ಮುದ್ದೇಬಿಹಾಳ: ಪತ್ನಿ ಸಮೇತ ನೇಣಿಗೆ ಶರಣಾದ ಯುವ ಪತ್ರಕರ್ತ
ನೆಲದ ತುಂಬೆಲ್ಲ ಅನ್ನ ಚಲ್ಲಾಡಿರುವ ಕುರುಹು...
Team Udayavani, Nov 27, 2022, 11:16 PM IST
ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿ ಪಕ್ಕದ ಮುರಾಳ ಅವರ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ದೃಶ್ಯ ಮಾಧ್ಯಮದ ಯುವ ಪತ್ರಕರ್ತ ತಿಪ್ಪಣ್ಣ ಸಿದ್ದಪ್ಪ ಹೊಸಮನಿ (34) ಮತ್ತು ಆತನ ಪತ್ನಿ ಸುಜಾತಾ (30) ಅಕ್ಕಪಕ್ಕದ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ರಾತ್ರಿ 10-30 ಗಂಟೆಯ ಸುಮಾರು ಬೆಳಕಿಗೆ ಬಂದಿದೆ.
ತಿಪ್ಪಣ್ಣನು ಸುದ್ದಿ ವಾಹಿನಿಯೊಂದರಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕೊಣ್ಣೂರು ಗ್ರಾಮದ ತಿಪ್ಪಣ್ಣ ಕಳೆದ 4-5 ತಿಂಗಳ ಹಿಂದಷ್ಟೇ ಹಡಲಗೇರಿ ಹತ್ತಿರ ಇರುವ ಶ್ರೀ ಪದ್ಮಾವತಿ ದೇವಸ್ಥಾನದಲ್ಲಿ ತನ್ನದೇ ಸಮುದಾಯದ ಕೆಸಾಪೂರ ಗ್ರಾಮದ ಪ್ರೀತಿಸಿದ ಯುವತಿಯೊಂದಿಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ. ಗಂಡ, ಹೆಂಡತಿ ಇಬ್ಬರೂ ಇಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಘಟನೆ ಮಾಹಿತಿ ಪಡೆದು ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗ ತಾನೆ ಮನೆಯಲ್ಲಿ ಅಡುಗೆ ಮಾಡಿದ್ದು ನೆಲದ ತುಂಬೆಲ್ಲ ಅನ್ನ ಚಲ್ಲಾಡಿರುವ ಕುರುಹು ಇದೆ. ಬಹುಶ: ಗಂಡ, ಹೆಂಡತಿ ಇಬ್ಬರೂ ಯಾವುದೋ ವಿಷಯಕ್ಕೆ ಜಗಳಾಡಿಕೊಂಡು ಹೀಗೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?
ನಿನ್ನೆ ರಾತ್ರಿಯೇ ಅಮಿತ್ ಶಾ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ ರಮೇಶ ಜಾರಕಿಹೊಳಿ
ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಂ ರಾಜೀನಾಮೆ ವದಂತಿ
ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ
ಟ್ರಾಫಿಕ್ ದಂಡ ಪಾವತಿಗೆ ಭರ್ಜರಿ ರಿಯಾಯಿತಿ