
ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ
Team Udayavani, Jan 27, 2021, 7:26 PM IST

ಮಹಾಲಿಂಗಪುರ: ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಹಾಗೂ ಸೇವಾ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಬೆಂಬಲವಾಗಿ ಮಂಗಳವಾರ ಪಟ್ಟಣದಲ್ಲಿ ರೈತರು,ಕಟ್ಟಡ ಕಾರ್ಮಿಕ ಸಂಘದವರು ಹಾಗೂ ನೇಕಾರ ಸೇವಾ ಸಂಘ ಮತ್ತು ಶಿಕ್ಕಲಿಗಾರ ಸಮಾಜದವರು ಟ್ರಾÂಕ್ಟರ್ ಹಾಗೂ ಎತ್ತಿನ ಬಂಡಿ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.
ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ದೆಹಲಿಯಲ್ಲಿ ಸುಮಾರು 62 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಪ್ರಧಾನಿಗಳು ಗಮನಹರಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಇದನ್ನೂ ಓದಿ:FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಪೊಲೀಸ್ ಕಾನ್ಸ್ ಸ್ಟೇಬಲ್ ಸಿಸಿಬಿ ವಶಕ್ಕೆ
ಸಂಘದ ಕಾರ್ಯದರ್ಶಿ ಬಂದು ಪಕಾಲಿ, ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ಮಾತನಾಡಿದರು. ಪುರಸಭೆ ಹಿರಿಯ ಅಭಿಯಂತರ ಡಿ.ಬಿ.ಪಠಾಣ ಅವರಿಗೆ ಮನವಿ ಸಲ್ಲಿಸಿದರು. ಉದ್ದೇಶಿತ ವಿಶ್ವೇಶ್ವರಯ್ನಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಬಂಡಿವಡ್ಡರ, ರೈತ ಮುಖಂಡರಾದ ಶ್ರೀಕಾಂತ ಗೂಳನ್ನವರ, ಕಲೀಲ ಮುಲ್ಲಾ,ಸಿದ್ದಪ್ಪ ಬಡಗಾಂವಿ, ಶ್ರೀಶೈಲ ದೊಡಮನಿ, ಮದು ಮಾವಿನಹಿಂಡಿ, ಶಿವಾನಂದ ಮಾಲಬಸರಿ, ಪರಸು ನಸ್ಲಾಪುರ, ಲಕ್ಷ್ಮಣ ಬ್ಯಾಳಿ, ಶಂಕರ ಸಿಕ್ಕಲಿಗಾರ, ಶರಾಜ ಸಿಕ್ಕಲಿಗಾರ, ಬಾಬಾ ಸಿಕ್ಕಲಿಗಾರ, ರತನ್ ಸಿಕ್ಕಲಿಗಾರ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
