ಬಿಲ್‌ ಬಾಕಿ; ಹಾಸ್ಟೆಲ್‌ ಗ‌ಳಿಗೆ ಕರೆಂಟ್‌ ಕಟ್‌

ವಾರದಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವ ಗಡುವು ನೀಡಿ, ಪುನಃ ಸಂಪರ್ಕ ಕಲ್ಪಿಸಿದರು.

Team Udayavani, Oct 23, 2021, 9:09 PM IST

ಬಿಲ್‌ ಬಾಕಿ; ಹಾಸೆ rಲ್‌ಗ‌ಳಿಗೆ ಕರೆಂಟ್‌ ಕಟ್‌

ಬಾಗಲಕೋಟೆ: ಹಾಸ್ಟೆಲ್‌ಗ‌ಳ ವಿದ್ಯುತ್‌ ಬಿಲ್‌ ಲಕ್ಷ ಲಕ್ಷ ಮೊತ್ತದ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ನವನಗರ ಹಾಗೂ ನಗರ ಹೊರ ವಲಯದ ಒಟ್ಟು ಮೂರು ಹಾಸ್ಟೆಲ್‌ಗ‌ಳ ವಿದ್ಯುತ್‌ ಸಂಪರ್ಕ ಹೆಸ್ಕಾಂ ಅಧಿಕಾರಿಗಳು ಕಟ್‌ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ನವನಗರದ ಡಿಟಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ, ಮೆಟ್ರಿಕ್‌ ನಂತರ ಮಾದರಿ ವಸತಿ ನಿಲಯ ಹಾಗೂ ಶಿಗಿಕೇರಿ ಬಳಿಯ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯಗಳ ವಿದ್ಯುತ್‌ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.

ಈ ಎಲ್ಲ ಹಾಸ್ಟೆಲ್‌ಗ‌ಳಿಗೆ ಮುಖ್ಯಸ್ಥರಂತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಚೇರಿಯ ವಿದ್ಯುತ್‌ ಬಿಲ್‌ ಬಾಕಿ ಇದ್ದು, ತಾಲೂಕು ಕಚೇರಿ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಹೀಗಾಗಿ ಮೂರು ಹಾಸ್ಟೆಲ್‌, ಒಂದು ತಾಲೂಕು ಕಚೇರಿಯ ವಿದ್ಯುತ್‌ ಸಂಪರ್ಕ ಮಧ್ಯಾಹ್ನವೇ ಕಡಿತಗೊಳಿಸಿದರೂ, ತಡರಾತ್ರಿವರೆಗೂ ಅಧಿಕಾರಿಗಳು, ವಿದ್ಯುತ್‌ ಸಂಪರ್ಕ ಕಲ್ಪಿಸಲು ಪ್ರಯತ್ನ ಮಾಡಲಿಲ್ಲ.

ಸದ್ಯ ಡಿಪ್ಲೊಮಾ ವಿದ್ಯಾರ್ಥಿಗಳ ಪರೀಕ್ಷೆ ನಡೆದಿದ್ದು, ತಡರಾತ್ರಿವರೆಗೂ ಕರೆಂಟ್‌ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಯಿತು. ಎಲ್ಲ ವಿದ್ಯಾರ್ಥಿಗಳು, ಆಯಾ ಹಾಸ್ಟೆಲ್‌ ವಾರ್ಡನ್‌ಗೆ ಮನವಿ ಮಾಡಿದರು. ಎಲ್ಲ ಹಾಸ್ಟೆಲ್‌ ವಾರ್ಡನ್‌ಗಳು, ನಿಯಮಾನುಸಾರ ವಿದ್ಯುತ್‌ ಬಾಕಿ ಬಿಲ್‌ ಪಾವತಿಸಲು, ತಾಲೂಕು ಕಚೇರಿಗೆ ಬಿಲ್‌ ಸಲ್ಲಿಸಿದ್ದಾರೆ. ತಾಲೂಕು ಕಚೇರಿಯಿಂದ ಖಜಾನೆ ಇಲಾಖೆಗೆ ಆ ಬಿಲ್‌ ಮೊತ್ತ ವರ್ಗಗೊಳ್ಳಬೇಕು. ಖಜಾನೆ ಇಲಾಖೆಯಿಂದ ಹೆಸ್ಕಾಂಗೆ ಹಣ ಸಂದಾಯವಾಗಬೇಕು. ಇದು ಇಲಾಖೆ ನಿಯಮ. ಆದರೆ, ತಾಲೂಕು ಕಚೇರಿ ಅಧಿಕಾರಿಗಳ ನಿರ್ಲಕ್ಷéದಿಂದ
ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಕರೆಂಟ್‌ ಇಲ್ಲದೇ ಸಮಸ್ಯೆ ಅನುಭವಿಸಿದರು.

ರಾತ್ರಿವರೆಗೂ ಕರೆಂಟ್‌ ಬಾರದ ಹಿನ್ನೆಲೆಯಲ್ಲಿ ವಾರ್ಡನ್‌ಗಳ ಸಮೇತ ವಿದ್ಯಾರ್ಥಿಗಳು ತಾಲೂಕು ಕಚೇರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ನವನಗರದ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಮಾಡಿದರು. ಹೆಸ್ಕಾಂ ಹಿರಿಯ ಅಧಿ ಕಾರಿಗಳು, ವಿದ್ಯಾರ್ಥಿಗಳು- ವಾರ್ಡನ್‌ಗಳ ಮನವಿ ಮೇರೆಗೆ ವಾರದಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವ ಗಡುವು ನೀಡಿ, ಪುನಃ ಸಂಪರ್ಕ ಕಲ್ಪಿಸಿದರು.

ನಮ್ಮ ಹಾಸ್ಟೆಲ್‌ನಲ್ಲಿ ಒಟ್ಟು 3 ಮೀಟರ್‌ ಇವೆ. ಗೀಸರ್‌, ಕೊಳವೆಬಾವಿ ಹಾಗೂ ಹಾಸ್ಟೆಲ್‌ಗೆ ಬಳಸುವ 3 ಮೀಟರ್‌ ಗಳ ಮಾಸಿಕ ಬಿಲ್‌ ಸುಮಾರು 20-25 ಸಾವಿರ ಬರುತ್ತದೆ. ಕಳೆದ 2020ರ ನವ್ಹೆಂಬರ್‌ನಿಂದ ಕರೆಂಟ್‌ ಬಿಲ್‌ ಬಾಕಿ ಇದ್ದು, ಅದು ಸುಮಾರು 1.80 ಲಕ್ಷವಾಗಿದೆ. ಈ ಬಿಲ್‌ ಪಾವತಿಸಲು ತಾಲೂಕು ಕಚೇರಿಗೆ ಬಿಲ್‌ ಸಲ್ಲಿಸಲಾಗಿದೆ. ಪಾವತಿಯಾಗದ ಕಾರಣ, ಹೆಸ್ಕಾಂನಿಂದ ನೋಟಿಸ್‌ ನೀಡಿ ವಿದ್ಯುತ್‌ ಕಡಿತಗೊಳಿಸಿದ್ದರು. ಈ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶೀಘ್ರ ಬಾಕಿ ಪಾವತಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಹೆಸ್ಕಾಂ ಅಧಿ ಕಾರಿಗಳಿಗೆ ಮನವಿ ಮಾಡಿಕೊಂಡ ಬಳಿಕ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ ಎಂದು ನವನಗರದ ಹಾಸ್ಟೆಲ್‌ ವೊಂದರ ವಾರ್ಡನ್‌ ಪತ್ರಿಕೆಗೆ ತಿಳಿಸಿದರು.

ವಿದ್ಯಾರ್ಥಿಗಳ ಆಕ್ರೋಶ
ಹಾಸ್ಟೆಲ್‌ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು ಅನುದಾನ ನೀಡುತ್ತದೆ. ಕಳೆದ ವರ್ಷ ಹಾಸ್ಟೆಲ್‌ ನಿರ್ವಹಣೆ ಕೋಟ್ಯಂತರ ಅನುದಾನದಲ್ಲಿ ದುಬಾರಿ ಬೆಲೆಯ ಟಿವಿ, ಫ್ರಿಡ್ಜ್, ತರಕಾರಿ ಇಡುವ ರ್ಯಾಕ್‌, 300ಕ್ಕೂ ಹೆಚ್ಚು ಬೆಲೆ ಊಟದ ತಟ್ಟೆ ಹೀಗೆಲ್ಲ
ಖರೀದಿಸಿದ ಲೆಕ್ಕ ತೋರಿಸಿದ್ದಾರೆ. ಕೆಲವು ಹಾಸ್ಟೆಲ್‌ಗ‌ಳಿಗೆ ಸಾಮಗ್ರಿಗಳೇ ಬಂದಿಲ್ಲ. ಈ ಭ್ರಷ್ಟಾಚಾರದ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಬಿಸಿಎಂ ಇಲಾಖೆ ಜಿಲ್ಲಾ ಅಧಿ ಕಾರಿ ಮತ್ತು ತಾಲೂಕು ಅಧಿ ಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

ಟಾಪ್ ನ್ಯೂಸ್

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಮನೆಯಲ್ಲೇ ನಿಗಾ;  ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಮನೆಯಲ್ಲೇ ನಿಗಾ; ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ತೆರಿಗೆ ಹೆಚ್ಚಳಕ್ಕೆ ವಿರೋಧ: ನೇಕಾರರಿಗೆ ಭರವಸೆ ನೀಡಿದ ಸಿಎಂ

ರೈತರ ಬಗ್ಗೆ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯ : ರೈತ ಮುಖಂಡ ಮುತ್ತಪ್ಪ ಕೋಮಾರ

ರೈತರ ಬಗ್ಗೆ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯ : ರೈತ ಮುಖಂಡ ಮುತ್ತಪ್ಪ ಕೋಮಾರ

ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಹಿತಿ ಅಗತ್ಯ

ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಹಿತಿ ಅಗತ್ಯ

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸಾಲಿಮಠ

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸಾಲಿಮಠ

ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಬಸವಣ್ಣವರು

ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಬಸವಣ್ಣವರು

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಮನೆಯಲ್ಲೇ ನಿಗಾ;  ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಮನೆಯಲ್ಲೇ ನಿಗಾ; ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಜಗತ್ತಿನ ಹೊಸ ರಾಷ್ಟ್ರದ ಉದಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.