ಕೆರೆಕಟ್ಟೆಗಳನ್ನು ಉಳಿಸಿ: ಸಚಿವ ಗೋವಿಂದ ಕಾರಜೋಳ

ಮೂರು ಕೆರೆಗಳ ನಿರ್ಮಾಣದಿಂದ ಏಳು ಸಾವಿರ ಎಕರೆ ಭೂಮಿಗೆ ನೀರು

Team Udayavani, Aug 18, 2021, 2:49 PM IST

ಕೆರೆಕಟ್ಟೆಗಳನ್ನು ಉಳಿಸಿ: ಸಚಿವ ಗೋವಿಂದ ಕಾರಜೋಳ

ಮಹಾಲಿಂಗಪುರ: ಗ್ರಾಮದೊಳಗೆ ನದಿ ನೀರು ಬರಲು ಒತ್ತುವರಿ ಕಾರಣ. ಕೆರೆ ಹಾಗೂ ಹೊಳೆಗಳನ್ನು ಅವುಗಳ ಅಗತ್ಯಕ್ಕೆ ತಕ್ಕಂತೆ ಹಾಗೆಯೇ
ಬಿಟ್ಟಿದ್ದರೆ ಗ್ರಾಮದಲ್ಲಿ ನೀರು ಬರುತ್ತಿರಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ರನ್ನಬೆಳಗಲಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ 9 ಕೋಟಿ 90 ಲಕ್ಷ ರೂ. ವೆಚ್ಚದಲ್ಲಿ ಇಂಗು ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ಪ್ರಕೃತಿ ಮೇಲೆ ದೌರ್ಜನ್ಯ ಆಗಿ ಪ್ರಕೃತಿ ವಿಕೋಪಗಳು
ಸಂಭವಿಸುತ್ತಿವೆ ಎಂದರು.

ಒಂದು ಕೆರೆ ಕಟ್ಟಿದರೆ ನಾಲ್ಕು ಊರುಗಳು ಬದುಕುತ್ತವೆ. ನಾನು ಮೊದಲನೇ ಬಾರಿ ಶಾಸಕನಾಗಿದ್ದಾಗ ವರ್ಚಗಲ್‌ ಗ್ರಾಮದ ಹತ್ತಿರ ಎರಡು
ಗುಡ್ಡಗಳ ಮಧ್ಯ ಹಳ್ಳಕ್ಕೆ ಕೆರೆ ನಿರ್ಮಾಣ ಮಾಡಿದ್ದೇವೆ. ಈ ಮುಂಚೆ ಆ ಗ್ರಾಮದವರು ನೀರಿಗಾಗಿ ಲೋಕಾಪುರಕ್ಕೆ ಹೋಗಬೇಕಾಗಿತ್ತು. ಬಟಕುರ್ಕಿಗೆ ಲೋಕಾಪುರದಿಂದ ನೀರು ಸರಬರಾಜಾಗುತ್ತಿತ್ತು. ಕೆರೆ ನಿರ್ಮಾಣ ಮಾಡಿದ ನಂತರ ಅಂತರ್ಜಲ ಹೆಚ್ಚಾಗಿ ವರ್ಚಗಲ್‌, ಬಟಕುರ್ಕಿ, ಲೋಕಾಪುರ ರೈತರು ಕಬ್ಬು, ದ್ರಾಕ್ಷಿ ಬೆಳೆಯುತ್ತಿದ್ದಾರೆ. ಅದಕ್ಕಾಗಿ ಗ್ರಾಮಸ್ಥರು ಕೆರೆ ಕಟ್ಟೆಗಳನ್ನು ಉಳಿಸಿ-ರಕ್ಷಿಸಬೇಕು ಎಂದರು.

ಇದನ್ನೂ ಓದಿ:ಸೂರು ಕಳೆದುಕೊಂಡು 6 ವರ್ಷವಾದ್ರೂ ಪರಿಹಾರವಿಲ್ಲ

ಬೆಳಗಲಿ ಪಟ್ಟಣದಲ್ಲಿ ಇಲ್ಲಿಯವರೆಗೆ ಒಟ್ಟು ಮೂರು ಕೆರೆಗಳ ನಿರ್ಮಾಣವಾಗಿದ್ದು, ಒಟ್ಟು 7 ಸಾವಿರ ಎಕರೆ ಭೂಮಿಗೆ ನೀರು ಲಭ್ಯವಾಗುತ್ತಿದೆ.
ನೂತನ ಕೆರೆಯ ಕಾಮಗಾರಿ 4 ತಿಂಗಳಲ್ಲಿ ಮುಗಿಯಲ್ಲಿದು, ಕಾಮಗಾರಿ ಪೂರ್ಣಗೊಂಡ ಕೂಡಲೇ ಬೇಸಿಗೆ ಪ್ರಾರಂಭದ ಮೊದಲೇ ಕಾಲುವೆಗಳಿಂದ ಕೆರೆಗೆ ನೀರು ತುಂಬಿಸಲಾಗುವುದು. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ಪಂಡಿತ ಪೂಜೇರಿ ಮಾತನಾಡಿ, 1994ರಿಂದಲೂ ಸಚಿವ ಗೋವಿಂದ ಕಾರಜೋಳ ರನ್ನಬೆಳಗಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈಗ ನಿರ್ಮಿಸುತ್ತಿರುವ ಐತಿಹಾಸಿಕ ಕೆರೆಯು 74 ಎಕರೆ ವಿಶಾಲ ಜಾಗದಲ್ಲಿ ನೀರು ತುಂಬಿ ನಿಲ್ಲಲಿದೆ. ಒಟ್ಟು 110 ಎಕರೆ ಜಾಗೆಯನ್ನು ಕೆರೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಪಟ್ಟಣಕ್ಕೆ ಮೊರಾರ್ಜಿ ವಸತಿ ಶಾಲೆ, ವಿವಿಧ ಸಮಾಜಗಳಿಗೆ ಸಮುದಾಯ ಭವನ,ಜಿಎಲ್‌ಬಿಸಿ ಕಾಲುವೆಗಳ ಅಭಿವೃದ್ಧಿ ಸೇರಿದಂತೆ ರನ್ನಬೆಳಗಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಧರೆಪ್ಪ ಸಾಂಗ್ಲಿಕರ ಮಾತನಾಡಿದರು. ಚಿಮ್ಮಡದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನಬೆಳಗಲಿ ಪಟ್ಟಣದ ವತಿಯಿಂದ ಸಚಿವ ಕಾರಜೋಳ ಅವರಿಗೆ ಬೆಳ್ಳಿಗದೆ ನೀಡಿ, ಪೌರ ಸನ್ಮಾನದೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ 2 ಕೋಟಿ ವೆಚ್ಚದ ಬೆಳಗಲಿಯಿಂದ ನಂದಗಾಂವ ವಿತರಣಾ ಕಾಲುವೆವರೆಗಿನ 4 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿ, 2 ಕೋಟಿ ವೆಚ್ಚದ ಬೆಳಗಲಿಯಿಂದ ಕಲ್ಲೋಳ್ಳಿವರೆಗಿನ 4 ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ, ಬೆಳಗಲಿ ಪಟ್ಟಣದಲ್ಲಿ 2ಕೋಟಿ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ ಅಡಿಯಲ್ಲಿ 397 ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಒಟ್ಟು 20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮುಖಂಡರಾದ ಶಿವನಗೌಡ ಪಾಟೀಲ, ಚಿಕ್ಕಪ್ಪ ನಾಯಿಕ, ಸಂಗನಗೌಡ ಪಾಟೀಲ, ಅಶೋಕ ಸಿದ್ದಾಪೂರ, ರಂಗಪ್ಪ ಒಂಟಗೋಡಿ, ರಾಮನಗೌಡ ಪಾಟೀಲ, ಕೆ.ಆರ್‌.ಮಾಚಪ್ಪನವರ, ಅರುಣ ಕಾರಜೋಳ, ಮಹಾಂತೇಶ ಹಿಟ್ಟಿನಮಠ, ರಂಗಪ್ಪ ಒಂಟಗೊಡಿ, ಮೋಹನರಾವ್‌ ಕುಲಕರ್ಣಿ, ಪುಟ್ಟು ಕುಲಕರ್ಣಿ, ಪ್ರಕಾಶ ವಸ್ತ್ರದ, ಡಾ.ರವಿ ನಂದಗಾಂವಿ, ನಿಂಗನಗೌಡ ಪಾಟೀಲ, ಬಸವರಾಜ ಪುರಾಣಿಕ, ಶ್ರೀಶೈಲ ಹೊಸಮನಿ, ಮಲ್ಲು ಕ್ವಾನ್ಯಾಗೋಳ, ಬಿ.ಪಿ.ದೊಡಹಟ್ಟಿ ಇದ್ದರು. ಶಿಕ್ಷಕ ಕೆ.ಬಿ.ಕುಂಬಾಳೆ ಸ್ವಾಗತಿಸಿದರು. ಕೆ.ಎ.ಧಡೂತಿ ನಿರೂಪಿಸಿ-ವಂದಿಸಿದರು.

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.