ಪ್ರವಾಹಕ್ಕೆ ರಸ್ತೆ ಹಾನಿ : ದುರಸ್ಥಿಗೆ ಡಿಸಿಎಂಗೆ ಸವಾಲು ಹಾಕಿದ ಪುಟ್ಟ ಬಾಲಕಿ

ನೀರಿನಲ್ಲಿ ನಿಂತು ಒತ್ತಾಯಿಸುವ ಬಾಲಕಿಯ ವಿಡಿಯೋ ವೈರಲ್

Team Udayavani, Oct 22, 2019, 6:00 PM IST

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಕೋಡಿಹಾಳ ತೋಟದ 17ನೇ ವಾರ್ಡಿನ ಬಾಲಕಿಯೊಬ್ಬಳು ಜಲಾವೃತವಾಗಿರುವ ರಸ್ತೆಯ ನೀರಿನಲ್ಲಿ ನಿಂತು , ರಸ್ತೆ ದುರಸ್ತಿಗಾಗಿ ಅಧಿಕಾರಿಗಳು ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವದರಿಂದಾಗಿ ರನ್ನ ಬೆಳಗಲಿ ಪಟ್ಟಣದ 17 ವಾರ್ಡಿನ ಕೋಡಿಹಾಳ ವಸತಿ ಯಲ್ಲಿನ ಅನ್ನಪೂರ್ಣ ಬಾಳಪ್ಪ ಮಠದ ಎಂಬ ಪುಟ್ಟ ಬಾಲಕಿಯು ಮಳೆಯಿಂದ ತೊಂದರೆಯಾಗಿರುವ ತಮ್ಮ ವಾರ್ಡಿನ ಮತ್ತು ಹದಗೆಟ್ಟ ರನ್ನಬೆಳಗಲಿ ಚಿಮ್ಮಡ ರಸ್ತೆಯ ದುರಸ್ತಿ ಮಾಡಬೇಕೆಂದು ವಾರ್ಡಿನ ಸದಸ್ಯರು, ಪಪಂ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಹಾಗೂ ಮುಧೋಳ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರ್ಕಾರದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ