ಜಲಾವೃತಗೊಂಡ ಗೋವನಕೊಪ್ಪ ಹಳೆ ಸೇತುವೆ: ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

Team Udayavani, Aug 13, 2022, 6:57 PM IST

ಜಲಾವೃತಗೊಂಡ ಗೋವನಕೊಪ್ಪ ಹಳೆ ಸೇತುವೆ: ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಕುಳಗೇರಿ ಕ್ರಾಸ್ (ಬಾಗಲಕೋಟೆ) :  ನವಿಲುತಿರ್ಥ ಜಲಾಶಯದ ಮೇಲ್ಬಾಗದಲ್ಲಿ ಸುರಿಯುತ್ತಿರುವ ಮಳೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ಜಿಲ್ಲೆಯ ಗಡಿ ಭಾಗದ ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 218 ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಜಲಾವೃತಗೊಂಡಿದೆ.

ನವಿಲುತಿರ್ಥ ಜಲಾಶಯದಿಂದ 5594 ಕ್ಯೊಸೆಕ್ ನೀರು ಹರಿಬಿಡಲಾಗಿದ್ದು ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಜಲಾವೃತಗೊಂಡಿವೆ.

ಬಾಗಲಕೋಟೆ-ಗದಗ ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಸದ್ಯ ಗೋವಿನಜೋಳ, ಈರುಳ್ಳಿ, ಕಬ್ಬು, ಸೂರ್ಯಕಾಂತಿ, ಹೆಸರು ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಪೇರಲ ಮುಂತಾದ ಬೆಳೆಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ರೈತರಲ್ಲಿ ಆತಂಕ ಮನೆಮಾಡಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಬಾರ್‌ ಮುಂದೆ ಹೆಚ್ಚಾದ ಅಪಘಾತ; ಬಾರ್‌ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಸದ್ಯ ಮಲಪ್ರಭಾ ಪ್ರವಾಹದ ನೀರು ಹೆಚ್ಚುತ್ತಿದ್ದು ನದಿ ಪಾತ್ರದಲ್ಲಿನ ರೈತರು ಪಂಪ್‌ಸೆಟ್ ಜಾನುವಾರು ಸೇರಿದಂತೆ ತಮ್ಮ ಸಲಕರಣೆಗಳನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ತಾವು ಬೆಳೆದ ಪೇರಳೆ ಹಣ್ಣುಗಳನ್ನು ಬಿಡಿಸಿ ಅಗ್ಗದ ಬೆಲೆಗೆ ಮಾರುತ್ತಿದ್ದಾರೆ. ಹಣ್ಣುಗಳನ್ನು ಮೊದಲು ತೆಗೆದುಕೊಂಡು ಹೋಗುವಂತೆ ರೈತರು ವ್ಯಾಪಾರಸ್ಥರಲ್ಲಿ ಅಂಗಲಾಚುತ್ತಿದ್ದಾರೆ.

ಕಳೆದ ಬಾರಿ ಬೆಳೆದಿದ್ದ ಉತ್ತಮ ಬೆಳೆಗಳು ರೈತರ ಕೈ ಸೇರುವ ಸಂದರ್ಭದಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಸದ್ಯ ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಾದಾಮಿ ತಹಸಿಲ್ದಾರ ಜೆ ಬಿ ಮಜ್ಜಗಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದು ಮಲಪ್ರಭಾ ನದಿಯ ಪ್ರವಾಹವನ್ನು ವೀಕ್ಷಿಸಿದ ಅವರು, ನೀರಿನ ಮಟ್ಟ ಪರಿಶೀಲಿಸಿದರು. ನಂತರ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗ್ರತಿ ಮೂಡಿಸಿ ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ವಾಹನ ಹಾಗೂ ಜಾನುವಾರುಗಳ ಮೈ ತೊಳೆಯುವುದು ಮಾಡಬಾರದು, ಸೆಲ್ಪಿ ಸೇರಿದಂತೆ ಪ್ರವಾಹದಲ್ಲಿ ಹುಚ್ಚು ಸಾಹಸ ಮಾಡುವ ಗೋಜಿಗೆ ಹೋಗಬಾರದು ಎಂದು ಎಚ್ಚರಿಸಿದರು. ಪ್ರವಾಹ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಟಾಪ್ ನ್ಯೂಸ್

ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

ದಕ್ಷಿಣಕನ್ನಡ ಜಿಲ್ಲೆ : ಬಂಧಿತ ಎಲ್ಲ 14 ಪಿಎಫ್ಐ ಮುಖಂಡರಿಗೆ ಜಾಮೀನು ಮಂಜೂರು

ದಕ್ಷಿಣಕನ್ನಡ ಜಿಲ್ಲೆ : ಬಂಧಿತ ಎಲ್ಲ 14 ಪಿಎಫ್ಐ ಮುಖಂಡರಿಗೆ ಜಾಮೀನು ಮಂಜೂರು

Pralhad Joshi

ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ: ಪ್ರಲ್ಹಾದ್ ಜೋಶಿ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಯತ್ನ

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಯತ್ನ

ಮತ್ತೆ ಕೃಷ್ಣಾ ಮೇಲ್ದಂಡೆ ಪೂರ್ಣ ಆಶಯ

ಮತ್ತೆ ಕೃಷ್ಣಾ ಮೇಲ್ದಂಡೆ ಪೂರ್ಣ ಆಶಯ

16

ಆಲಮಟ್ಟಿ ಜಲಾಶಯಕ್ಕಿಂದು ಸಿಎಂ ಬಾಗಿನ

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ಮುಂದಿನ ಚುನಾವಣೆಗೆ ಬಿಜೆಪಿಯಲ್ಲಿ ಹಿಂದೂ ಕಾರ್ಯಕರ್ತರ ಸ್ಪರ್ಧೆಗೆ ಅವಕಾಶ ನೀಡಿ : ಮುತಾಲಿಕ್

ಮುಂದಿನ ಚುನಾವಣೆಗೆ ಬಿಜೆಪಿಯಲ್ಲಿ ಹಿಂದೂ ಕಾರ್ಯಕರ್ತರ ಸ್ಪರ್ಧೆಗೆ ಅವಕಾಶ ನೀಡಿ : ಮುತಾಲಿಕ್

MUST WATCH

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

ಹೊಸ ಸೇರ್ಪಡೆ

ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

ದಕ್ಷಿಣಕನ್ನಡ ಜಿಲ್ಲೆ : ಬಂಧಿತ ಎಲ್ಲ 14 ಪಿಎಫ್ಐ ಮುಖಂಡರಿಗೆ ಜಾಮೀನು ಮಂಜೂರು

ದಕ್ಷಿಣಕನ್ನಡ ಜಿಲ್ಲೆ : ಬಂಧಿತ ಎಲ್ಲ 14 ಪಿಎಫ್ಐ ಮುಖಂಡರಿಗೆ ಜಾಮೀನು ಮಂಜೂರು

Pralhad Joshi

ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ: ಪ್ರಲ್ಹಾದ್ ಜೋಶಿ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

ಪುಟಾಣಿಗಳಿಗಾಗಿ ಅಮ್ಮನಿಗಾಗಿ ಒಂದು ಪುಸ್ತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.