ಸರಕಾರಿ ಕನ್ನಡ ಶಾಲೆಗೆ ಮೆಟ್ರೋ ರೈಲಿನ ಬಣ್ಣ 

Team Udayavani, Dec 14, 2018, 5:30 PM IST

14-december-20.gif

ಬನಹಟ್ಟಿ: ಮಕ್ಕಳನ್ನು ಆಕರ್ಷಿಸಲು ಇಲ್ಲಿಯ ಕೆಎಚ್‌ಡಿಸಿ ಕಾಲೋನಿಯ ಸರಕಾರಿ ಕನ್ನಡ ಶಾಲೆಗೆ ಮೆಟ್ರೋ ರೈಲಿನ ಬಣ್ಣ ಬಳಿಯಲಾಗಿದೆ. ಇಲ್ಲಿನ ನಾಗರಿಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಮುಖ್ಯಗುರುಗಳ, ಸಹ ಶಿಕ್ಷಕರ ಸಹಕಾರದಿಂದ ಇಲ್ಲಿನ ಶಾಲೆಗೆ ಮೆಟ್ರೋ ಬಣ್ಣ ಬಳಿಯುವ ಮೂಲಕ ಅತಿ ವೇಗದ ಜ್ಞಾನದ ಕಲಿಕೆಗೆ ಮತ್ತು ಆಕರ್ಷಣಿಯವಾಗುವಂತೆ ಮಾಡಿದ್ದಾರೆ.

ಈ ರೈಲಿಗೆ ಸಭಾಂಗಣ ನಿಲ್ದಾಣ ಕಾರ್ಯಾಲಯ ನಿಲ್ದಾಣ, ಶಾಲಾ ಡ್ರೆಸ್‌ ಕೋಡ್‌ ಹೀಗೆ ನಿಲ್ದಾಣಗಳ ಹೆಸರು ಅಲ್ಲಲ್ಲಿ ಬರೆಯಲಾಗಿದೆ. ಮಕ್ಕಳಿಗೆ ಬೆಳಗ್ಗೆ ಶಾಲೆ ಆರಂಭದ ಗಂಟೆ ಬಾರಿಸುವುದಷ್ಟೆ ತಡ ಥಟ್ಟ ಅಂತ ಮೆಟ್ರೋ ರೈಲು ಎದುರು ಓಡಿ ಬಂದು ಪ್ರಾರ್ಥನೆಗೆ ನಿಲ್ಲುವರು. ಪ್ರಾರ್ಥನೆ ಮುಗಿದ ತಕ್ಷಣ ಮೆಟ್ರೋ ರೈಲು ಹತ್ತಲು ಮಕ್ಕಳು ಸರದಿಯಲ್ಲಿ ಸಜ್ಜಾಗಿ ನಿಂತು ಬಿಡುತ್ತಾರೆ. ಇದು ರೈಲು ನಿಲ್ದಾಣದಲ್ಲಿ ನಿಂತ ಹಾಗೆ ಭಾಸವಾಗಿ ಮಕ್ಕಳು ರೈಲಿನಲ್ಲಿ ಹತ್ತುವರು. ನಂತರ ವಿಶ್ರಾಮದ ಗಂಟೆ, ಭೋಜನದ ಗಂಟೆ, ಶಾಲೆ ಬಿಡುವ ಗಂಟೆ ಭಾರಿಸಿದ ತಕ್ಷಣ ಮುಂದಿನ ಊರು ಅಥವಾ ನಿಲ್ದಾಣ ಬಂತೆಂದು ಭಾವಿಸಿ ಇಳಿಯುವರು.

ಶಾಲೆಯಲ್ಲಿ ನಿತ್ಯ ಪ್ರಾರ್ಥನೆ ವೇಳೆಯಲ್ಲಿ ಪಂಚಾಂಗ ಪಠಣ ಸಾಮಾನ್ಯ. ಈ ಶಾಲೆಯಲ್ಲಿ ಪ್ರಚಲಿತ ವಿದ್ಯಮಾನಗಳ ಹಾಗೂ ರಸಪ್ರಶ್ನೆಯಂತಹ ಕಾರ್ಯಕ್ರಮಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಪ್ರಾರ್ಥನೆ ವೇಳೆಯಲ್ಲಿಯೆ ಅನೇಕ ಮಾಹಿತಿ ಪಡೆದುಕೊಳ್ಳಲು ನೆರವಾಗುತ್ತಿದೆ.

ಕೆಎಚ್‌ಡಿಸಿ ಶಾಲೆಗೆ ಮೆಟ್ರೋ ರೈಲಿನ ಬಣ್ಣ ಬಳಿದಿರುವುದು ಮಕ್ಕಳಿಗೆ ಖುಷಿ ಕೊಡುವಂತಹ ವಿಚಾರ, ಮಕ್ಕಳು ಸುಂದರ ಬದುಕನ್ನು ಕಟ್ಟಿಕೊಡುವಂತಹ ಶಿಕ್ಷಣ ನೀಡಲು ಶಿಕ್ಷಕರು ಮತ್ತಷ್ಟು ಕಾರ್ಯೋನ್ಮುಖರಾಗಿ ಪ್ರಯತ್ನಿಸಬೇಕು.
. ಸಿದ್ದು ಸವದಿ, ಶಾಸಕರು 

ಶಾಲೆ ಗೋಡೆಗೆ ಮೆಟ್ರೋ ರೈಲಿನ ಬಣ್ಣ ಬಳಿಯುವ ಮೂಲಕ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ನೆರವಾಗಿದೆ. ಶಿಕ್ಷಕರು ಕಲಿಕೆಯಲ್ಲಿ ವಿನೂತನ ಪ್ರಯೋಗ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು.
.ಎಂ. ಬಿ. ಮೋರಟಗಿ,
ಕ್ಷೇತ್ರ ಶಿಕ್ಷಣಾಧಿಕಾರಿ

ಮಕ್ಕಳ ಸುಂದರ ಭವಿಷ್ಯದ ಏಳ್ಗೆಗಾಗಿ ವಿನೂತನ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಇಲ್ಲಿನ ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು.
. ವಿಜಯಕುಮಾರ ವಂದಾಲ,
 ಕ್ಷೇತ್ರ ಸಮನ್ವಯಾಧಿಕಾರಿ.

ಹೊಸತನದ ರಂಗು ಮಕ್ಕಳಲ್ಲಿ ಮೂಡಬೇಕು, ಅದು ಆಕರ್ಷಣಿಯವಾಗಿರಬೇಕು. ಮಕ್ಕಳು ತಪ್ಪದೆ ಶಾಲೆಗೆ ನಿಯಮಿತವಾಗಿ ಬರುವಂತಾಗಲಿ, ಅವರು ಶಿಸ್ತು ಕಂಡುಕೊಳ್ಳಬೇಕು ಎಂಬ ಕಾರಣದಿಂದ ಎಲ್ಲ ಶಿಕ್ಷಕರ ಎಸ್‌ಡಿಎಂಸಿಯವರ ಸಹಕಾರ ಪಡೆದು ಮೆಟ್ರೊ ರೈಲಿನ ಬಣ ¡ಬಳಿದಿದ್ದೇವೆ. ಇದು ಈಗ ಮಕ್ಕಳ ಗಮನವನ್ನಷ್ಟೆ ಅಲ್ಲ ಶಾಲೆ ನೋಡುಗರ ಗಮನ ಸೆಳೆಯುತ್ತಿದೆ.
.ಬಿ. ಎಂ. ಪಾಟೀಲ,
ಮುಖ್ಯಗುರುಗಳು

ಹೊಸ ಹೊಸ ಮಾದರಿಯ ಶಿಕ್ಷಕರ ಪ್ರಯೋಗಗಳು ಮಕ್ಕಳಿಗೆ ಮನ ಮುಟ್ಟಲಿ. ಇಂತಹ ಒಳ್ಳೆಯ ಪ್ರಯತ್ನಗಳು ಇನ್ನೊಂದು ಶಾಲೆಗೆ ಮಾದರಿಯಾಗಲಿ.
.ಶ್ರೀಶೈಲ ಬುರ್ಲಿ,
ಶಿಕ್ಷಣ ಸಂಯೋಜಕ

ಟಾಪ್ ನ್ಯೂಸ್

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ

ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ

ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ

ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24problems

ದುಃಖಕ್ಕೆ ದುಶ್ಚಟಗಳು ಪರಿಹಾರವಲ್ಲ

23bus

ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ತರಬೇತಿ!

20road

ಇಕ್ಕಟ್ಟಾದ ರಸ್ತೆಯಲ್ಲಿ ಕಗ್ಗಂಟಾದ ಸಂಚಾರ

19streetlight

ಗದ್ದನಕೇರಿ ಕ್ರಾಸ್‌ನಲ್ಲಿ ಕತ್ತಲು!

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

incident held at hanooru

ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿ ಗಾಂಜಾ ವಶ: ಆರೋಪಿ ಪರಾರಿ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.