ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

Team Udayavani, Apr 23, 2019, 12:20 PM IST

ಮಹಾಲಿಂಗಪುರ: 2019ರ ಲೋಕಸಭೆ ಚುನಾವಣೆಯ ಮತದಾನವು ಏ.23ರಂದು ನಡೆಯಲಿದೆ. ತನ್ನಿಮಿತ್ತ ಪಟ್ಟಣದಲ್ಲಿ ಸುಮಾರು 33 ಮತಗಟ್ಟೆ ಸ್ಥಾಪಿಸಲಾಗಿದೆ. 33 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ವೆಂಕಟೇಶ ಬೆಳಗಲ್, ಎಚ್.ಎಸ್‌.ಬಳ್ಳುರ, ಕೆ.ಐ. ನಾಗನೂರ ತಿಳಿಸಿದರು.

ಪಟ್ಟಣದ ಕೆಂಗೇರಿಮಡ್ಡಿ ಸರಕಾರಿ ಶಾಲೆಯ ಮತಗಟ್ಟೆ 190ನ್ನು ಸಖೀ ಮತಗಟ್ಟೆಯಾಗಿದೆ. ಸಖೀ ಮತಗಟ್ಟೆಯನ್ನು ಮದು ವಣಗಿತ್ತಿಯಂತೆ ಸಿಂಗರಿಸಲಾಗಿದೆ. ಮತದಾನ ಕೋಣೆಯನ್ನು ಅಲಂಕಾರ ಮಾಡಿ, ಬಲೂನ್‌ ಕಟ್ಟಿ ಮನೆಯಲ್ಲಿನ ಹಬ್ಬದಂತೆ ವಿಶೇಷ ಅಲಂಕರಿಸಲಾಗಿದೆ. ಮತಗಟ್ಟೆಯ ಹೊರಗೆ ವಿಶ್ರಾಂತಿಗಾಗಿ ವಿಶಾಲ ಪೆಂಡಾಲ್ ವ್ಯವಸ್ಥೆ, ಸರತಿ ಸಾಲಿನಲ್ಲಿ ನಿಲ್ಲಲು ಅನುಕೂಲ ಮಾಡಲಾಗಿದೆ. ಜೊತೆಗೆ ಮತದಾನ ಚಲಾಯಿಸಿ ಹೊರಬಂದ ಸಖೀಯರಿಗಾಗಿ, ಪ್ರತ್ಯೇಕ ಸೆಲ್ಫಿ ಜೋನ್‌ ಸಹ ಅಳವಡಿಸಲಾಗಿದೆ. ಮತಗಟ್ಟೆ ಮುಂಭಾಗದಲ್ಲಿ ಸಖೀ ಮತದಾರರ ಭಾವಚಿತ್ರದ ಬ್ಯಾನರಗಳ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ತೇರದಾಳ ಮತಕ್ಷೇತ್ರದ ಎರಡು ಸಖೀ ಮತಗಟ್ಟೆಗಳಲ್ಲಿ ಮಹಾಲಿಂಗಪುರದ 190ರ ಮತಗಟ್ಟೆಯು ಒಂದಾಗಿದ್ದು ವಿಶೇಷ.

ಸಖೀ ಮತಗಟ್ಟೆಯ ನಿರ್ಮಾಣಕ್ಕಾಗಿ ಚುನಾವಣಾಧಿಕಾರಿಗಳು 10 ಸಾವಿರ ನೀಡಿದ್ದಾರೆ. ಆದರೆ ಪುರಸಭೆಯಿಂದ ಹೆಚ್ಚಿನ ವೆಚ್ಚ ಹಾಕಿ ಮತಗಟ್ಟೆಯನ್ನು ಮತ್ತಷ್ಟು ಆಕರ್ಷಣೀಯವಾಗಿಸಲಾಗಿದೆ. ಮಹಿಳಾ ಮತದಾರರೇ ಹೆಚ್ಚಾಗಿರುವ ಈ ಮತಗಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಖೀ ಮತಗಟ್ಟೆಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸಖೀ ಮತಗಟ್ಟೆಗೆ ಹೆಚ್ಚಿನ ಮೆರುಗು ನೀಡಬೇಕೆಂದು ಪುರಸಭೆ ಮುಖ್ಯಾಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಕೆ.ಐ. ನಾಗನೂರ ವಿನಂತಿಸಿದ್ದಾರೆ. ಸಖೀ ಮತಗಟ್ಟೆ ಅಧಿಕಾರಿ, ಪಿಆರ್‌ಒ, ಮಹಿಳಾ ಪೇದೆ, ಸಿಬ್ಬಂದಿ ಸೇರಿದಂತೆ ಸಖೀ ಮತಗಟ್ಟೆಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ನೇಮಕ ಗೊಳಿಸಲಾಗಿದೆ. ಚುನಾವಣೆಯ ಕರ್ತವ್ಯಕ್ಕಾಗಿ ಮಹಿಳಾ ಸಿಬ್ಬಂದಿ ಮಂಗಳವಾರ ಸಂಜೆ ಮತಗಟ್ಟೆಗೆ ಆಗಮಿಸಿ, ಮತದಾನ ಸಿದ್ಧತೆಗಳನ್ನು ಮಾಡಿಕೊಂಡರು.


ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ಜಿಲ್ಲೆಯಲ್ಲಿರುವ ಕೇಬಲ್‌ ಆಪರೇಟರ್‌ಗಳು ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ನವೀಕರಣಗೊಳ್ಳದ ಕೇಬಲ್‌ ಆಪರೇಟರ್‌ಗಳ...

  • ಸಾವಳಗಿ: ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ಚಿಕ್ಕಲಕ್ಕಿ, ಚಿಕ್ಕಲಕ್ಕಿಕ್ರಾಸ...

  • ಮಹಾಲಿಂಗಪುರ: ಪಟ್ಟಣದಲ್ಲಿ ನೂತವಾಗಿ ನಿರ್ಮಿಸುತ್ತಿರುವ ಬಸ್‌ ನಿಲ್ದಾಣದ ಕಾಮಗಾರಿಯ ಕಾರಣ ಬಸ್‌ ನಿಲುಗಡೆಗೆ ತೊಂದರೆಯಾಗುತ್ತಿದೆ. ಕಾರಣ ಕಾಮಗಾರಿಯ ಮುಕ್ತಾಯಗೊಳ್ಳುವರೆಗೂ...

  • ಶಿರೂರ: ಜಿಲ್ಲಾಡಳಿತ ಆಶ್ರಯದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಶ್ರಯಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವಿಶೇಷ...

  • ಮುಧೋಳ: ನಗರದಲ್ಲಿ ಬಹುದಿನಗಳಿಂದ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಭಾಗ್ಯ ದೊರೆಯದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ...

ಹೊಸ ಸೇರ್ಪಡೆ