ಹೆಸರಿಗಷ್ಟೇ ರಕ್ಕಸಗಿ ಸಾರ್ವಜನಿಕ ಗ್ರಂಥಾಲಯ

Team Udayavani, Nov 15, 2019, 11:55 AM IST

ಅಮೀನಗಡ: ರಕ್ಕಸಗಿ ಸಾರ್ವಜನಿಕ ಗ್ರಂಥಾಲಯಕ್ಕೆ ವಾರಸುದಾರವಿಲ್ಲದೆ ಸುಮಾರು ಒಂದೂವರೆ ವರ್ಷಗಳಿಂದ ನಿರ್ವಹಣೆ ಸ್ಥಗಿತಗೊಂಡಿದೆ.

ರಕ್ಕಸಗಿ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ ಸುಮಾರು 1860 ಜನಸಂಖ್ಯೆಯಿದ್ದು, 480 ಕುಟುಂಬಗಳಿವೆ. ಗ್ರಾಮದಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ 1500ಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಮೇಲ್ವಿಚಾರಕನ ನಿರ್ಲಕ್ಷತನದಿಂದ ಗ್ರಂಥಾಲಯ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ತಿಂಗಳಿಗೊಮ್ಮೆ , ಎರಡು ತಿಂಗಳಿಗೊಮ್ಮೆ ಗ್ರಂಥಾಲಯದ ಮೇಲ್ವಿಚಾರಕರು ಗ್ರಂಥಾಲಯಕ್ಕೆ ಬರುತ್ತಿವುದರಿಂದ ಗ್ರಂಥಾಲಯಕಟ್ಟಡ ಇದೆ ಎಂಬುದು ಕೆಲವರಿಗೆ ಗೊತ್ತೆ ಇಲ್ಲ.

ಸಹಕಾರ ಇದೆ-ನಿರ್ವಹಣೆ ಇಲ್ಲ: ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಗ್ರಾಪಂ ವತಿಯಿಂದ ಖಾಸಗಿಬಾಡಿಗೆ ಕಟ್ಟಡ ಪಡೆದು ಗ್ರಾಪಂ ವತಿಯಿಂದ ಬಾಡಿಗೆ ಹಣ ನೀಡಲಾಗುತ್ತದೆ. ನಿರ್ವಹಣೆ ಕೊರತೆಯಿಂದ ಓದುಗರು ಗ್ರಂಥಾಲಯದಿಂದ ದೂರ ಉಳಿಯುವಂತಾಗಿದೆ.

ಬಾರದ ಮೇಲ್ವಿಚಾರಕ: ಗ್ರಾಪಂ ಅಧಿ ಕಾರಿಗಳು, ಜನಪ್ರತಿನಿಧಿ ಗಳು ಗ್ರಂಥಾಲಯ ಮೇಲ್ವಿಚಾರಕರಿಗೆ ತಿಳಿವಳಿಕೆ ನೀಡಿದರೂ ಬದಲಾವಣೆಯಾಗಿಲ್ಲ. ಓದುಗರು ಗ್ರಂಥಾಲಯ ಇಲಾಖೆಯ ಅ ಧಿಕಾರಿಗಳಿಗೆ ಮತ್ತು ಮೇಲ್ವಿಚಾರಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ ರಕ್ಕಸಗಿ ಗ್ರಾಪಂಗೆ ಬರುವ ದಿನಪತ್ರಿಕೆಗಳನ್ನು ಗ್ರಂಥಾಲಯದ ಮೇಲ್ವಿಚಾರಕ ತೆಗೆದುಕೊಂಡು ಪತ್ರಿಕೆಯ ಮುಖಪುಟದಲ್ಲಿ ಅದಕ್ಕೆ ಗ್ರಾಪಂ ಗ್ರಂಥಾಲಯ ಎಂದು ಬರೆದು ಅದಕ್ಕೆ ತಮ್ಮ ಹೆಸರು ಬರೆದು ಸಹಿ ಹಾಕುತ್ತಾರೆ. ¤ ಗ್ರಂಥಾಲಯ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಪಂ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಮೂಲೆ ಸೇರಿದ ಪುಸ್ತಕಗಳು: ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕಗಳು ಧೂಳು ತಿಂದು ಹಾಳಾಗುತ್ತಿವೆ. ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಗ್ರಂಥಾಲಯದಲ್ಲಿ ಪುಸ್ತಕಗಳು, ಪತ್ರಿಕೆಗಳು ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಇದನ್ನು ರಕ್ಷಣೆ ಮಾಡುವವರೇ ಇಲ್ಲ. ಬಾಡಿಗೆ ಕಟ್ಟಡದಲ್ಲಿರುವ ಗ್ರಂಥಾಲಯಕ್ಕೆ ನಾಮಫಲಕವೇ ಇಲ್ಲ, ವೇಳಾಪಟ್ಟಿ ಇಲ್ಲ. ಓದುಗರಿಗೆ ಕುಳಿತುಕೊಳ್ಳಲು ಕುರ್ಚಿ, ಟೇಬಲ್‌, ಕುಡಿಯಲು ನೀರಿಲ್ಲ, ಒಳಗೆ ಹೋದರೆ ಒಂದು ಕುರ್ಚಿ ಇದೆ. ಗ್ರಂಥಾಲಯ ಯಾವಾಗಲೂ ತೆರೆದಿರುತ್ತದೆ. ಅದಕ್ಕೆ ಹೇಳುವವರಿಲ್ಲ. ಕೇಳುವವರಿಲ್ಲ. ಮೂಲಸೌಲಭ್ಯಗಳು ಮಾತ್ರ ಇಲ್ಲವೇ ಇಲ್ಲ,

ರಕ್ಕಸಗಿ ಗ್ರಾಪಂಗೆ ನಾನು ಹೊಸದಾಗಿ ಬಂದಿರುವೆ. ಗ್ರಂಥಾಲಯದ ಮೇಲ್ವಿಚಾರಕ ಬರುತಿಲ್ಲ ಎಂಬುದು ನಿಜ. ಆಡಳಿತ ಮಂಡಳಿಯವರು ಮೇಲ್ವಿಚಾರಕನಿಗೆ ಹಲವಾರು ಬಾರಿ ತಿಳಿವಳಿಕೆ ನೀಡಿದರೂ ಸುಧಾರಣೆಯಾಗುತ್ತಿಲ್ಲ. ಬಾಡಿಗೆ ಕಟ್ಟಡದಲ್ಲಿ ಇರುವ ಗ್ರಂಥಾಲಯವನ್ನು ಬೇರೆ ಕಡೆ ಸ್ಥಳಾಂತರ ಮಾಡಿ, ಮೇಲ್ವಿಚಾರಕನ ಮೇಲೆ ಶಿಸ್ತು ಕ್ರಮ ಕೈಗೊಂಡು ಬೇರೆ ವ್ಯವಸ್ಥೆ ಮಾಡುವುದರ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. ಎಚ್‌.ವೈ. ಆವಿನ, ಪಿಡಿಒ ರಕ್ಕಸಗಿ ಗ್ರಾಪಂ

 

-ಎಚ್‌.ಎಚ್‌. ಬೇಪಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ