ಎತ್ತಿನ ಬಂಡಿಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ ಏಳು ಮಂದಿ ಸಾವು
Team Udayavani, Mar 10, 2018, 12:28 AM IST
ಅಮೀನಗಡ (ಬಾಗಲಕೋಟೆ): ಹುನಗುಂದ ತಾಲೂಕಿನ ರಸಕ್ಕಗಿ ಬಳಿ ಶುಕ್ರವಾರ ರಾತ್ರಿ ಎತ್ತಿನ ಬಂಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಡಿ ಛಿದ್ರವಾಗಿದ್ದು, ಎರಡು ಎತ್ತುಗಳು ಸಹ ಅಸುನೀಗಿವೆ.
ಮೃತರನ್ನು ಚಂದ್ರಯ್ಯ ಹಿರೇಮಠ (55), ರತ್ನವ್ವ ಚಂದ್ರಯ್ಯ ಹಿರೇಮಠ (45), ಕಾಶಮ್ಮ ಚಂದ್ರಯ್ಯ ಹಿರೇಮಠ (23), ವಿಜಯಲಕ್ಷ್ಮಿ ಚಂದ್ರಯ್ಯ ಹಿರೇಮಠ (18) ಹಾಗೂ ಸಿದ್ದಮ್ಮ ಮಾರತಾಂಡಪ್ಪ ಹೂಗಾರ (65), ಗಂಗಮ್ಮ ಮಲ್ಲಪ್ಪ ಹೂಗಾರ (65), ಬಸವ್ವ ಗೊರವರ (65) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸಂಗನಬಸಮ್ಮ ಪಂಪಯ್ಯ ಮಠ, ಗಂಗವ್ವ ಭೀಮಪ್ಪ ಗೌಡರ ಅವರನ್ನು ಅಮೀನಗಡ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ರಕ್ಕಸಗಿ ಗ್ರಾಮದವರಾಗಿದ್ದು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದ ಸದಸ್ಯರೆಲ್ಲರೂ ಎತ್ತಿನ ಬಂಡಿಯಲ್ಲಿ ಬೆಳಗ್ಗೆಯೇ ಹೊಲಕ್ಕೆ ತೆರಳಿದ್ದರು.
ಇಡೀ ದಿನ ಹೊಲದಲ್ಲಿ ತೊಗರಿ ಕೀಳುವ ಕಾರ್ಯ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದರು. ರಕ್ಕಸಗಿ ಗ್ರಾಮಕ್ಕೆ ಸಾಗುವಾಗ ತೊಗರಿ ಮೂಟೆಗಳನ್ನು ತುಂಬಿಕೊಂಡು ಹುನಗುಂದದಿಂದ ಬಾಗಲಕೋಟೆಗೆ ಬರುತ್ತಿದ್ದ ಲಾರಿ ಹಿಂದಿನಿಂದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!
ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ
ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ
ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ
ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ