ಇದ್ದೂ ಇಲ್ಲದಂತಿರುವ ಶುದ್ಧೀಕರಣ ಘಟಕಗಳು

Team Udayavani, Oct 4, 2019, 2:15 PM IST

ಗುಳೇದಗುಡ್ಡ: ಎಲ್ಲೆಂದರಲ್ಲಿ ತುಕ್ಕು ಹಿಡಿದ ಯಂತ್ರ.. ಅದರಿಂದಲೇ ಫಿಲ್ಟರ್‌ ಆಗಿ ಬರುವ ಜಂಗು ವಾಸನೆ ಹೊಂದಿರುವ ನೀರು… ಇದು ಸಮೀಪದ ಕೋಟೆಕಲ್‌ ಗ್ರಾಪಂ ವ್ಯಾಪ್ತಿಗೆ ಬರುವ ತೋಗುಣಶಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕದ ಕಥೆ-ವ್ಯಥೆ.

ಇದೇ ಘಟಕದಿಂದ ಜನರಿಗೆ ನಿತ್ಯ ನೀರು ಸಿಗುತ್ತದೆಯೇನೋ ನಿಜ ಆದರೆ ಆ ನೀರು ಬಳಕೆ ಮಾಡಲು ಜನರು ಭಯಪಡುವಂತಾಗಿದೆ. ಅಷ್ಟರಮಟ್ಟಿಗೆ ಯಂತ್ರಗಳು ತುಕ್ಕು ಹಿಡಿದಿವೆ. ಆದರೂ ಇದುವರೆಗೂ ಅಧಿ ಕಾರಿಗಳು ಕಣ್ಣೆತ್ತಿ ನೋಡದಿರುವುದು ವಿಪರ್ಯಾಸ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವತಿಯಿಂದ 2017-18ನೇ ಸಾಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಯೋಜನೆಯಲ್ಲಿ ಸುಮಾರು 11ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ಆರಂಭಿಸಲಾಗಿದೆ. ಘಟಕ ನಿರ್ಮಿಸಿ ಇನ್ನೂ 2 ವರ್ಷ ಕಳೆದಿಲ್ಲ. ಅಷ್ಟರಲ್ಲೇ ಯಂತ್ರಗಳು ತುಕ್ಕು ಹಿಡಿಯುತ್ತಿದ್ದು, ಅದರ ಮೂಲಕವೇ ಫಿಲ್ಟರ್‌ ಆದ ನೀರನ್ನು ಜನ ನಿತ್ಯ ಕುಡಿಯುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಜಂಗು ವಾಸನೆ: ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿರುವುದರಿಂದ ಫಿಲ್ಟರ್‌ ಆಗಿ ಬರುವ ನೀರು ಜಂಗು ವಾಸನೆ ಬೀರುತ್ತಿದ್ದು, ಬೇರೆ ದಾರಿಯಿಲ್ಲದೇ ಅದೇ ನೀರನ್ನು ಬಳಸುವಂತಾಗಿದೆ. ಈ ನೀರು ಸೇವಿಸಿ ಆರೋಗ್ಯ ಹದಗೆಟ್ಟರೆ ಯಾರು ಹೊಣೆ ಎಂಬುದು ಗ್ರಾಮಸ್ಥರ ಪ್ರಶ್ನೆ. ಇಲಾಖೆ 5 ವರ್ಷಗಳ ಕಾಲ ಗದಗ ಮೂಲದ ಗುತ್ತಿಗೆದಾರರಿಗೆ ಘಟಕ ನಿರ್ವಹಣೆಯನ್ನು ನೀಡಿದೆ. ಆದರೆ ಆ ಗುತ್ತಿಗೆದಾರರು ಇದುವರೆಗೂ ಬಂದು ಘಟಕದ ಪರಿಸ್ಥಿತಿಯನ್ನು ಗಮನಿಸಿಲ್ಲ. ಶುದ್ಧೀಕರಣ ಘಟಕಕ್ಕೆ ಕ್ಯಾಂಡಲ್‌ ಅಳವಡಿಸಿಲ್ಲ. ಈ ರೀತಿ ನಿರ್ಲಕ್ಷ ವಹಿಸುತ್ತಿರುವುದರಿಂದ ಯಂತ್ರಗಳು ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ತೋಗುಣಶಿ ಗ್ರಾಮದ ಶುದ್ಧೀಕರಣ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿರುವ ಬಗ್ಗೆ ಪಂಚಾಯಿತಿ ಅ ಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರೂ ಗಮನ ಹರಿಸುತ್ತಿಲ್ಲ. ಕೂಡಲೇ ಅ ಧಿಕಾರಿಗಳು ಯಂತ್ರಗಳನ್ನು ದುರಸ್ತಿಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗ್ರಾಮದ ಶುದ್ಧೀಕರಣ ಘಟಕ ತುಕ್ಕು ಹಿಡಿದಿರುವ ಬಗ್ಗೆ ಮಾಹಿತಿಯಿದ್ದು, ಗದುಗಿನ ಪೂಜಾರಿ ಎಂಬುವರಿಗೆ ತೋಗುಣಶಿ ಗ್ರಾಮದ ಶುದ್ಧೀಕರಣ ಘಟಕ ನಿರ್ವಹಣೆಗೆ ಕೊಡಲಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ದುರಸ್ತಿ ಮಾಡುವಂತೆ ಸೂಚಿಸಿದ್ದು, 2-3ದಿನಗಳಲ್ಲೇ ಘಟಕ ದುರಸ್ತಿಗೊಳಿಸಲಾಗುವುದು.-ಎನ್‌.ಎಸ್‌. ಪತಂಗೆ, ಕಿರಿಯ ಅಭಿಯಂತರ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ

 

-ಮಲ್ಲಿಕಾರ್ಜುನ ಕಲಕೇರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ನದಿಗಳ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ವಿಶ್ವ ಪಾರಂಪರಿಕ ಪ್ರವಾಸಿ ತಾಣ ಪಟ್ಟದಕಲ್ಲ, ರಾಷ್ಟ್ರೀಯ ಸ್ಮಾರಕಗಳಾದ ಐಹೊಳೆ ಹಾಗೂ ಕೂಡಲಸಂಗಮ...

  • ಬೀಳಗಿ: ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ...

  • ಬಾಗಲಕೋಟೆ: ಚಂಡಿಗಡ ಮಾದರಿಯಲ್ಲಿ ನವನಗರ 1ಮತ್ತು 2ನೇ ಯೂನಿಟ್‌ ನಿರ್ಮಿಸಿದ್ದು 3ನೇ ಯೂನಿಟ್‌ಗೆ ಬೆಂಗಳೂರು ಮಹಾನಗರದ ಬ್ಲಾಕ್‌ ಮಾದರಿಯಲ್ಲಿ ನಿರ್ಮಾಣಕ್ಕೆ ಬಾಗಲಕೋಟೆ...

  • ಬೀಳಗಿ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಸಿಬ್ಬಂದಿಯ ಕೊರತೆ ಹಾಗೂ ಅಗತ್ಯ ಮೂಲ ಸೌಲಭ್ಯಗಳಿಲ್ಲದೆ ಸೊರಗಿ ಸುಣ್ಣಾಗಿರುವ ಸ್ಥಳೀಯ ಉಪನೋಂದಣಿ ಇಲಾಖೆಗೆ ತಮ್ಮ...

  • ಬಾಗಲಕೋಟೆ: ರಾಜ್ಯದ ಎಲ್ಲ ಲಂಬಾಣಿ ತಾಂಡಾಗಳನ್ನು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ...

ಹೊಸ ಸೇರ್ಪಡೆ