ರವದಿ ಸುಟ್ಟು ಸಮಸ್ಯೆಗೆ ಸಿಲುಕುತ್ತಿದ್ದಾರೆ ರೈತರು

Team Udayavani, Dec 18, 2019, 11:55 AM IST

bk-tdy-2

ಮುಧೋಳ: ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರು ಕಬ್ಬು ಕಟಾವು ಬಳಿಕ ಅದರ ರವದಿ ವಿಲೇವಾರಿಗೆ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕ್ರಮದಿಂದ ಭೂಮಿಯ ಫಲವತ್ತತೆ ಕಡಿಮೆ ಆಗುವುದರೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ.

ರೈತರು ರವದಿ ಸುಡುವುದರಿಂದ ಭೂಮಿಯಲ್ಲಿರುವ ಎರೆ ಹುಳುಗಳು ಸೇರಿದಂತೆ ಕೃಷಿಗೆ ಪೂರಕ ವಾತಾವರಣ ನಿರ್ಮಿಸುವ ಸೂಕ್ಷ್ಮ ಜೀವಿಗಳು ಸಾಯುವುದರಿಂದ ಭೂಮಿಗೆ ಅವಶ್ಯವಾಗಿ ಬೇಕಾದ ಸಾವಯವ ಗೊಬ್ಬರ ಅಂಶ ಕಡಿಮೆಯಾಗುತ್ತದೆಯಲ್ಲದೇ ಭೂಮಿಯ ತೇವಾಂಶದ ಕೊರತೆಯೂ ಎದುರಾಗುತ್ತದೆ. ಕೃಷಿ ಕ್ಷೇತ್ರ ಇಂದು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದೆ. ಕಬ್ಬಿನ ರವದಿ ವೈಜ್ಞಾನಿಕ ವಿಲೇವಾರಿಗೆ ಹೆಚ್ಚು ಕಾರ್ಮಿಕರ ಅವಶ್ಯವಿರುವ ಕಾರಣ ಕೆಲ ರೈತರು ಅನಿವಾರ್ಯವಾಗಿ ರವದಿ ಸುಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ರವದಿ ಸುಡುವ ಕಾರ್ಯ ಶೀಘ್ರವಾಗುತ್ತದೆ ಅಲ್ಲದೇ ಕಾರ್ಮಿಕರ ಅವಶ್ಯಕತೆಯೂ ಬೀಳುವುದಿಲ್ಲ. ಹೀಗಾಗಿ ರೈತರು ಸುಡಲು ಮುಂದಾಗುತ್ತಿದ್ದಾರೆ. ರವದಿ ಸುಡುವುದರಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತದೆ.

ಕಬ್ಬಿನ ಹೊಲದಲ್ಲಿನ ರವದಿ ಸುಟ್ಟ ಬಳಿಕ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೇ ಬೀಳುವುದರಿಂದ ಹೊಲದಲ್ಲಿರುವ ನೀರು ಬೇಗ ಆವಿಯಾಗುತ್ತದೆ. ಒಂದು ವೇಳೆ ರವದಿಯನ್ನು ಸುಡದೆ ಹಾಗೆಯೇ ನೀರು ಹಾಯಿಸಿದರೆ ನೀರು ರವದಿ ಕೆಳಗಡೆ ಇರುವುದರಿಂದ ಭೂಮಿಯಲ್ಲಿ ಹೆಚ್ಚು ತೇವಾಂಶ ಕಾಪಾಡಿಕೊಳ್ಳಬಹುದು. ರವದಿ ಸುಡುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ರವದಿಯ ವೈಜ್ಞಾನಿಕ ವಿಲೇವಾರಿ ಕುರಿತಂತೆ ಕೃಷಿ ಇಲಾಖೆಯಿಂದ ಹಲವು ಬಾರಿ ತರಬೇತಿ ಹಮ್ಮಿಕೊಂಡರೂ ಹೆಚ್ಚು ಪರಿಣಾಮಕಾರಿ ಆಗುತ್ತಿಲ್ಲ. ರೈತರು ತರಬೇತಿ ಕಾರ್ಯಾಗಾರದಲ್ಲಿ ತೋರುವ ಉತ್ಸಾಹವನ್ನು ಕೃಷಿ ಭೂಮಿಯಲ್ಲಿ ತೋರುತ್ತಿಲ್ಲ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆಯಲ್ಲಿ ಹಿಂದುಳಿದಿರುವುದು ರವದಿ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಉಳಿದಿದೆ ಎನ್ನುತ್ತಾರೆ. ಅಧಿಕಾರಿಗಳು. ವಿಲೇವಾರಿಗಿವೆ ಪೂರಕ

ಮಾರ್ಗಗಳು: ಯಂತ್ರೋಪಕರಣಗಳ ಸಹಾಯದಿಂದ ಕಬ್ಬಿನ ರವದಿ ವಿಲೇವಾರಿಯನ್ನು ಸರಳವಾಗಿ ಮಾಡಬಹುದು. ರೋಟರ್‌ ಹೊಡೆದು ರವದಿಯನ್ನು ಪುಡಿ ಮಾಡಿ ಅದರಲ್ಲೇ ನೀರು ಹಾಯಿಸುವುದರಿಂದ ನೀರಿನ ಉಳಿತಾಯದೊಂದಿಗೆರವದಿ ವಿಲೇವಾರಿ ಕಾರ್ಯವನ್ನೂ ಸರಳವಾಗಿ ನಿಭಾಯಿಸಬಹುದು. ಇದರ ಹೊರತಾಗಿ ಬೇಲರ್‌ ಎಂಬ ಯಂತ್ರದ ಮೂಲಕವೂ ರವದಿಯನ್ನು ಚೌಕಾಕಾರದಲ್ಲಿ ಕಟ್ಟಿ ಒಂದು ದೊಡ್ಡ ತಗ್ಗಿನಲ್ಲಿ ಸಂಗ್ರಹಿಸಿ ಅದಕ್ಕೆ ನೀರುಣಿಸುವ ಮೂಲಕ ಸಾವಯವ ಗೊಬ್ಬರ ತಯಾರಿಸಬಹುದು. ಅಲ್ಲದೇ ಈ ರೀತಿ ಕಟ್ಟಿದ ರವದಿಯ ಮಾರಾಟವನ್ನೂ ಮಾಡಬಹುದು.

-ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿ

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಕರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡ ಹಣ ಮರಳಿಸಿದ ಪೊಲೀಸರು

ಶಿಕ್ಷಕರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡ ಹಣ ಮರಳಿಸಿದ ಪೊಲೀಸರು

ಕೈಮಗ್ಗ ನೇಕಾರಿಕೆಗೆ ಮನಸೋತ ಅಧಿಕಾರಿ : ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಮೌರ್ಯ ಭೇಟಿ

ಕೈಮಗ್ಗ ನೇಕಾರಿಕೆಗೆ ಮನಸೋತ ಅಧಿಕಾರಿ : ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಮೌರ್ಯ ಭೇಟಿ

ambulance

ತುರ್ತು ಸೇವೆಗೆ ಮತ್ತೆ ಬಂದಿವೆ 9 ಹೊಸ ಸಾರಥಿ! 108 ಸೇರಿ ಜಿಲ್ಲೆಯಲ್ಲೀಗ 72 ಆಂಬ್ಯುಲೆನ್ಸ್‌

ಅಭಿವೃಧಿ ಕುರಿತು ಪರಿಶೀಲನೆ ನಡೆಸಿದ ಶಾಸಕ ಸಿದ್ದು ಸವದಿ

ಅಭಿವೃಧಿ ಕುರಿತು ಪರಿಶೀಲನೆ ನಡೆಸಿದ ಶಾಸಕ ಸಿದ್ದು ಸವದಿ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.