Udayavni Special

ಆಸ್ತಿ ಖಾಸಗಿಯದ್ದು..ಪ್ರಾಥಮಿಕ ಶಾಲೆ ಸರ್ಕಾರಿಯದ್ದು!


Team Udayavani, Jul 24, 2019, 10:36 AM IST

bk-tdy-1

ಕಲಾದಗಿ: ಸಂಶಿ ಕ್ರಾಸ್‌ ಬಳಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.

ಕಲಾದಗಿ: ಖಾಸಗಿ ಆಸ್ತಿಯಲ್ಲಿ ಸರಕಾರಿ ಶಾಲಾ ಕಟ್ಟಡ ಕಟ್ಟಿ ಶಾಲೆಯನ್ನು ಕಳೆದ 9 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆಯಾದರೂ ಅಧಿಕಾರಿಗಳು ಈ ಆಸ್ತಿಯನ್ನು ಸರಕಾರಿ ಆಸ್ತಿಯನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸದೇ ಇರುವುದು ವಿಪರ್ಯಾಸ.

ಸೌಂಶಿ ಕ್ರಾಸ್‌ ಹತ್ತಿರ ಬೆಳಗಾವಿ ರಾಯಚೂರು ಹೆದ್ದಾರಿಗೆ ಹೊಂದಿಕೊಂಡ ತೋಟದ ಶಾಲೆ ಸರಕಾರದ ಹೆಸರಿನಲ್ಲಿಲ್ಲ, ನಿವೃತ್ತ ಶಿಕ್ಷಕ ಎಸ್‌.ಎನ್‌.ಹೂಗಾರ ಅವರ ಗೋವಿಂದಕೊಪ್ಪ ಗ್ರಾಮದ ಸರ್ವೇ ನಂ 155/1ರಲ್ಲಿ 9 ಗುಂಟೆ ಜಾಗೆಯಲ್ಲಿ ಕಟ್ಟಲಾಗಿದೆ. ಇದು ಸರ್ಕಾರ ಅಥವಾ ಶಿಕ್ಷಣ ಇಲಾಖೆ ಹೆಸರಿನಲ್ಲಿಲ್ಲ.

ಕಟ್ಟಡ ಕಟ್ಟಿದರಾದರೂ ಹೇಗೆ?: ಶಿಕ್ಷಣ ಪ್ರೇಮಿಗಳು ಭೂ ದಾನ ಮಾಡಿದರೂ ಭೂದಾನ ಪತ್ರ ಪಡೆದು ಆ ಶಾಲೆಯ ಮುಖ್ಯಾಧ್ಯಾಪಕರ ಹೆಸರಿನಲ್ಲಿ ಭೂ ದಾನಪತ್ರ ಪಡೆದು ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಅಥವಾ ಬಿಇಒ ಅವರ ಗಮನಕ್ಕೆ ತಂದು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು, ಹಿರಿಯ ಅಧಿಕಾರಿಗಳ ಮಾರ್ಗದರ್ಶನ-ಸೂಚನೆ-ಆದೇಶದಂತೆ ಶಾಲಾ ಕಟ್ಟಡ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಭೂದಾನ ನೀಡಿದವರು ಆ ಶಾಲೆಗೆ ತಮ್ಮ ಮನೆತನದವರ ಹಿರಿಯರ ಹೆಸರು, ಶರಣರ ಹೆಸರು ಇಡಲು ಅಪೇಕ್ಷೆ ವ್ಯಕ್ತಪಡಿಸಿ ಭೂದಾನ ಮಾಡಿದಲ್ಲಿ ಆ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ಮಾಡಿಕೊಂಡು, ನಂತರ ಇಲಾಖೆಯ ನಿಯಾನುಸಾರ, ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಮುಂದಿನ ಕ್ರಮ ಕೈಗೊಂಡು, ನಿಯಮನಾನುಸಾರ ಅನುದಾನ ಬಿಡುಗಡೆ ಮಾಡಿ, ಜಿಲ್ಲಾಮಟ್ಟದ ಶಿಕ್ಷಣ ಇಲಾಖಾ ಅಧಿಕಾರಿಗಳ ಸೂಚನೆ ಪ್ರಕಾರ ಕಟ್ಟಡ ಕಟ್ಟಬೇಕು. ಆದರೆ ಇದ್ಯಾವುದು ಈ ಶಾಲೆಗೆ ಸಂಬಂಧಿಸಿಲ್ಲ. ಶಿಕ್ಷಣ ಇಲಾಖೆ ಹೆಸರಿನಲ್ಲಿರದ ಭೂಮಿಯಲ್ಲಿ ಈ ಶಾಲಾ ಕಟ್ಟಡವನ್ನು ಕಟ್ಟಿರುವುದಾದರೂ ಹೇಗೆ ಎಂಬುದು ಪ್ರಜ್ಞಾವಂತರು ಪ್ರಶ್ನೆಯಾಗಿದೆ.

ಗ್ರಾಪಂನಲ್ಲಿ ದಾಖಲೆಗಳಿಲ್ಲ: ಖಾಸಗಿ ಮಾಲಿಕತ್ವ ಭೂಮಿಯಲ್ಲಿರುವ ಈ ಶಾಲಾ ಕಟ್ಟಡದಲ್ಲಿ ಮೂರು ಶಾಲಾ ಕೊಠಡಿಗಳಿವೆ. ಒಂದು ಮುಖ್ಯೋಪಾಧ್ಯಾಯರ ಕೊಠಡಿ ಇದೆ. ಒಂದನೇ ತರಗತಿಯಿಂದ 5ನೇ ತರಗತಿವರೆಗೆ ತರಗತಿಗಳು ಇಲ್ಲಿ ನಡೆಯುತ್ತಿದ್ದು, ಶೌಚಾಲಯ, ಮೂತ್ರಾಲಯ ಇದೆ. ಮೈದಾನವೂ ಇದ್ದು ಜತೆಗೆ ಒಂದು ಕೊಳವೆ ಬಾವಿ ವಿದ್ಯುತ್‌ ಸೌಲಭ್ಯ ಒಳಗೊಂಡಿದೆ. ಕಳೆದ ಕೆಲ ವರ್ಷಗಳಿಂದ ಇವುಗಳ ದುರಸ್ತಿ ನಿರ್ವಹಣೆಗೆ ಗ್ರಾಪಂ ನಿಂದ ಸಹಕಾರ ಅನುದಾನ ಸಿಗುತ್ತಿಲ್ಲ. ಕಾರಣ ಗ್ರಾಪಂನಲ್ಲಿ ಈ ಶಾಲೆಯ ಯಾವುದೇ ದಾಖಲೆಗಳಿಲ್ಲ.

ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಇನ್ನಾದರೂ ಸರಕಾರದ ಹೆಸರಿನಲ್ಲಿ ಮಾಡಿಕೊಳ್ಳಲು ಮುಖ್ಯಾಧ್ಯಾಪಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕು.

ಕುಸಿಯುತ್ತಲೇ ಇದೆ ಮಕ್ಕಳ ದಾಖಲಾತಿ:

3 ವಿದ್ಯಾರ್ಥಿನಿಯರು 2005ರಲ್ಲಿ ಈ ಶಾಲೆಗೆ ಸರಕಾರದಿಂದ ಅನುಮತಿ ನೀಡಲಾಗಿದೆ, 2010-11ರ ಶಾಲಾ ಶೈಕ್ಷಣಿಕ ವರ್ಷದಲ್ಲಿ 9 ಮಕ್ಕಳ ದಾಖಲಾತಿಯೊಂದಿಗೆ ಆರಂಭಗೊಂಡ ಶಾಲೆ, 2011-12ರಲ್ಲಿ 4 ವಿದ್ಯಾರ್ಥಿಗಳು, 2012-13ರಲ್ಲಿ 5 ವಿದ್ಯಾರ್ಥಿಗಳು, 2013-14ರಲ್ಲಿ 5 ವಿದ್ಯಾರ್ಥಿಗಳು, 2014-15ರಲ್ಲಿ ಕೆಲ ಕಾರಣದಿಂದ ಶಾಲೆ ಬಂದ್‌ ಆಗಿತ್ತು, 2015-16ರಲ್ಲಿ 6 ವಿದ್ಯಾರ್ಥಿಗಳು, 2016-17ರಲ್ಲಿ 4 ವಿದ್ಯಾರ್ಥಿಗಳು, 2017-18ರಲ್ಲಿ 1 ವಿದ್ಯಾರ್ಥಿ, 2018-19ರಲ್ಲಿ 1 ವಿದ್ಯಾರ್ಥಿ, 2019-20ರಲ್ಲಿ ಯಾರೊಬ್ಬರೂ ಈ ಶಾಲೆಗೆ ಹೊಸದಾಗಿ ದಾಖಲಾತಿ ಮಾಡಿಕೊಂಡಿಲ್ಲ, ಕಳೆದ ನಾಲ್ಕು ವರ್ಷದಿಂದ ಮಕ್ಕಳ ದಾಖಲಾತಿ ಕುಸಿಯುತ್ತ ಬಂದಿದೆ. ಪ್ರಸಕ್ತ ವರ್ಷ ಎರಡನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿನಿ, 4 ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1, 3, 5ನೇ ತರಗತಿಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಇಲ್ಲ.
ಈ ಶಾಲೆಯ ಕುರಿತು, ಜಿಲ್ಲಾ ಪಂಚಾಯತ ಸಿಇಒ, ಶಿಕ್ಷಣ ಇಲಾಖೆ ಡಿಡಿಪಿಐ ಅವರ ಕಡೆಯಿಂದ ಮಾಹಿತಿ ಪಡೆದು ತಿಳಿಸುತ್ತೇನೆ, ಏನಾಗಿದೆ ಅಲ್ಲಿ ಎಂದು ಗಮನಿಸಲು ಸಹಿತ ಸೂಚಿಸುತ್ತೇನೆ ಆರ್‌.ರಾಮಚಂದ್ರನ್‌, ಜಿಲ್ಲಾಧಿಕಾರಿ, ಬಾಗಲಕೋಟೆ
ನಾನು ಇಲ್ಲಿಯವರೆಗೆ ಭೂದಾನ ಪತ್ರ ಕೊಟ್ಟಿಲ್ಲ. ಅಕ್ಕಮಹಾದೇವಿ ಶಾಲೆ ಎಂದು ಹೆಸರಿಡಲು ಹೇಳಲಾಗಿತ್ತು. ಆದರೆ ಶಾಲೆಗೆ ಆ ಹೆಸರಿಟ್ಟಿಲ್ಲ. ಅಧಿಕಾರಿಗಳು ನನ್ನ ಬಳಿ ಖುದ್ದು ಬಂದು ಮಾತನಾಡಲಿ. ಮುಂದೆ ಏನು ಮಾಡಬೇಕೆಂಬುದನ್ನು ಯೋಚಿಸುತ್ತೇನೆ.•ಎಸ್‌.ಎನ್‌.ಹೂಗಾರ, ನಿವೃತ್ತ ಶಿಕ್ಷಕ, ಶಾಲೆ ಕಟ್ಟಿದ ಭೂಮಾಲಿಕ
•ಚಂದ್ರಶೇಖರ.ಆರ್‌.ಎಚ್

ಟಾಪ್ ನ್ಯೂಸ್

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ ಪೊಲೀಸರ ಕಾರ್ಯಾಚರಣೆ : ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ioiuo

ಆಕ್ಸಿಜನ್‌ ದುರ್ಬಳಕೆ ತಡೆಗೆ ಜಿಲ್ಲಾಡಳಿತ ಸೂಚನೆ

hjkygjyui

ಜಿಲ್ಲೆಯಲ್ಲಿ 20 ಕೆ.ಎಲ್‌ ಆಕ್ಸಿಜನ್‌ ಸಂಗ್ರಹ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.