ಕೋವಿಡ್‌ ನೆಪ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ

ಬಾದಾಮಿಯ ವಿವಿಧ ಇಲಾಖೆಗಳ ಕಚೇರಿಗೆ ಜಿಪಂ ಅಧ್ಯಕ್ಷರ ಭೇಟಿ

Team Udayavani, Jul 9, 2020, 4:33 PM IST

ಕೋವಿಡ್‌ ನೆಪ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ

ಬಾದಾಮಿ: ರೈತ ಸಂಪರ್ಕ ಕೇಂದ್ರಕ್ಕೆ ಜಿಪಂ.ಅಧ್ಯಕ್ಷೆ ಬಾಯಕ್ಕ ಮೇಟಿ ಭೇಟಿ ನೀಡಿ ಸಾಮಗ್ರಿ ಪರಿಶೀಲಿಸಿದರು.

ಬಾದಾಮಿ: ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ತಾಲೂಕಿನ ಸರಕಾರಿ ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೆಂಡಾಮಂಡಲವಾದರು. ಕೋವಿಡ್‌19 ನೆಪ ಬಿಟ್ಟು ಜನರ ಸಮಸ್ಯೆಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಸರಕಾರಿ ಆಸ್ಪತ್ರೆ: ಬಾದಾಮಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ರೋಗಿಗಳು ಮಾಸ್ಕ್ ಧರಿಸದೇ ಇರುವುದು ಕಂಡ ಬಾಯಕ್ಕ ಮೇಟಿ, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ಕೊಡಬೇಕು ಎಂದು ಸೂಚಿಸಿದರು. ಆಸ್ಪತ್ರೆಗೆ ಬರುವ ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಲು ತಿಳಿಸಬೇಕು ಎಂದರು.

ಸಿಡಿಪಿಒ ಕಚೇರಿ: ಬಾದಾಮಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜಿಪಂ ಅಧ್ಯಕ್ಷರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿತರಿಸಲು ಗೋಡಾವನಕ್ಕೆ ಬಂದಿದ್ದ ಸಾಮಗ್ರಿ ಪರಿಶೀಲಿಸಿದರು. ಮಕ್ಕಳು ಕೇಂದ್ರಕ್ಕೆ ಬರದಿದ್ದರೂ ಸಹಿತ ಮನೆ ಮನೆಗೆ ಆಹಾರ ಸಾಮಗ್ರಿ ಕೊಡಬೇಕು ಎಂದು ಸೂಚಿಸಿದರು.  ಗೋಡಾವನ್‌ದಲ್ಲಿನ ಸಾಮಗ್ರಿ ಪರಿಶೀಲಿಸಿದರು.

ಮಗುವಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಹುಳುಗಳಿದ್ದವು. ಕೆಲವು ಆಹಾರ ಸಾಮಗ್ರಿಗಳು ಕಳಪೆ ಮಟ್ಟದ್ದು ಇರುವುದು ಕಂಡು ಬಂದಿತು. ತೊಗರಿಬೇಳೆ, ಶೇಂಗಾ, ಪೌಷ್ಟಿಕ ಆಹಾರ, ಬೆಲ್ಲ ತಿನ್ನಲು ಯೋಗ್ಯ ಇರಲಿಲ್ಲ. ಸಿಲೆಂಡರ್‌ ಕಡಿಮೆ ತೂಕ ಇದೆ ಎಂದು ದೂರು ಬಂದಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ: ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿದಾಗ ವಸತಿ ನಿಲಯದ ಮಕ್ಕಳಿಗೆ ವಿತರಿಸಲು ಬಂದಿದ್ದ ಬಟ್ಟೆ, ನ್ಯಾಪಕೀನ್‌ ಇತರ ಸಾಮಗ್ರಿಗಳನ್ನು ಪರಿಶೀಲನೆ ಮಾಡಿದರು. ವಸತಿ ನಿಲಯ ಆರಂಭವಾದ ನಂತರ ಮಕ್ಕಳಿಗೆ ವಿತರಿಸಲು ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಎಪಿಎಂಸಿ ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ರಿಯಾಯ್ತಿ ದರದಲ್ಲಿ ವಿತರಿಸಲು ಬೀಜ, ವಿವಿದ ಬೀಜ, ಸಾಮಗ್ರಿ ಪರಿಶೀಲಿಸಿದರು. ಆದರೆ, ರೈತ ಸಂಪರ್ಕ ಕೇಂದ್ರಕ್ಕೆ ಬಂದಿರುವ ವಿವಿದ ಬೀಜ, ಸಾಮಗ್ರಿಗಳ್ಳುಗಳ ಮಾಹಿತಿ ನೀಡಲು ಅಧಿಕಾರಿಗಳು ಇಲ್ಲದಿರುವುದು ಕಂಡು ಬಂದಿತು. ತಾಲೂಕಿನ ಕೆಲವರು ನನಗೆ ದೂರವಾಣಿ ಮೂಲಕ ತಿಳಿಸಿ ಅಧಿಕಾರಿಗಳು ಸರಿಯಾಗಿ ಸಿಗುತ್ತಿಲ್ಲ. ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ ಎಂದು ನನ್ನ ಗಮನಕ್ಕೆ ತಂದಿದ್ದು, ಬರಿ ಕೋವಿಡ್‌19 ನೆಪ ಹೇಳುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾಲ್ಕು ಕಚೇರಿಗಳಿಗೆ ಭೇಟಿ ನೀಡಿದ್ದು, ಕೃಷಿ ಇಲಾಖೆ ಅಧಿ ಕಾರಿಗಳು ಇರಲಿಲ್ಲ. ಬಹುತೇಕ
ಅ ಧಿಕಾರಿಗಳು ಬರಿ ಕೋವಿಡ್‌19, ವಿಡಿಯೋ ಕಾನ್ಫೆರೆನ್ಸ್‌, ಸಂದರ್ಶನ ಹೀಗೆ ವಿವಿಧ ನೆಪ ಹೇಳಿ ಜನರಿಗೆ ಮತ್ತು ಜನಪ್ರತಿನಿಧಿ ಗಳಿಗೆ ಸಿಗುತ್ತಿಲ್ಲ.
ಹೀಗಾದರೆ ಜನಸಾಮಾನ್ಯರ ಗತಿ ಏನು? ಎಂದು ಪ್ರಶ್ನಿಸಿದರು. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ
ಶಿಸ್ತುಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಕೃಷಿ ಇಲಾಖೆಯ ಯೋಜನೆಗಳು ಕೆಲವೇ ಜನರಿಗೆ ಮಾತ್ರ ಸಿಗುತ್ತವೆ ಎಂದು ಕೆಲವರು ದೂರು ಸಲ್ಲಿಸಿದ್ದಾರೆ.  ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ಸಿಗಬೇಕು ಎಂದರು. ಈ ಅವ್ಯವಸ್ಥೆ ಕುರಿತು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರ
ಗಮನಕ್ಕೆ ತರಲಾಗುವುದು ಮತ್ತು ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಟಾಪ್ ನ್ಯೂಸ್

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

ದಾಂಡೇಲಿ:  ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ದಾಂಡೇಲಿ: ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

20kannada

ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮಹಾದೇವ ಮುರಗಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

19railway

ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ

18pejavara

ಹಿಂದೂಗಳಲ್ಲಿ ದೊಂಬಿತನದ ಪ್ರವೃತ್ತಿ ಇಲ್ಲ

MUST WATCH

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹೊಸ ಸೇರ್ಪಡೆ

ಮೊದಲ ದಿನ ಶಾಲೆಗೆ 51,809 ಮಕಳು ಹಾಜರಿ

ಮೊದಲ ದಿನ ಶಾಲೆಗೆ 51,809 ಮಕಳು ಹಾಜರಿ

shivamogga news

ನೆಡುತೋಪಿನಲ್ಲಿ ಆಕಸ್ಮಿಕ ಬೆಂಕಿ

shivamogga news

ಸಾಂಕ್ರಾಮಿಕ ರೋಗ ಶಂಕೆ: 35 ಕುರಿಗಳ ಸಾವು

ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ

ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ

chitradurga news

ಕನ್ನಡಿಗರಲ್ಲಿ ಆತ್ಮಾಭಿಮಾನ ಕೊರತೆ: ಲೀಲಾದೇವಿ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.