ರೇಡಿಯಂ-ಸೂಚನಾ ಫಲಕವಿಲ್ಲದ ರಸ್ತೆ ವಿಭಜಕ!

Team Udayavani, May 12, 2019, 3:04 PM IST

bag-7

ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಹತ್ತಿರ ಹಾಗೂ ಬೀಳಗಿ ಕ್ರಾಸ್‌ ಬಳಿ 218ರ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ (ಡಿವೈಡರ್‌) ಯಾವುದೇ ಸೂಚನಾ ಫಲಕ, ರೇಡಿಯಂ ಇಲ್ಲದ ಪರಿಣಾಮ, ಹಲವಾರು ಅಪಘಾತಗಳಿಗೆ ಕಾರಣವಾಗುವ ಮೂಲಕ ಜೀವಬಲಿಗಾಗಿ ಕಾಯ್ದುಕುಳಿತಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಆದರೆ, ಈ ರಸ್ತೆ ವಿಭಜಕಕ್ಕೆ ರೇಡಿಯಂ ಅಳವಡಿಸಿಲ್ಲ. ಅಲ್ಲದೆ, ರಸ್ತೆ ವಿಭಜಕ ಆರಂಭವಾಗುತ್ತದೆ ಎನ್ನುವ ಕುರಿತು ಮುಂಚಿತವಾಗಿ ಯಾವುದೇ ಎಚ್ಚರಿಕೆಯ ನಾಮಫಲಕ ಅಳವಡಿಸಿಲ್ಲ. ಪರಿಣಾಮ, ಕಳೆದೆರಡು ತಿಂಗಳಲ್ಲಿಯೇ ಸುಮಾರು ಹನ್ನೆರಡಕ್ಕೂ ಹೆಚ್ಚು ವಾಹನಗಳು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ .

ಬಾಡಗಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಡಿವೈಡರ್‌ಗೆ ಲಾರಿ ಡಿಕ್ಕಿ ಹೊಡೆದು ವಿಭಜಕದಲ್ಲಿ ಸಿಕ್ಕಿಕೊಂಡಿದೆ. ಘಟನೆ ನಡೆದು ನಾಲ್ಕು ದಿನ ಗತಿಸಿದರೂ ಕೂಡ ಇನ್ನೂ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿಲ್ಲ. ಪರಿಣಾಮ, ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಡಿವೈಡರ್‌ಗೆ ಅಪಘಾತಕ್ಕೊಳಗಾಗಿ ನಿಂತಿರುವ ಈ ವಾಹನಕ್ಕೆ ಟಕ್ಕರ್‌ ಕೊಡುವ ಸಾಧ್ಯತೆ ಹೆಚ್ಚಿದೆ. ಡಿವೈಡರ್‌ಗೆ ಅಪ್ಪಳಿಸಿದ ಈ ಲಾರಿ ರವುಗೊಳಿಸುವ ಮುನ್ನವೇ ಬಾಡಗಂಡಿ ಗ್ರಾಮದ ಬಳಿ ಹೊಸ ಕಾರು ಡಿವೈಡರ್‌ಗೆ ಅಪ್ಪಳಿಸಿದ ಘಟನೆ ನಡೆದಿದೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಪದೆ, ಪದೆ ವಾಹನಗಳು ಡಿವೈಡರ್‌ಗೆ ಅಪ್ಪಳಿಸುತ್ತಿದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ಡಿವೈಡರ್‌ಗೆ ರೇಡಿಯಂ ಅಳವಡಿಸುವುದು ಹಾಗೂ ಸೂಚನಾ ಫಲಕ ಹಾಕುವ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ರಸ್ತೆ ವಿಭಜಕ ಕುರಿತು ರೇಡಿಯಂ, ನಾಮಫಲಕ ಹಾಕಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅನಾಹುತ ತಡೆಯಲು ಮುಂದಾಗಬೇಕೆಂದು ವಾಹನ ಸವಾರರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

4-letter-1

ಸತ್ತ 9 ವರ್ಷದ ಬಳಿಕ ತಂದೆ ಬರೆದ ಪತ್ರ ಪತ್ತೆ:ಮಕ್ಕಳಿಗೆ ಹೇಳಿದ ಸಂದೇಶವೇನು?; ಪೋಸ್ಟ್ ವೈರಲ್‌

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ : ಜನಜೀವನ ಅಸ್ತವ್ಯಸ್ಥ, ರಕ್ಷಣಾ ಕಾರ್ಯ ಚುರುಕು

ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ : ಜನಜೀವನ ಅಸ್ತವ್ಯಸ್ಥ, ರಕ್ಷಣಾ ಕಾರ್ಯ ಚುರುಕು

3-egg

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ 9 ಮಂದಿ ಹಿಂದೂ ಕಾರ್ಯಕರ್ತರ ವಿರುದ್ದ ಎಫ್‌ಐಆರ್

ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ

ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ

2-car

ಲಾರಿಗೆ ಕಾರು ಢಿಕ್ಕಿ: ತಂದೆ, ಮಗಳು ಸಾವು; ಮಗು ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gdgdfg

ಮೊಟ್ಟೆ ಎಸೆತ ಖಂಡಿಸಿ ಬಾದಾಮಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

21

ಕೋಟಿ ಕೋಟಿ ಖರ್ಚಾದರೂ ತುಂಬದ ನೀರು!

ಸತ್ತರೆ ಹೂಳಲು ಜಾಗವಿಲ್ಲ ; ರೊಚ್ಚಿಗೆದ್ದ ಗ್ರಾಮಸ್ಥರು

ಸತ್ತರೆ ಹೂಳಲು ಜಾಗವಿಲ್ಲ ; ರೊಚ್ಚಿಗೆದ್ದ ಗ್ರಾಮಸ್ಥರು

ಮೋದಿ ಭದ್ರತೆಗೆ ಮುಧೋಳ ಶ್ವಾನ: ಸೇನೆ-ಎನ್‌ಎಸ್‌ಜಿ ಪಡೆಗೂ ಆಯ್ಕೆಯಾಗಿದ್ದ ವಿಶಿಷ್ಟ ತಳಿ

ಮೋದಿ ಭದ್ರತೆಗೆ ಮುಧೋಳ ಶ್ವಾನ: ಸೇನೆ-ಎನ್‌ಎಸ್‌ಜಿ ಪಡೆಗೂ ಆಯ್ಕೆಯಾಗಿದ್ದ ವಿಶಿಷ್ಟ ತಳಿ

ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ನಿರಂತರ

ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ನಿರಂತರ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

7-telengana

ತೆಲಂಗಾಣಕ್ಕೆ ರಾಯಚೂರು ವಿಲೀನ ಹೇಳಿಕೆಗೆ ಆಕ್ರೋಶ

6award

ಛಾಯಾಗ್ರಹಣ ದಿನಾಚರಣೆ; ಪುರಸ್ಕೃತರಿಗೆ ಸನ್ಮಾನ

4-letter-1

ಸತ್ತ 9 ವರ್ಷದ ಬಳಿಕ ತಂದೆ ಬರೆದ ಪತ್ರ ಪತ್ತೆ:ಮಕ್ಕಳಿಗೆ ಹೇಳಿದ ಸಂದೇಶವೇನು?; ಪೋಸ್ಟ್ ವೈರಲ್‌

5photo-‘

ಛಾಯಾಗ್ರಾಹಕರಿಗೆ ಭದ್ರತೆ ಒದಗಿಸಿ: ತೇಗಲತಿಪ್ಪಿ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.