ತಿಂಗಳಾದ್ರೂ ನಲ್ಲಿಗೆ ಬರ್ತಿಲ್ಲ ನೀರು

•ಕುಡಿವ ನೀರಿಗೆ ನಿತ್ಯವೂ ನಿವಾಸಿಗಳ ಅಲೆದಾಟ •ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತ

Team Udayavani, May 15, 2019, 11:36 AM IST

bagalkote-tdy-5..

ಕೆರೂರ: : ಪಟ್ಟಣದ ತರಕಾರಿ ಮಾರ್ಕೆಟ್‌ನ ಬೋರವೆಲ್ಗೆ ನೀರಿಗಾಗಿ ಸರದಿಯಲ್ಲಿರುವ ಕುಂಬಾರ ಹಾಗೂ ಚೋರಗಸ್ತಿ ಗಲ್ಲಿ ನಿವಾಸಿಗಳು.

ಕೆರೂರ: ಪಟ್ಟಣದಲ್ಲಿ ಸುಮಾರು 15- 20ದಿನಗಳಾದರೂ ನಲ್ಲಿಗಳಿಗೆ ನೀರು ಬರುತ್ತಿಲ್ಲ. ಮನೆ ಬಿಟ್ಟು ಹೊರಗೆ ಅಡಿಯಿಟ್ಟರೆ ನೆತ್ತಿ ಸುಡುವಷ್ಟು ಕೆಂಡದಂಥ ರಣ ಬಿಸಿಲು. ಕುಡಿಯಲು ನೀರು ಬೇಕಾದರೆ ಎರಡ್ಮೂರು ಕಿ.ಮೀ. ದೂರ ನೀರು ಸಿಗುವಲ್ಲಿಗೆ ತಳ್ಳುಗಾಡಿ, ಸೈಕಲ್ ಹಾಗೂ ಬೈಕ್‌ಗಳಲ್ಲಿ ನಿತ್ಯವೂ ಅಲೆಯಬೇಕಾಗಿದೆ.

ಬಿರು ಬೇಸಿಗೆಯ ವಿಷಮ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಕೈಗೊಳ್ಳಬೇಕಾದ ಸ್ಥಳೀಯ ಪಟ್ಟಣ ಪಂಚಾಯತ, ಎಷ್ಟು ಕೊಳವೆಬಾವಿ ಕೊರೆಯಿಸಿದರೂ ಅಂತರ್ಜಲ ಸಿಗುತ್ತಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ. ಎಲ್ಲ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕುರಿತು ವ್ಯಾಪಕ ದೂರುಗಳೇ ಕೇಳಿ ಬರುತ್ತಿವೆ.

ಒಂದೇ ಕೊಳವೆಬಾವಿ: ಬೇಸಿಗೆ ಅವಧಿಗೆ ಮುನ್ನ ಪಟ್ಟಣಕ್ಕೆ ನೀರು ಪೂರೈಸುವ ಹಳಗೇರಿ ಬಳಿಯ ಪಂಪ್‌ಹೌಸ್‌ಗೆ ನಾಲ್ಕೈದು ಬೋರವೆಲ್ಗಳಿಂದ ನೀರು ಪೂರೈಸಲಾಗುತ್ತಿತ್ತು. ಆದರೆ, ಸತತ ಭೀಕರ ಬರಗಾಲದಿಂದ ಈ ಕಡು ಬೇಸಿಗೆಯಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸದ್ಯ ಒಂದು ಬೋರವೆಲ್ ಮಾತ್ರ ದಿನಕ್ಕೆ ಕನಿಷ್ಠ ಪ್ರಮಾಣದಲ್ಲಿ ಕೆಂಪುಮಣ್ಣು ಮಿಶ್ರಿತ ನೀರು ಪೂರೈಸುತ್ತಿದ್ದು, ಸ್ಥಳೀಯ ಜನತೆಯ ಬೇಡಿಕೆಗೆ ತಕ್ಕಂತೆ ನೀರು ಸರಬರಾಜು ಆಗುತ್ತಿಲ್ಲ.

ಮುಖ್ಯಾಂಶಗಳು:

•ಬಿಂದಿಗೆ ನೀರಿಗೆ ತಾಸುಗಟ್ಟಲೆ ಅಲೆದಾಟ

•ನಲ್ಲಿ ನೀರು ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲದ ನಿವಾಸಿಗಳ ಗೋಳಾಟ

•ಬೇಸಿಗೆಯಲ್ಲಿ ಒಂದೇ ಬೋರವೆಲ್ನಿಂದ ಮಾತ್ರ ನೀರು ಪೂರೈಕೆ

•ದಿನವಿಡಿ ನೀರು ತರುವುದೇ ಕೆಲಸ

•ಪಟ್ಟಣ ಪಂಚಾಯತ ನಿರ್ಲಕ್ಷ್ಯ ಧೋರಣೆ

ಬೇಸಿಗೆ ಹೆಚ್ಚಿದ ಬವಣೆ: ಸ್ಥಳೀಯ ಕುಂಬಾರ, ಚೋರಗಸ್ತಿ ಗಲ್ಲಿಗಳು, ಚಿನಗುಂಡಿ ಫ್ಲಾಟ್ ಹಾಗೂ ನೆಹರುನಗರ, ನವನಗರ, ಆಶ್ರಯ ಬಡಾವಣೆ, ಕೆಎಚ್‌ಡಿಸಿ ಫ್ಲಾಟ್, ಹೊಸಪೇಟೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ಅಲ್ಲಿನ ನಿವಾಸಿಗಳ ಗೋಳು ಹೇಳತೀರದಂತಾಗಿದೆ. ತಮ್ಮ ನಿತ್ಯದ ಕೆಲಸ ಬದಿಗೊತ್ತಿ ನೀರು ಹಿಡಿದು ತರುವುದೇ ನಿತ್ಯವೂ ಕೆಲಸವಾಗಿದೆ ಎನ್ನುತ್ತಾರೆ ಚಿನಗುಂಡಿ ಫ್ಲಾಟ್‌ನ ಬಸು ಬಡಿಗೇರ. ಸ್ಥಳೀಯ ಆಶ್ರಯ ಫ್ಲಾಟ್ ಬಡಾವಣೆ, ನೆಹರುನಗರ, ನವನಗರ, ಕೆಎಚ್‌ಡಿಸಿ ಕಾಲೋನಿ, ಚಿನಗುಂಡಿಫ್ಲಾಟ್, ಕುಂಬಾರ ಗಲ್ಲಿ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಪಟ್ಟ ಣ ಪಂಚಾಯತ ಅಳವಡಿಸಿರುವ ನೀರು ಪೂರೈಕೆ ಕೊಳವೆ ಬಾವಿ ಬಿಟ್ಟರೆ ಬೇರೆ ಯಾವುದೇ ಬಗೆಯ ತೆರೆದ ಬಾವಿ, ಕೊಳವೆಬಾವಿ ಸೌಲಭ್ಯಗಳಿಲ್ಲ.

ಬೇಸಿಗೆ ಬವಣೆ ನೀಗಿಸಲು ಕೆರೆಯಲ್ಲಿ ಸಂಗ್ರಹಿಸಿದ್ದ ಘಟಪ್ರಭೆ ನೀರು ಖಾಲಿಯಾಗಿದೆ. ನಾಗರಿಕರಿಗೆ ನೀರು ಪೂರೈಸುವ ಬೋರವೆಲ್ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ತೀವ್ರತೆ ಮನಗಂಡು ಟ್ಯಾಂಕರ್‌ ಮೂಲಕ ಪೂರೈಸುತ್ತಿದ್ದೇವೆ. ತೆರೆದ ಬಾವಿಗಳ ನೀರು ಪೂರೈಕೆಗೆ ಆದ್ಯತೆ ನೀಡುತ್ತಿದ್ದು, ಶೀಘ್ರ ಶುದ್ಧ ಕುಡಿವ ನೀರಿನ ಘಟಕ ಹೆಚ್ಚಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇವೆ.-ಎಂ.ಜಿ. ಕಿತ್ತಲಿ, ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್‌, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗ

ನೀರು ಪೂರೈಕೆ ಸಮಸ್ಯೆ ಉಲ್ಬಣಿಸದಂತೆ ಎಲ್ಲ ಬಗೆಯಲ್ಲೂ ನಿಗಾ ವಹಿಸಿದ್ದೇವೆ. ಸತತ ಬರದಿಂದ ಅಂತರ್ಜಲ ಕ್ಷೀಣಿಸಿರುವ ಪರಿಣಾಮ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದ್ದು, ಜಿಲ್ಲಾಡಳಿತದಿಂದ ಅಗತ್ಯ ನೆರವು ಪಡೆದು ಸ್ಥಳೀಯರ ನೀರಿನ ಬವಣೆ ಪರಿಹರಿಸುತ್ತೇವೆ. ಬೇಸಿಗೆ ಅವಧಿ ಕಾರಣ ನಾಗರಿಕರು ಸಹ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು.

•ಜೆ.ವಿ. ಕೆರೂರ

ಟಾಪ್ ನ್ಯೂಸ್

6

Movies: ʼಪುಷ್ಪ-2ʼ ಮುಂದೂಡಿಕೆಯಾದರೆ ಸ್ವಾತಂತ್ರ್ಯ ದಿನದ ರಿಲೀಸ್‌ ಮೇಲೆ ಈ ಚಿತ್ರಗಳ ಕಣ್ಣು

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

Rabkavi Banhatti; ಕೃಷ್ಣಾ ನದಿಯಲ್ಲಿ ಮುಳುಗಿ ಮೀನುಗಾರ ಸಾವು

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯRoad Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

6

Movies: ʼಪುಷ್ಪ-2ʼ ಮುಂದೂಡಿಕೆಯಾದರೆ ಸ್ವಾತಂತ್ರ್ಯ ದಿನದ ರಿಲೀಸ್‌ ಮೇಲೆ ಈ ಚಿತ್ರಗಳ ಕಣ್ಣು

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.