Udayavni Special

ಖಾಸಗಿ ವೈದ್ಯರ ಮುಷ್ಕರ: ರೋಗಿಗಳ ನರಳಾಟ

•ಸಕಾಲಕ್ಕೆ ದೊರೆಯದ ಚಿಕಿತ್ಸೆ: ಓರ್ವ ಸಾವು•ನಗರದಲ್ಲಿ ವೈದ್ಯರ ಮೌನ ಪ್ರತಿಭಟನೆ•ಆರೋಗ್ಯ ಸುರಕ್ಷಣಾ ಕಾಯ್ದೆ ಜಾರಿಗೊಳಿಸಿ

Team Udayavani, Jun 18, 2019, 7:26 AM IST

bk-tdy-1..

ಬಾಗಲಕೋಟೆ: ನಗರದ ಖಾಸಗಿ ವೈದ್ಯರು ಬಸವೇಶ್ವರ ವೃತ್ತದಲ್ಲಿ ಶಾಂತಿಯ ನಡಿಗೆ ನಡೆಸಿ ಪ್ರತಿಭಟಿಸಿದರು.

ಬಾಗಲಕೋಟೆ: ಕೋಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಹಾಗೂ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವ ಕಾನೂನು ರೂಪಿಸುವಂತೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ವೈದ್ಯರು, 24 ಗಂಟೆಗಳ ಮುಷ್ಕರ ನಡೆಸಿದ್ದು, ಚಿಕಿತ್ಸೆ ದೊರೆಯದೇ ಕೆರೂರಿನ ವ್ಯಕ್ತಿ ಮೃತಪಟ್ಟಿದ್ದಾರೆ.

ಬಾಗಲಕೋಟೆ ನಗರ ಹಾಗೂ ಜಿಲ್ಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಎಲ್ಲಾ ಆಸ್ಪತ್ರೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಹೊರ ರೋಗಿಗಳ ಚಿಕಿತ್ಸೆ ವಿಭಾಗ ಬಂದ್‌ ಮಾಡಿದ್ದವು. ತುರ್ತು ವಿಭಾಗ ಹಾಗೂ ಒಳ ರೋಗಿಗಳ ಚಿಕಿತ್ಸೆ ಲಭ್ಯವಿತ್ತಾದರೂ ಅದು ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎನ್ನಲಾಗಿದೆ.

ಜ್ವರ-ಅಸ್ತಮಾ ರೋಗದಿಂದ ಬಳಲುತ್ತಿದ್ದ ಕೆರೂರಿನ ದಾವಲಸಾಬ ಕೊಣ್ಣೂರ ಎಂಬ ವ್ಯಕ್ತಿ, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದು, ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟರು. ಕೊಣ್ಣೂರ ಅವರ ಸಾವಿಗೆ ವೈದ್ಯರ ಮುಷ್ಕರವೇ ಕಾರಣ ಎಂದು ಕುಟುಂಬದವರು ಆರೋಪಿಸಿದರು.

ಶಾಂತಿ ನಡಿಗೆ: ಬೆಳಗ್ಗೆಯಿಂದ ವೈದ್ಯಕೀಯ ಸೇವೆ ನೀಡದೇ ಮುಷ್ಕರ ನಡೆಸಿದ ವೈದ್ಯರು, ಸಂಜೆ ನಗರದ ವಲ್ಲಭಬಾಯಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಶಾಂತಿ ನಡಿಗೆ ನಡೆಸಿದರು. ಬಳಿಕ ತಲೆಗೆ ಬಿಳಿ-ಕೆಂಪು ಬಣ್ಣದ ವಸ್ತ್ರ, ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಖಾಸಗಿ ವೈದ್ಯರು ನಿರ್ಭಯವಾಗಿ ರೋಗಿಗಳ ಸೇವೆ ಮಾಡಲು ಮಾದರಿ ಕೇಂದ್ರೀಯ ಆರೋಗ್ಯ ಸುರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷೆ ಡಾ| ಜಯಶ್ರೀ ತೆಲಸಂಗ, ಕಾರ್ಯದರ್ಶಿ ಜ್ಯೋತಿ ಪಾಟೀಲ, ಡಾ| ದೇವರಾಜ ಪಾಟೀಲ, ಡಾ| ಬಾಬುರಾಜೇಂದ್ರ ನಾಯಕ, ಡಾ| ಎಚ್.ಆರ್‌. ಕಟ್ಟಿ, ಡಾ| ಕವಿತಾ ಕಟ್ಟಿ, ಡಾ| ಸುಭಾಸ ಪಾಟೀಲ, ಡಾ| ಶಂಕರ ಪಾಟೀಲ, ಡಾ| ಕಿರಣ ಕಲಬುರಗಿ, ಡಾ| ಗಿರೀಶ ಮೇಟಿ, ಡಾ| ಕ್ಷಮಿತಾ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ರಾಜ್ಯದಲ್ಲಿ ಅ. 21ರಿಂದ ಭಾರೀ ಮಳೆ?

ರಾಜ್ಯದಲ್ಲಿ ಅಕ್ಟೋಬರ್ 21 ರಿಂದ ಭಾರೀ ಮಳೆ?

ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ

ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ

ಮರಳು ದಿಬ್ಬ ಸಮೀಕ್ಷೆ ಆರಂಭ ; ನವೆಂಬರ್‌ನಲ್ಲಿ ಮರಳು ಸಾಧ್ಯತೆ

ಮರಳು ದಿಬ್ಬ ಸಮೀಕ್ಷೆ ಆರಂಭ ; ನವೆಂಬರ್‌ನಲ್ಲಿ ಮರಳು ಸಾಧ್ಯತೆ

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

bagalakote news

42 ಟನ್‌ ಅಕ್ರಮ ಪಡಿತರ ಅಕ್ಕಿ ವಶ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ರಸಪ್ರಶ್ನೆಯಲ್ಲಿ ಗೆದ್ದರೆ ಅಯೋಧ್ಯೆ ಪ್ರಯಾಣ!

ರಸಪ್ರಶ್ನೆಯಲ್ಲಿ ಗೆದ್ದರೆ ಅಯೋಧ್ಯೆ ಪ್ರಯಾಣ!

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

ನಿಯಮ ಬಾಹಿರ ಕಲ್ಲು ಗಣಿಗಾರಿಕೆ ಆರೋಪ:ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಸೂಚನೆ

ನಿಯಮ ಬಾಹಿರ ಕಲ್ಲು ಗಣಿಗಾರಿಕೆ ಆರೋಪ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.