ್ಮರಿಸುತ್ತಾರೆ. ಆದರೆ, ಕೆಲ ಅಧಿಕಾರಿಗಳು, ಯಾರು ಏನೇ ಹೇಳಿದರೂ ಆಯ್ತು ಮಾಡೋಣ ಎನ್ನುತ್ತಲೇ ಜಿಲ್ಲೆಯಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದಾರೆ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿಲ್ಲ ಎಂಬ ಕೊರಗು ಜನರಲ್ಲಿದೆ.

ಸೂಕ್ತ ಮಾಹಿತಿ ಸಿಗಲಿ: ಬಾದಾಮಿ ಸಹಿತ ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣಗಳ ಕುರಿತು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ವಿಮಾನ ನಿಲ್ದಾಣಗಳ ಟಿವಿ ಪರದೆ ಮೇಲೆ ವಿಡಿಯೋ ಸಹಿತ ಮೂರು ಭಾಷೆಯಲ್ಲಿ ಸೂಕ್ತ ಮಾಹಿತಿ, ಪ್ರಚಾರ ಕೊಡಬೇಕು. ಇದರಿಂದ ಪ್ರವಾಸಿ ತಾಣಗಳಿಗೆ ಬರಲು ವಿಮಾನ ನಿಲ್ದಾಣದಲ್ಲೇ ಬಂದಿಳಿದ ಜನರಿಗೆ ಆಕರ್ಷಣೆಗೊಳ್ಳುವ ರೀತಿ ಮಾಡಬೇಕು. ಇದು ಪ್ರವಾಸೋದ್ಯಮ ಬೆಳವಣಿಗೆಯ ಒಂದು ಭಾಗವಾಗಬೇಕು.

ಸೌಲಭ್ಯ ಕೊಡಿ: ವಿದೇಶಗಳಲ್ಲಿ ಪ್ರವಾಸಿಗರಿಗಾಗಿ ಇರುವ ಬಸ್‌ಗಳಲ್ಲಿ 2ರಿಂದ 3 ಜನ ಇದ್ದರೂ ಅವರನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವ ಪದ್ಧತಿ ಇದೆ. ಲಾಭಕ್ಕಾಗಿ ಆ ಬಸ್‌ ಓಡಿಸುವುದಿಲ್ಲ. ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಬಳಿಕ, ಕೆಎಚ್‌ಡಿಸಿಯಿಂದ ಒಂದು ಬಸ್‌ ಅನ್ನು ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ಓಡಿಸಲಾಗುತ್ತಿತ್ತು. ಅದು 2 ತಿಂಗಳಬಳಿಕ ಸ್ಥಗಿತಗೊಂಡಿದೆ. ನಷ್ಟದ ಕಾರಣ ಹೇಳಿ ನಿಲ್ಲಿಸಲಾಗಿದೆ. ಈಗ ಖಾಸಗಿ ಟ್ಯಾಕ್ಸಿ ನಂಬಬೇಕು. ಇಲ್ಲದಿದ್ದರೆ ಸುತ್ತಿ-ಬಳಸಿ ತೆರಳುವ ಬಸ್‌ಗಳಲ್ಲೇ ಪ್ರವಾಸಿಗರು ಕಾದು ಹೋಗಬೇಕಾದ ಪರಿಸ್ಥಿತಿ ಇದೆ.

 

 

-ಶಶಿಧರ ವಸ್ತ್ರದ

ಟಾಪ್ ನ್ಯೂಸ್

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fftytry

ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ 

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

MUST WATCH

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

ಹೊಸ ಸೇರ್ಪಡೆ

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

davanagere news

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.