ಮತ ಎಣಿಕೆ ಜವಾಬ್ದಾರಿಯಿಂದ ನಿರ್ವಹಿಸಿ

Manage vote count responsibly

Team Udayavani, May 21, 2019, 7:20 AM IST

ಬಾಗಲಕೋಟೆ: ನಗರದಲ್ಲಿ ನಡೆದ ಮತ ಎಣಿಕೆ ವಿಧಾನ ಕುರಿತು ಕೊನೆಯ ಹಂತದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್‌. ರಾಮಚಂದ್ರನ್‌ ಮಾತನಾಡಿದರು.

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ಬಾಗಲಕೋಟೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರಿಗೆ ಹಮ್ಮಿಕೊಂಡ ಮತ ಎಣಿಕೆ ವಿಧಾನ ಕುರಿತು ಕೊನೆಯ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೋಟಗಾರಿಕೆ ವಿವಿಯಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದ 8 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಮತ ಎಣಿಕೆಗೆ ಸಂಬಂಧಿಸಿದ ಯಾವುದೇ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಮತದಾನದ ರಹಸ್ಯ ಕಾಪಾಡತಕ್ಕದ್ದು ಎಂದರು.

ಪ್ರತಿ ಮತಕ್ಷೇತ್ರಕ್ಕೆ 14 ಟೇಬಲ್ಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಟೇಬಲ್ಗೆ ತಲಾ ಒಬ್ಬರಂತೆ ಮತ ಎಣಿಕಾ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಒಟ್ಟು 8 ಮತಕ್ಷೇತ್ರಗಳಿದ್ದು, ಮತ ಎಣಿಕೆ ಕಾರ್ಯಕ್ಕೆ ಪ್ರತಿ ಮತಕ್ಷೇತ್ರಗಳಿಗೆ 16 ಜನ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಬೆಳಗಿನ ಉಪಹಾರ, ಟೀ ಹಾಗೂ ಮಧ್ಯಾಹ್ನದ ಊಟ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದ್ದು, ಮತ ಎಣಿಕಾ ಕೇಂದ್ರದೊಳಗೆ ಬರುವ ಪ್ರತಿಯೊಬ್ಬರು ಆಯಾ ಪ್ರವೇಶದ್ವಾರ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಮೊಬೈಲ್ ಡಿಪಾಜಿಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಉಹಾಪೋಹಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗದರ್ಶನದನ್ವಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಿದರು.

ಮಾಸ್ಟರ್‌ ಟ್ರೈನರ್ ಗಂಗಾಧರ ದಿವಟರ್‌ ಮತ ಎಣಿಕೆಗೆ ಸಂಬಂಧಿಸಿದಂತೆ ಎಣಿಕೆ ಟೇಬಲ್, ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ವಿಧಾನ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೂಡಿಬಂದ ಸಂದೇಶಗಳು, ವಿಶೇಷ ಪ್ರಕರಣ, ಮತದಾನ ಖಾತ್ರಿ ಯಂತ್ರದಲ್ಲಿ ಮತ ಎಣಿಕೆ ವಿಧಾನ, ಅಂಚೆ ಮತಪತ್ರಗಳ ಎಣಿಕೆ, ಮತದಾನದ ಗೌಪ್ಯತೆ ಕುರಿತು ವಿವರಿಸಿದರು.

ಅಪರ ಜಿಲಾಧ್ಲಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಎಚ್.ಜಯಾ, ಇಕ್ರಮ ಸೇರಿದಂತೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ಮತ ಎಣಿಕಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮತ ಎಣಿಕೆ ರಸ್ತೆ ಮಾರ್ಗ ಬದಲಾವಣೆ:

ಮೇ 23ರಂದು ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಆದೇಶ ಹೊರಡಿಸಿದ್ದಾರೆ. ಅಂದು ಬೆಳಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಬಾಗಲಕೋಟೆ ನವನಗರದ ಬೈಪಾಸ್‌ ರಸ್ತೆಯ ಮೂಲಕ ಸೀಮಿಕೇರಿ ಕ್ರಾಸ್‌ ಕಡೆಗೆ ತೆರಳುವ ವಾಹನಗಳಿಗೆ ಉತ್ತರಾಧಿಮಠ ಕ್ರಾಸ್‌ ಹತ್ತಿರ ಬಲಕ್ಕೆ ತಿರುಗಿ ಗದ್ದನಕೇರಿ ರಸ್ತೆಗೆ ಕೂಡಿಕೊಂಡು ಹುಬ್ಬಳ್ಳಿ ಕಡೆಗೆ ಹೋಗುವಂತೆ ಮತ್ತು ಸೀಮಿಕೇರಿ ಕ್ರಾಸ್‌ ಮೂಲಕ ಬೈಪಾಸ್‌ ಮೂಲಕ ನವನಗರ ಕಡೆಗೆ ಬರುವ ವಾಹನಗಳಿಗೆ ನೇರವಾಗಿ ಗದ್ದನಕೇರಿ ಕ್ರಾಸ್‌ ಮುಖಾಂತರ ಬಾಗಲಕೋಟೆ ನಗರಕ್ಕೆ ಪ್ರವೇಶಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಉತ್ತರಾಧಿಮಠದ ಕ್ರಾಸ್‌ದಿಂದ ಸಿಮಿಕೇರಿ ಕ್ರಾಸ್‌ವರೆಗಿನ ರಸ್ತೆಯ ಮೂಲಕ ಚುನಾವಣೆಗೆ ಸಂಬಂಧಿಸಿದ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಮಖಂಡಿ: ಮಹಾರಾಷ್ಟ್ರದಲ್ಲಿ ಜು.27ರಿಂದ ಆ.18ರ ವರೆಗೆ ಸತತವಾಗಿ ಧಾರಾಕಾರ ಸುರಿದ ಮಳೆಯಿಂದ ತಾಲೂಕಿನ ಕೃಷ್ಣಾನದಿ ನಿರೀಕ್ಷೆಗೂ ಮೀರಿ ಹರಿದ ಪರಿಣಾಮ ಜನ-ಜಾನುವಾರುಗಳ...

  • ಮಲ್ಲೇಶ ಆಳಗಿ ಜಮಖಂಡಿ: ಅವತ್ತ ಬುಧವಾರ ರಾತ್ರಿ ಇತ್ರಿ. ನೀರು ಜಾಸ್ತಿ ಬರಬಹುದು, ನೀವು ಮನಿ ಖಾಲಿ ಮಾಡಬೇಕ್ರಿ ಅಂತ ಪಂಚಾಯಿತಿಯವರು ಹೇಳಿದ್ರು. ಒಮ್ಮೀ ನೀರ್‌...

  • ಜಮಖಂಡಿ: ನೆರೆ ನೆರವು ಸಂದಾಯ ಯೋಜನೆ ಅಡಿಯಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸಿದ 9744 ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳಂತೆ ಈಗಾಗಲೇ...

  • ಅಮೀನಗಡ: ರಾತ್ರಿ ಮಲಕೊಂಡಾಗ ಏಕಾಏಕಿ ನೀರ ಬಂತ್ರಿ. ಉಟ್ಟ ಬಟ್ಟೆಯಲ್ಲಿ ಎದ್ದು ಹೊರಗ ಬಂದಿವಿ. ಹೊರಗ ಬಂದ ಎತ್ತರದ ಪ್ರದೇಶಕ್ಕ ಹೋಗಿ ಕುಂತೇವ್ರಿ. ಬೆಳಕು ಹರಿಯುವುದು...

  • ಬಾಗಲಕೋಟೆ: ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಮನೆ ಕಲ್ಪಿಸಲು 5 ಲಕ್ಷ ನೀಡುವ ಯೋಜನೆಯನ್ನು ಒಂದು ಕುಟುಂಬದಲ್ಲಿ ಅಣ್ಣ-ತಮ್ಮಂದಿರು ಇದ್ದರೆ...

ಹೊಸ ಸೇರ್ಪಡೆ