ನಾನು ಚೆಂಡಿದ್ದಂತೆ ನೆಲಕ್ಕೆ ಎಸೆದಷ್ಟು ಪುಟಿದೇಳುವೆ’
Team Udayavani, Feb 13, 2021, 3:59 PM IST
ಬಾಗಲಕೋಟೆ: ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಶ್ರೀರಾಮುಲು ಮಂಕಾಗಿಲ್ಲ. ನಾನು ಹಿಂದೆ ಸರಿದಿದ್ದೇನೆ ಎಂದೂ ಅಲ್ಲ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಆ ಪಕ್ಷವನ್ನು ಒಬ್ಬ ಶ್ರೀರಾಮುಲು ಎನ್ನುವ ವ್ಯಕ್ತಿಯ ಶಕ್ತಿಯಿಂದ ನೆಲಸಮ ಮಾಡಿದ್ದಾನೆ. ಬಿಜೆಪಿ ಶಕ್ತಿಯೂ ಅನಾವರಣವಾಗಿದೆ. ಚೆಂಡಿನಂತೆ ಪುಟಿದೇಳುವ ಶಕ್ತಿ ಈ ಶ್ರೀರಾಮುಲುಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಬಾದಾಮಿ ತಾಲೂಕು ಮುಷ್ಠಿಗೇರಿಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ 19.33 ಕೋಟಿ ವೆಚ್ಚದ ಡಾ|ಅಂಬೇಡ್ಕರ ವಸತಿ ನಿಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಾರೂ ಕುಗ್ಗಿಸಲು ಆಗಲ್ಲ. ನಾನು ಕೇವಲ ಒಂದು ತಾಲೂಕು, ಜಿಲ್ಲೆಯ ನಾಯಕನಲ್ಲ. ರಾಜ್ಯಮಟ್ಟದ ನಾಯಕ. ಚೆಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ ಹಾಗೆಯೇ ಈ ಶ್ರೀರಾಮುಲು. ಚೆಂಡಿನಂತೆ ವೇಗವಾಗಿ ಜಿಗಿಯುವ ಶಕ್ತಿ ಆ ದೇವರು ನನಗೆ ಕೊಟ್ಟಿದ್ದಾನೆ. ನೆಲಕ್ಕೆ ಬಿದ್ದರೂ ಮೇಲೆ ಎದ್ದು ಬರುವ ಶಕ್ತಿ ದೇವರು-ನಾಡಿನ ಜನರು ಕೊಟ್ಟಿದ್ದಾರೆ ಎಂದರು.
ಸಿಎಂ ಬದಲಾವಣೆ ಇಲ್ಲ: ಮುಖ್ಯಮಂತ್ರಿ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಶಾಸಕರು ಪತ್ರ ಬರೆದಿದ್ದಾರೆ ಎನ್ನುವುದೆಲ್ಲಾ ಸುಳ್ಳು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪವೂ ಇಲ್ಲ. ನಮ್ಮದು ಶಿಸ್ತಿನ ಪಕ್ಷ ಎಂದರು.
ಡಿಸಿಎಂ ಸ್ಥಾನ ಸಿಗುವ ವಿಶ್ವಾಸ: ಬಿಜೆಪಿಯಲ್ಲಿ ಕಾಲಕ್ಕೆ ತಕ್ಕಂತೆ ಅವಕಾಶ ದೊರೆಯುತ್ತವೆ. ನೋಡೋಣ ಮುಂದಿನ ದಿನಗಳಲ್ಲಿ ನನಗೂ ಡಿಸಿಎಂ ಸ್ಥಾನ ಕೊಡಬಹುದು. ನಮ್ಮನ್ನು ಪಕ್ಷದಲ್ಲಿ ಬಳಸಿ ಕೈ ಬಿಡುತ್ತಾರೆ ಅಂತಿಲ್ಲ. ನಾವೆಲ್ಲ ತಳ ವರ್ಗದಿಂದ ಬಂದವರು. ನಾನು ಯಾವಾಗಲೂ ಪಕ್ಷ ಹೇಳಿದ ಹಾಗೆ ನಡೆದುಕೊಂಡಿದ್ದೇನೆ. ಸರ್ಕಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ಎರಡು ಅವಕಾಶ ಮಾಡಿಕೊಡಲಾಗಿದೆ ಎಂದರು.
ನಾನು ಹಿಂದೆ ಸರಿದಿದ್ದೇನೆ ಎಂದೂ ಅಲ್ಲ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಆ ಪಕ್ಷವನ್ನು ಒಬ್ಬ ಶ್ರೀರಾಮುಲು ಎನ್ನುವ ವ್ಯಕ್ತಿಯ ಶಕ್ತಿಯಿಂದ ನೆಲಸಮ ಮಾಡಿದ್ದಾನೆ. ಬಿಜೆಪಿ ಶಕ್ತಿಯೂ ಅನಾವರಣವಾಗಿದೆ. ಚೆಂಡಿನಂತೆ ಪುಟಿದೇಳುವ ಶಕ್ತಿ ಈ ಶ್ರೀರಾಮುಲುಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು. ಬಾದಾಮಿ ತಾಲೂಕು ಮುಷ್ಠಿಗೇರಿಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಅವರೊಂದಿಗೆ 19.33 ಕೋಟಿ ವೆಚ್ಚದ ಡಾ|ಅಂಬೇಡ್ಕರ ವಸತಿ ನಿಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಾರೂ ಕುಗ್ಗಿಸಲು ಆಗಲ್ಲ. ನಾನು ಕೇವಲ ಒಂದು ತಾಲೂಕು, ಜಿಲ್ಲೆಯ ನಾಯಕನಲ್ಲ. ರಾಜ್ಯಮಟ್ಟದ ನಾಯಕ. ಚೆಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ ಹಾಗೆಯೇ ಈ ಶ್ರೀರಾಮುಲು. ಚೆಂಡಿನಂತೆ ವೇಗವಾಗಿ ಜಿಗಿಯುವ ಶಕ್ತಿ ಆ ದೇವರು ನನಗೆ ಕೊಟ್ಟಿದ್ದಾನೆ. ನೆಲಕ್ಕೆ ಬಿದ್ದರೂ ಮೇಲೆ ಎದ್ದು ಬರುವ ಶಕ್ತಿ ದೇವರು-ನಾಡಿನ ಜನರು ಕೊಟ್ಟಿದ್ದಾರೆ ಎಂದರು.
ಸಿಎಂ ಬದಲಾವಣೆ ಇಲ್ಲ: ಮುಖ್ಯಮಂತ್ರಿ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಶಾಸಕರು ಪತ್ರ ಬರೆದಿದ್ದಾರೆ ಎನ್ನುವುದೆಲ್ಲಾ ಸುಳ್ಳು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪವೂ ಇಲ್ಲ. ನಮ್ಮದು ಶಿಸ್ತಿನ ಪಕ್ಷ ಎಂದರು.
ಡಿಸಿಎಂ ಸ್ಥಾನ ಸಿಗುವ ವಿಶ್ವಾಸ: ಬಿಜೆಪಿಯಲ್ಲಿ ಕಾಲಕ್ಕೆ ತಕ್ಕಂತೆ ಅವಕಾಶ ದೊರೆಯುತ್ತವೆ. ನೋಡೋಣ ಮುಂದಿನ ದಿನಗಳಲ್ಲಿ ನನಗೂ ಡಿಸಿಎಂ ಸ್ಥಾನ ಕೊಡಬಹುದು. ನಮ್ಮನ್ನು ಪಕ್ಷದಲ್ಲಿ ಬಳಸಿ ಕೈ ಬಿಡುತ್ತಾರೆ ಅಂತಿಲ್ಲ. ನಾವೆಲ್ಲ ತಳ ವರ್ಗದಿಂದ ಬಂದವರು. ನಾನು ಯಾವಾಗಲೂ ಪಕ್ಷ ಹೇಳಿದ ಹಾಗೆ ನಡೆದುಕೊಂಡಿದ್ದೇನೆ. ಸರ್ಕಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ಎರಡು ಅವಕಾಶ ಮಾಡಿಕೊಡಲಾಗಿದೆ ಎಂದರು.
ಸಿದ್ದುಗೆ ಸಿಎಂ ಖುರ್ಚಿಗೆ ಹಾರಲು ಆಸಕ್ತಿ :
ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಅವರಿಗೆ ಬರೀ ಸಿಎಂ ಖುರ್ಚಿ ಕಾಣುತ್ತಿದೆ. ಹೇಗಾದರೂ ಮಾಡಿ ಆ ಖುರ್ಚಿಗೆ ಹಾರಬೇಕು ಎಂದು ಕಾಯುತ್ತಿದ್ದಾರೆ.
ಅಧಿಕಾರಕ್ಕೆ ಬರುವುದೇ ನಮ್ಮ ಗುರಿಯಲ್ಲ. ಜನರ ಹಿತದೃಷ್ಟಿಯಿಂದ ಬಡವರು, ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತಿದ್ದಾರೆ. ಒಂದು ಉಪ ಚುನಾವಣೆ ಗೆದ್ರೆ ಸಾಕು ಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಬಯಸುತ್ತಾರೆ. ಆದರೆ, ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಮುಂದಿನ ಉಪ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ.
ಚಾಮುಂಡೇಶ್ವರಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡು ಬಾದಾಮಿಗೆ ಬಂದಿದ್ದಾರೆ. ಸೋಲಿನ ಹತಾಶೆಯಿಂದ ಭಯ-ಭೀತಿಯಿಂದ ಇಲ್ಲಿಗೆ ಬಂದಿದ್ದಾರೆ. ಕೆಲವೇ ಅಂತರದಿಂದ ನನ್ನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದೆ ಎಂದು ನೋಡಿಕೊಳ್ಳಲಿ ಎಂದರು.