3 ದಶಕ ಕಳೆದರೂ ಗ್ರಂಥಾಲಯಕ್ಕಿಲ್ಲ ಸೂರು!

Team Udayavani, Oct 20, 2019, 12:29 PM IST

ಅಮೀನಗಡ: ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯರ ವಿಶ್ವವಿದ್ಯಾಲಯವಿದ್ದಂತೆ. ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ, ಓದಿನ ಬಗೆಗೆ ಅಭಿರುಚಿ ಬೆಳೆಸಲು ಸರ್ಕಾರ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದೆ. ಆದರೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಮೂರು ದಶಕಗಳು ಕಳೆದರೂ ಕೂಡ ಸ್ವಂತ ಕಟ್ಟಡವಿಲ್ಲ. ಇದರಿಂದ ನೂರಾರು ಗ್ರಂಥಗಳು ಮೂಲೆಯಲ್ಲಿ ಕೊಳೆಯುವಂತಾಗಿದೆ.

ಹೌದು, ಕರದಂಟು ನಗರ ಅಮೀನಗಡ ಪಟ್ಟಣದಲ್ಲಿ 2011 ಜನಗಣತಿ ಪ್ರಕಾರ 15,076 ಜನಸಂಖ್ಯೆ ಇದ್ದು, 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಅಮೀನಗಡ, ಗ್ರಾಪಂ ಇದ್ದಾಗಲೇ ಸುಮಾರು 32 ವರ್ಷಗಳ ಹಿಂದೆ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯಾಗಿದೆ. ಪಟ್ಟಣವು ಗ್ರಾಮ ಪಂಚಾಯತಿಯಿಂದ ಪಪಂ ಆಗಿ ಪರಿವರ್ತನೆಯಾದರೂ ಜ್ಞಾನಾರ್ಜನೆಗಾಗಿ ನಿರ್ಮಾಣವಾಗಿರುವ ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಸೂರು ಕಲ್ಪಿಸಿಲ್ಲ. ಶಿಥಿಲಗೊಂಡ ಪಪಂಗೆ ಸಂಬಂಧಪಟ್ಟ ಹಳೆ ಕಟ್ಟಡದಲ್ಲಿ ಗ್ರಂಥಾಲಯ ನಡೆಯುತ್ತಿದೆ.

ಇಲಾಖೆ ನಿರ್ಲಕ್ಷ್ಯಕ್ಕೆ: ಅಗತ್ಯ ಸೌಲಭ್ಯದ ಕೊರತೆಯಿಂದಾಗಿ ಓದುಗರು ಸಾರ್ವಜನಿಕ ಗ್ರಂಥಾಲಯದಿಂದ ದೂರ ಉಳಿದಿದ್ದಾರೆ. ಮೂರು ದಶಕಗಳು ಕಳೆದರೂ ಸ್ವಂತ ಕಟ್ಟಡ ಇಲ್ಲದಿರುವುದು ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸೌಲಭ್ಯಗಳ ಕೊರತೆ: ಸ್ಪರ್ಧಾತ್ಮಕ ಪರೀಕ್ಷೆಗಾಗಿ ಗ್ರಾಮೀಣ ಪ್ರದೇಶದ ಯುವಕರು ಇತ್ತೀಚೆ ಗೆ ಗ್ರಂಥಾಲಯಗಳನ್ನು ಅವಲಂಬಿಸುತ್ತಿದ್ದು, ಜ್ಞಾನ ದಾಹ ಇಂಗಿಸಬೇಕಾದ ಗ್ರಂಥಾಲಯಗಳು, ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಗ್ರಂಥಾಲಯಕ್ಕೆ ಕೇವಲ ಎರಡು ದಿನ ಪತ್ರಿಕೆಗಳು ಬರುತ್ತವೆ. ಪ್ರತಿದಿನ ಓದುಗರು ಗ್ರಂಥಾಲಯಕ್ಕೆ ಭೇಟಿ ನೀಡಿದರೂ, ಕನಿಷ್ಟ ಪಕ್ಷ ದಿನಪತ್ರಿಕೆಗಳೆಲ್ಲ ಇಲ್ಲಿ ಸಿಗುವುದಿಲ್ಲ. ಆದರೆ ಸೂಕ್ತ ವ್ಯವಸ್ಥೆಯಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಯಾವುದೇ ರೀತಿಯ ಪುಸ್ತಕಗಳು ಸಿಗುತ್ತಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲ. ಮೂಲಭೂತ ಸೌಲಭ್ಯಗಳು ಇಲ್ಲ, ಕೆಲ ಪುಸ್ತಗಳು ಮಾತ್ರ ಲಭ್ಯವಾಗುತ್ತವೆ. ಅವುಗಳು ಕೂಡ ಹೆಸರಿಗೆ ಮಾತ್ರ ಸೀಮಿತವಾಗಿವೆ.

ನಾಮಫಲಕವೇ ಇಲ್ಲ: ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಸುಮಾರು 1,500 ಪುಸ್ತಗಳು ಇವೆ. 375 ಜನರು ಸದಸ್ಯತ್ವ ಹೊಂದಿದ್ದಾರೆ. ಆದರೆ ಎರಡು ದಿನ ಪತ್ರಿಕೆಗಳು ಬಿಟ್ಟರೆ ಬೇರೆ ಪತ್ರಿಕೆಗಳು ಕಾಣಿಸುವುದಿಲ್ಲ. ಇದರಿಂದ ಓದುಗ ಮತ್ತು ಸಾರ್ವಜನಿಕರಿಗೆ ಗ್ರಂಥಾಲಯ ಉಪಯುಕ್ತ ಮಾಹಿತಿ ನೀಡದೆ ಬಣಗುಟ್ಟುತ್ತಿವೆ. ಗ್ರಂಥಾಲಯದ ಕಟ್ಟಡಕ್ಕೆ ನಾಮಫಲಕ ಮತ್ತು ವೇಳಾಪಟ್ಟಿ ಅಳವಡಿಸಿಲ್ಲ, ಹೀಗಾಗಿ ಸಮಯಕ್ಕೆ ಮಹತ್ವ ಕಲ್ಪಿಸದೇ ಇರುವುದರಿಂದ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಇಲಾಖೆ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು, ಸ್ವಂತ ಕಟ್ಟಡ ಹೊಂದಿ ಪತ್ರಿಕಾ ವಿಭಾಗ, ಪರಾಮರ್ಶನೆ ವಿಭಾಗ ಮಕ್ಕಳು, ಮಹಿಳಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ವಿಭಾಗ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕು ಎಂಬುದು ಪಟ್ಟಣದ ಜನರ ಒತ್ತಾಯ.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 372 ಓದುಗರುಸದಸ್ಯತ್ವ ಹೊಂದಿದ್ದಾರೆ.ಅನುದಾನಕ್ಕೆ ಅನುಗುಣವಾಗಿ ಸೌಲಭ್ಯ ಒದಗಿಸಲಾಗಿದೆ. ಹೊಸದಾಗಿ ನಾಮಫಲಕ ಮಾಡಿಸಲು ಕೊಟ್ಟಿದ್ದು, ಹಳೆಯ ಫಲಕ ತೆಗೆಯಲಾಗಿದೆ. ಗ್ರಂಥಾಲಯದ ಆಸ್ತಿಯ ಉತಾರ ಇದೆ. ಆದರೆ ಕಟ್ಟಡವಿಲ್ಲ. ಆದ್ದರಿಂದ ಪಪಂಗೆ ಸಂಬಂಧಿಸಿದ ಕಟ್ಟಡದಲ್ಲಿ ಗ್ರಂಥಾಲಯ ನಡೆಸುತ್ತಿದ್ದೇವೆ. ಪ್ರಕಾಶ ಚಳ್ಳಿಗಿಡದ, ಗ್ರಂಥಾಲಯ ಮೇಲ್ವಿಚಾರಕ

 

-ಎಚ್‌.ಎಚ್‌. ಬೇಪಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ...

  • ಬಾದಾಮಿ: ತಾಲೂಕಿನ ನೆರೆಪೀಡಿತ ಚೋಳಚಗುಡ್ಡ, ನಾಗರಾಳ ಎಸ್‌.ಬಿ., ಖ್ಯಾಡ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ಬೆಂಗಳೂರಿನ ಕಾರ್ಗಿಲ್‌...

  • ಗುಳೇದಗುಡ್ಡ: ಪಟ್ಟಣದ ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಕಚೇರಿ, ಪುರಸಭೆ ಕಚೇರಿಗಳಿಗೆನಿತ್ಯ ಒಂದಿಲ್ಲೊಂದು ಕೆಲಸಗಳಿಗೆ ನೂರಾರು ಜನರು ಬರುತ್ತಿದ್ದು, ವಿದ್ಯುತ್‌...

  • ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರುಹಂಗಾಮಿಗೆ 2019 ಡಿಸೆಂಬರ್‌ 1ರಿಂದ 2020ರ  ಮಾರ್ಚ್‌ 20ರ ವರೆಗೆ ವಾರಾಬಂದಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು...

  • ಮುಧೋಳ: ಟ್ರ್ಯಾಕ್ಟರ್‌ ಹಾಗೂ ಟಂಟಂಗಳಲ್ಲಿ ಕರ್ಕಶ ಶಬ್ದದಿಂದ ಜನರಿಗೆ ಆಗುವ ತೊಂದರೆ ತಪ್ಪಿಸಲು ತಾಲೂಕಿನ ಗ್ರಾಮ ಪಂಚಾಯತಗಳು ದಂಡ ವಿಧಿಸಿ ವಾಹನವನ್ನು ವಶಕ್ಕೆ...

ಹೊಸ ಸೇರ್ಪಡೆ