ರಂಗಮಂದಿರಕ್ಕೆ ಅಧಿಕಾರಿಗಳ ಭೇಟಿ-ಪರಿಶೀಲನೆ
Team Udayavani, Sep 28, 2020, 5:06 PM IST
ಗುಳೇದಗುಡ್ಡ: ಅರ್ಧಕ್ಕೆ ನಿಂತಿರುವ ಇಲ್ಲಿನ ಕಂದಗಲ್ಲ ಹನಮಂತರಾಯರ ರಂಗಮಂದಿರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಎನ್. ಭೇಟಿ ನೀಡಿ ರಂಗಮಂದಿರದ ವಸ್ತುಸ್ಥಿತಿ ಪರಿಶೀಲಿಸಿದರು.
ರಂಗ ಮಂದಿರದಲ್ಲಿ ಬೆಳೆದಿರುವ ಜಾಲಿ ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗುವುದು. ಅರ್ಧಕ್ಕೆ ನಿಂತಿರುವ ರಂಗ ಮಂದಿರವನ್ನು ಪೂರ್ಣಗೊಳಿಸಲು 25 ಲಕ್ಷ ರೂ. ಮಂಜೂರಾಗಿದ್ದು ಕೂಡಲೇ ಅರ್ಧಕ್ಕೆ ನಿಂತಿರುವ ಕಂದಗಲ್ಲ ಹನಮಂತರಾಯರ ರಂಗಮಂದಿರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕಂದಗಲ್ಲ ಹನಮಂತರಾಯರ ಹೆಸರಿನಲ್ಲಿ ನಿರ್ಮಿಸುತ್ತಿರುವ ಕಂದಗಲ್ಲ ಹನಮಂತರಾಯ ರಂಗ ಮಂದಿರ ಕಳೆದ 20 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಈಗಲೂ ಇದು ಅಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ರಂಗ ಮಂದಿರದ ಮುಂದುವರಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಬಹುದಿನಗಳ ಕಲಾವಿದರ ಕನಸು ನನಸು ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಹೇಳಿದರು.
ಲ್ಯಾಂಡ್ ಆರ್ಮಿಯ ಸಹಾಯ ಕಾರ್ಯನಿರ್ವಾಹಕ ಅಭಿಯಂತರ ನರಸಿಂಹರಾಜು, ಸುರೇಶ ಸಾರಂಗಿ, ಇಲಾಖೆಯ ನಾಗರಾಜ ಇದ್ದರು.
……………………………………………………………………………………………………………………………………………………………
ರೋಗಮುಕ್ತ ಸಮಾಜಕ್ಕೆ ಸಹಕರಿಸಿ :
ಕುಳಗೇರಿ ಕ್ರಾಸ್: ರಕ್ತದಲ್ಲಿ ಆನೆಕಾಲು ರೋಗ ಉಂಟು ಮಾಡುವ ಸೂಕ್ಷ್ಮ ಜೀವಾಣುಗಳಿರುವ ಸಾಧ್ಯತೆ ಹೆಚ್ಚಾಗಿದೆ. ಡಿಇಸಿ ಮತ್ತು ಅಲ್ಪೆಂಪೆಂಡ್‌ಜೋಲ್ ಮಾತ್ರೆ ಸೇವಿಸಿದರೆ ಮಾತ್ರ ಈ ರೋಗ ತಡೆಯಲು ಸಾಧ್ಯ ಎಂದು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ| ಶಶಿರೇಖಾ ಹಲಗಲಿಮಠ ಹೇಳಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ಮಾತ್ರೆ ಸೇವನೆ ಮಾಡಿಸುವ ಮೂಲಕ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದೆ. ವೈದ್ಯರ ಸಲಹೆ ಪಡೆದು ಪ್ರತಿಯೊಬ್ಬರು ವರ್ಷದಲ್ಲಿ ಒಂದು ಬಾರಿ ಈ ಮಾತ್ರೆಗಳನ್ನ ನುಂಗುವ ಮೂಲಕ ರೋಗ ಹರಡದಂತೆ ತಡೆಯಬಹುದು ಎಂದರು.
ಹಿರಿಯ ಆರೋಗ್ಯ ಸಹಾಯಕ ಅಶೋಕ ತಿಮ್ಮಾಪುರ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಸೊಳ್ಳೆ ಕಚ್ಚದಂತೆ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ಸಹಾಯಕರಾದ ಜಾಧವ, ಬಿ ಎಸ್ ಎತ್ತಿನಮನಿ, ಯಲ್ಲಮ್ಮ ನರಗುಂದ, ರೇಣುಕಾ ಪೂಜಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿವೋ ವೈ75 ಫೋನ್ ಬಿಡುಗಡೆ; 44ಎಂಪಿ ಸೆಲ್ಫಿ ಕ್ಯಾಮರಾವಿರುವ ಫೋನು
ಕಾಂಗ್ರೆಸ್ ಕಟ್ಟಿ ಬೆಳೆಸಿದ್ದನ್ನು ಬಿಜೆಪಿ ಮಾರುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು
ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!
ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ