ಪ್ರವಾಹ-ಕೋವಿಡ್ ಎದುರಿಸಲು ಸಜ್ಜಾಗಿ

ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ

Team Udayavani, Jul 11, 2020, 2:30 PM IST

ಪ್ರವಾಹ-ಕೋವಿಡ್ ಎದುರಿಸಲು ಸಜ್ಜಾಗಿ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಕಳೆದ ವರ್ಷ ಪ್ರವಾಹದಿಂದ ಭೀಕರ ಸಮಸ್ಯೆ ಎದುರಿಸುತ್ತಿದ್ದು, ಈ ಬಾರಿ ಪ್ರವಾಹ ಎದುರಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.

ಜಿ.ಪಂ ಸಭಾ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಪ್ರವಾಹ ಪೂರ್ವ ಹಾಗೂ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಒಳಗಾಗುವ ಗ್ರಾಮಗಳಿಗೆ ತೆರಳಿ ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು. ಆಯಾ ತಾಲೂಕಿನ ತಹಶೀಲ್ದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ಕಾರ್ಯಪ್ರವೃತ್ತರಾಗುವಂತೆ ಆಧಿಕಾರಿಗಳಿಗೆ ತಿಳಿಸಿದರು.

ಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ, ಮನೆ ಹಾನಿ ಕುರಿತು ತಂಡ ರಚನೆ, ಮೇವು ಪೂರೈಕೆ, ಸಹಾಯವಾಣಿ ಕೇಂದ್ರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ಥಾಪಿಸಲು ಸೂಚಿಸಿದರು. ಜನರ ಆರೋಗ್ಯ, ಜಾನುವಾರು ಆರೋಗ್ಯಕ್ಕೆ ಅಗತ್ಯ ಔಷಧಿಗಳ ದಾಸ್ತಾನು, ಮೇವು ಹಾಗೂ ಮುಂತಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಮೂಲಭೂತ ಸೌಲಭ್ಯ, ಗಂಜಿ ಕೇಂದ್ರ, ಗೋ ಶಾಲೆ ಕುರಿತು ಕ್ರಮವಹಿಸಲು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 27 ನಾವೆಗಳಿದ್ದು, ಈ ಪೈಕಿ 19 ಸುಸ್ಥಿತಿಯಲ್ಲಿರುವುದಾಗಿ ತಿಳಿಸಿದರು.

ಅವುಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳಲು ಸೂಚಿಸಿದರು. ಹಿಪ್ಪರಗಿ ಜಲಾಶಯದಲ್ಲಿ ಕೃಷ್ಣಾ ನದಿಯ ಗರಿಷ್ಠ ಮಟ್ಟ 524.87 ಮೀಟರ್‌ ಇದ್ದು, ಇಂದಿನ ಮಟ್ಟ 520.90 ಮೀಟರ್‌ ಇದೆ. ಒಳ ಹರಿವು 65000 ಕ್ಯೂಸೆಕ್‌ ಇದ್ದು, ಹೊರ ಹರಿವು 64000 ಕ್ಯೂಸೆಕ್‌ ಇದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 519.60 ಮೀಟರ ಇದ್ದು, ಇಂದಿನ ಮಟ್ಟ 517 ಮೀಟರ್‌ ಇದೆ. ಒಳ ಹರಿವು 72030 ಕ್ಯೂಸೆಕ್‌ ಇದ್ದು, ಹೊರ ಹರಿವು 16545 ಕ್ಯೂಸೆಕ್‌ ಇದೆ. ಹಿಡಕಲ್‌ ಜಲಾಶಯದಲ್ಲಿ ಫಟಪ್ರಭಾ ನದಿಯ ಗರಿಷ್ಠ ಮಟ್ಟ 2175 ಮೀಟರ್‌ ಇದ್ದು, ಇಂದಿನ ಮಟ್ಟ 2120.33 ಮೀಟರ್‌ ಇದೆ. ಒಳಹರಿವು 17984 ಕ್ಯೂಸೆಕ್‌ ಇದ್ದು, ಹೊರ ಹರಿವು 103 ಕ್ಯೂಸೆಕ್‌ ಇದೆ. ಅದೇ ರೀತಿ ನವೀಲು ತೀರ್ಥ ಜಲಾಶಯದಲ್ಲಿ ಮಲಪ್ರಭಾ ನದಿಯ ಗರಿಷ್ಠ ಮಟ್ಟ 2079.50 ಮೀಟರ್‌ ಇದ್ದು, ಇಂದಿನ ಮಟ್ಟ 13.896 ಮೀಟರ್‌ ಇದೆ. ಒಳ ಹರಿವು 19095 ಕ್ಯೂಸೆಕ್‌ ಇದ್ದು, ಹೊರ ಹರಿವು 1364 ಕ್ಯೂಸೆಕ್‌ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಪ್ರವಾಹ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಪಂ ಸಿಇಒ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವಮುರಗಿ, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

ಬಿ.ವೈ.ವಿಜಯೇಂದ್ರ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

fftytry

ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ 

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಕನ್ನಡ ನಾಡು-ನುಡಿ ಅಭಿಮಾನ ಬೆಳೆಸಿಕೊಳ್ಳಿ; ಮಾಜಿ ಶಾಸಕ ರಾಜಶೇಖರ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕರ ಪಥ ಸಂಚಲನ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ

ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ

ಬಿ.ವೈ.ವಿಜಯೇಂದ್ರ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

8vote

ಕಾಂಗ್ರೆಸ್‌ ಪರ ಮಾಜಿ ಸಚಿವ ಮಹಾದೇವಪ ಮತಯಾಚನೆ

ದೀಪಗಳ ಉತ್ಸವಕ್ಕೆ ಚಾಲನೆ

ದೀಪಗಳ ಉತ್ಸವಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.