ರೈತರ ಹೋರಾಟಕ್ಕೆ ಮಣಿದ ಸಮೀರವಾಡಿ ಕಾರ್ಖಾನೆ; ದರ ಘೋಷಣೆ

ಗೋದಾವರಿ ಕಾರ್ಖಾನೆಯಿಂದ 2022-23 ನೇ ಸಾಲಿಗೆ 2900 ರೂ.

Team Udayavani, Nov 7, 2022, 9:57 PM IST

1-adsadad

ಮಹಾಲಿಂಗಪುರ : ಕಳೆದ ಒಂದು ವಾರದಿಂದ ಕಬ್ಬಿನ ದರ ಘೋಷಣೆಗಾಗಿ ರೈತ ಸಂಘ ಮತ್ತು ರೈತರು ನಡೆಸಿದ್ದ ಹೋರಾಟಕ್ಕೆ ಮಣಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ಸೋಮವಾರ ರಾತ್ರಿ 9ಕ್ಕೆ 2022-23 ನೇ ಸಾಲಿನ ಮೊದಲ ಕಂತಿನ ಕಬ್ಬಿನ ಬಿಲ್ 2900 ರೂ. ಕೊಡುವದಾಗಿ ಘೋಷಿಸಿತು.

ಕಬ್ಬಿನ ದರ ಘೋಷಣೆಗಾಗಿ ಶನಿವಾರ ರೈತ ಸಂಘ ಮತ್ತು ಸಮೀರವಾಡಿ ಕಬ್ಬು ಬೆಳೆಗಾರರ ಸಂಘದಿಂದ ನಡೆದಿದ್ದ ಸಭೆ ವಿಫಲವಾಗಿ ಸಭೆಯನ್ನು ನ.7ರ ಸೋಮವಾರಕ್ಕೆ ಮುಂದೂಡಲಾಗಿತ್ತು.

ಇಂದು ಸೋಮವಾರ ಮುಂಜಾನೆ 10 ರಿಂದ ರಾತ್ರಿ 9ವರೆಗೂ ರೈತ ಸಂಘ , ಕಬ್ಬು ಬೆಳಗಾರ ಸಂಘ ಮತ್ತು ಕಾರ್ಖಾನೆ ಅಧಿಕಾರಿಗಳ ಮಧ್ಯೆ ದರ ಸಮರಕ್ಕಾಗಿ ಹಗ್ಗಜಗ್ಗಾಟ ನಡೆದು ಅಂತಿಮವಾಗಿ ರೈತ ಸಂಘ ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ರೈತರು 2900 ದರ ನೀಡಬೇಕೆಂಬಬಿಗಿಪಟ್ಟಿಗೆ ಮಣಿದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಭಕ್ಷಿಯವರು ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ 2022-23 ನೇ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ ಮೊದಲ ಕಂತಿಗೆ 2900 ದರ ನೀಡಲು ಒಪ್ಪಿದೆ ಎಂದು ಘೋಷಿಸಿದರು.

ಈ ಮೂಲಕ ಪ್ರಸಕ್ತ ಸಾಲಿನ ಕಬ್ಬಿನ ದರ ಘೋಷಣೆಗಾಗಿ ಅ. 29 ರಂದು ಮನವಿ ಅರ್ಪಣೆ, ನಂತರ ಕಾರ್ಖಾನೆ ಮುತ್ತಿಗೆ, ರೈತ ಸಂಘ ಮತ್ತು ಕಬ್ಬುಬೆಳೆಗಾರ ಸಂಘದ ಸಭೆಗಳು ನಡೆದಿದ್ದವು.

ಸಭೆಯಲ್ಲಿ ಗಲಾಟೆ : ಬನಹಟ್ಟಿ ಸಿಪಿಐ ಸೇರಿ ಹಲವರಿಗೆ ಗಾಯ

ದರ ನಿಗದಿ ಸಭೆಯಲ್ಲಿ ಸುಮಾರು 5-6 ಸಾವಿರ ರೈತರು ಭಾಗವಹಿಸಿದ್ದರು. ಸೋಮವಾರ ರಾತ್ರಿ 9ವರೆಗೆ ಸಭೆ ನಡೆದರೂ ದರ ಘೋಷಣೆಯಾಗದ ಹಿನ್ನಲೆಯಲ್ಲಿ ಉದ್ರಿಕ್ತ ಹೋರಾಟಗಾರು ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ಗಲಾಟೆಯಲ್ಲಿ ಅವರನ್ನು ರಕ್ಷಿಸಲು ಹೋದ ಬನಹಟ್ಟಿ ಸಿಪಿಆಯ್ ಆಯ್.ಎಂ.ಮಠಪತಿ ಹಾಗೂ ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದರ್ ಮೇಡಂ ಅವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾಗಿವೆ. ಗಲಾಟೆಯಲ್ಲಿ 3-4 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.

ರಾತ್ರಿ 9 ಕ್ಕೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂದು ಎಚ್ಚೆತ್ತ ಕಾರ್ಖಾನೆಯವರು 2900 ದರ ಘೋಷಿಸಿ, ಮತ್ತಷ್ಟು ಆಗಬಹುದಾದ ಅನಾಹುತ ವನ್ನು ತಪ್ಪಿಸಿದ್ದಾರೆ. ಬನಹಟ್ಟಿ ಸಿಪಿಆಯ್ ಐ.ಎಂ.ಮಠಪತಿ, ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದಾರ ಅವರು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂತಿಮವಾಗಿ ರೈತ ಸಂಘ ಮತ್ತು ರೈತರು ಮಾಡಿದ ಹೋರಾಟಕ್ಕೆ ಜಯ ದೊರೆತಿದೆ. ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಕಾರ್ಯದರ್ಶಿ ರಂಗನಗೌಡ ಪಾಟೀಲ್, ರೈತ ಸಂಘದ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಬಸವಂತಪ್ಪ ಕಾಂಬಳೆ, ಯಂಕಣ್ಣ ಮಳಲಿ, ಬಂದು ಪಕಾಲಿ ಸೇರಿದಂತೆ ಸಾವಿರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಮಹಾಲಿಂಗಪುರ ಠಾಣಾಧಿಕಾರಿ ವಿಜಯಕುಮಾರ ಕಾಂಬಳೆ ಹಾಗೂ ಪೊಲೀಸ್ ಸಿಬ್ಬಂದಿ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಟಾಪ್ ನ್ಯೂಸ್

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

1-sadsadsd

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

goa budget

ಗೋವಾ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೇಮರಡ್ಡಿ ಮಲ್ಲಮ್ಮ ತತ್ವಾದರ್ಶ ಪಾಲಿಸಿ; ಆರ್‌.ಎಸ್‌.ತಳೇವಾಡ

ಹೇಮರಡ್ಡಿ ಮಲ್ಲಮ್ಮ ತತ್ವಾದರ್ಶ ಪಾಲಿಸಿ; ಆರ್‌.ಎಸ್‌.ತಳೇವಾಡ

ಸಿಎಂ ಕುರ್ಚಿಗೆ ಹಲವರ ತಿರುಕನ ಕನಸು: ಯಡಿಯೂರಪ್ಪ

ಸಿಎಂ ಕುರ್ಚಿಗೆ ಹಲವರ ತಿರುಕನ ಕನಸು: ಯಡಿಯೂರಪ್ಪ

ಸಿದ್ದರಾಮಯ್ಯಗೆ ಸೋಲು ಖಚಿತ: ಮುರುಗೇಶ ನಿರಾಣಿ

ಸಿದ್ದರಾಮಯ್ಯಗೆ ಸೋಲು ಖಚಿತ: ಮುರುಗೇಶ ನಿರಾಣಿ

ಮಹಾವೀರ ವೃತ್ತ ಸುತ್ತ ಮಾಂಸಾಹಾರ ಮಾರಾಟ ನಿಷೇಧಕೆ ಕ್ರಮ

ತೇರದಾಳ: ಮಹಾವೀರ ವೃತ್ತ ಸುತ್ತ ಮಾಂಸಾಹಾರ ಮಾರಾಟ ನಿಷೇಧಕೆ ಕ್ರಮ

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-sasdsad

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

1-asdsdsd

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

1-qe21ew2qe

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್