ಶಾಸಕ ಸಿದ್ದು ಸವದಿಯಿಂದ ಕೋವಿಡ್ ಜನಜಾಗೃತಿ
Team Udayavani, Apr 29, 2021, 5:53 PM IST
ಮಹಾಲಿಂಗಪುರ: ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಮಂಗಳವಾರ ರಾತ್ರಿ ಮಹಾಲಿಂಗಪುರ ಪಟ್ಟಣದ ವಿವಿಧ ವೃತ್ತಗಳಲ್ಲಿ ತಮ್ಮ ವಾಹನದ ಮೇಲೆಯೇ ನಿಂತು ಧ್ವನಿವರ್ಧಕದ ಮೂಲಕ ಪಟ್ಟಣದ ಜನತೆಯು 14 ದಿನಗಳ ಕೊರೊನಾ ಕರ್ಫ್ಯೂ ವೇಳೆ ಮನೆಯಲ್ಲಿಯೇ ಇದ್ದು ಕೊರೊನಾ ತಡೆಗಟ್ಟಬೇಕೆಂದು ಜನಜಾಗೃತಿ ಮೂಡಿಸಿದರು.
ಯಾರು ಅನಗತ್ಯವಾಗಿ ಸಂಚರಿಸಬಾರದು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೆ„ಜ್ ಬಳಕೆ ಮತ್ತು ಸಾಮಾಜಿಕ ಅಂತರ ಪಾಲನೆಗೆ ವಿನಂತಿಸಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ, ಕಂದಾಯಅಧಿ ಕಾರಿ ಬಸವರಾಜ ತಾಳಿಕೋಟಿ, ಸಿಪಿಐ ಕರುಣೇಶಗೌಡ, ಮಹಾಲಿಂಗಪುರ ಪುರಸಭೆ ಮುಖ್ಯಾ ಧಿಕಾರಿ ಎಚ್.ಎಸ್.ಚಿತ್ತರಗಿ, ಪಿಎಸ್‌ಐ ಆನಂದ ಆದಗೊಂಡ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ಬಿಜೆಪಿ ಮುಖಂಡರಾದ ಶಿವಾನಂದ ಅಂಗಡಿ, ಶಿವಾನಂದ ಹುಣಶ್ಯಾಳ ಇದ್ದರು.