ಗ್ರಾಮೀಣ ಜನರಿಗೆ ಸೇವೆ ನೀಡಿ: ವೈದ್ಯರಿಗೆ ಸಲಹೆ

ರೋಗಿಗಳಿಗೆ ತಾಳ್ಮೆಯಿಂದ ಚಿಕಿತ್ಸೆ ನೀಡಿ

Team Udayavani, May 9, 2022, 1:04 PM IST

8

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ವೈದ್ಯರ ಮತ್ತು ರೋಗಿಗಳ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ದೇಶದಲ್ಲಿ ವೈದ್ಯಕೀಯ ಸೇವೆಯ ಅಗತ್ಯ ಬಹಳಷ್ಟಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಅಸಂಖ್ಯಾತ ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಿ ಎಂದು ಹೈದರಾಬಾದಿನ ಫಿಂಗರ್ ಪ್ರಿಟಿಂಗ್‌ ಮತ್ತು ಡೈಗ್ನೊಸ್ಟಿಕ್‌ ಸೆಂಟರ್‌ನ ನಿರ್ದೇಶಕ ಡಾ|ಕೆ.ತಂಗರಾಜ ಹೇಳಿದರು.

ನಗರದ ಬಿ.ವಿ.ವಿ ಸಂಘದ ಎಸ್‌. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಿ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಭವಿಷ್ಯದಲ್ಲಿ ಜೆನೆಟಿಕ್ಸ್‌ ಸಂಬಂಧಿತ ಸಂಶೋಧನೆ ಹೆಚ್ಚಲಿದೆ. ಯುವವೈದ್ಯರಿಗೆ ರೋಗಿಗಳಿಗೆ ತಾಳ್ಮೆಯಿಂದ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.

ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ವೈದ್ಯರ ಕೊರತೆ ಎದುರಿಸುತ್ತಿದೆ. ಬಡ ಮತ್ತು ಅಸಹಾಯಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಿ ಮತ್ತು ಗ್ರಾಮೀಣ ಭಾಗದಲ್ಲಿ ಸೇವೆಸಲ್ಲಿಸಿ. ಕೋವಿಡ್‌-19ರ ಸಂದರ್ಭ ಕುಮಾರೇಶ್ವರ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಕೋವಿಡ್‌ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಮನೆ ಬಾಗಿಲಿಗೆ ವೈದ್ಯರ ಸೇವೆ ಎನ್ನುವ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ ಹೆಮ್ಮೆ ನಮ್ಮ ಆಸ್ಪತ್ರೆಗಿದೆ. ನಮ್ಮ ಈ ಕಾರ್ಯಕ್ಕೆ ಮಾಧ್ಯಮಗಳಿಂದ ಪ್ರಶಂಸೆ ದೊರೆತದ್ದು ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಇನ್ನಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆಯಾಯಿತು ಎಂದು ಹೇಳಿದರು.

ಯುವ ವೈದ್ಯರಾದ ಡಾ| ಸಂತೋಷ, ಡಾ| ರಿಷಿ ರಂಜನ್‌, ಡಾ|ಖುಷ್ಮಿತ್‌ ಕೌರ್‌, ಡಾ| ಸೌಭಾಗ್ಯ ದವಳಿ, ಡಾ|ಅನುಷಾ ಪಾಟೀಲ, ಡಾ| ಶ್ರದ್ಧಾಸಿಂಗ್‌, ಡಾ|ವೀಣಾ, ಸಾತಕೋತ್ತರ ವಿದ್ಯಾರ್ಥಿ ಡಾ|ಸೋಜಾ ಜೊಚಿಮ್‌ ಅವರಿಗೆ ಚಿನ್ನದ ಪದಕ ವಿತರಿಸಲಾಯಿತು.

ಕಾಲೇಜಿನ 152 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮತ್ತು ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಉಪಸ್ಥಿತರಿದ್ದರು.

ಇದೇ ಡಾ|ಕೆ.ತಂಗರಾಜ ಅವರನ್ನು ಸನ್ಮಾನಿಸಲಾಯಿತು. ವಿವಿಧ ದಾನಿಗಳು ಸ್ಥಾಪಿಸಿದ ಪ್ರಶಸ್ತಿಗಳನ್ನು ಆಯಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಲಾಯಿತು. ಡಾ| ಭುವನೇಶ್ವರಿ ಯಳಮಲಿ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ|ಎಸ್‌.ಎಸ್‌. ಸೊಲಬಣ್ಣವರ ಪರಿಚಯಿಸಿದರು. ಡಾ|ಬಿ.ಎಸ್‌. ಅಂಕದ, ಡಾ|ನಾರಾಯಣ ಮುತಾಲಿಕ, ಡಾ| ಸುನೀತಾ ಪೂಜಾರಿ ಮತ್ತು ಡಾ|ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ|ಅಶೋಕ ಡೋರ್ಲೆ ವಂದಿಸಿದರು.

ಟಾಪ್ ನ್ಯೂಸ್

NIA, Punjab Police crack Ludhiana bomb blast case

ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್ಐಎ; ಪ್ರಮುಖ ಆರೋಪಿಯ ಬಂಧನ

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

twenty one hours kannada movie review

‘ಟ್ವೆಂಟಿ ಒನ್‌ ಅವರ್’ ಚಿತ್ರ ವಿಮರ್ಶೆ: ನಿಗೂಢ ಇಪ್ಪತ್ತೂಂದು ಗಂಟೆ

s-r-patl

ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ; ನಾನು ಲಾಬಿ ಮಾಡಲ್ಲ: ಎಸ್.ಆರ್.ಪಾಟೀಲ್

ಸಿದ್ದರಾಮಯ್ಯ ಜೊತೆ ಕೂತು ಪರಿಷತ್ ಟಿಕೆಟ್ ಶಿಫಾರಸು ಅಂತಿಮಗೊಳಿಸಿದ್ದೇವೆ: ಡಿ.ಕೆ.ಶಿವಕುಮಾರ್

ಸಿದ್ದರಾಮಯ್ಯ ಜೊತೆ ಕೂತು ಪರಿಷತ್ ಟಿಕೆಟ್ ಶಿಫಾರಸು ಅಂತಿಮಗೊಳಿಸಿದ್ದೇವೆ: ಡಿ.ಕೆ.ಶಿವಕುಮಾರ್

2death

ಬೈಕ್‌ಗೆ ಢಿಕ್ಕಿ ಹೊಡೆದ ಕಾರು: ಫ್ಲೈಓವರ್‌ನಿಂದ ಬಿದ್ದು ವ್ಯಕ್ತಿ ಸಾವು; ಬಾಲಕ ಗಂಭೀರ  

4

ಮಾಜಾಳಿಯಲ್ಲಿ ಅಪರೂಪದ ಏಡಿ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ರಬಕವಿ ಬನಹಟ್ಟಿ ತಾಲೂಕಿನಲ್ಲಿ ಮಳೆಯಿಂದಾಗಿ 70 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

18demand

ಉತ್ತರಪ್ರದೇಶ ಮಹಿಳೆ ಕೊಲೆ ಖಂಡಿಸಿ ಪ್ರತಿಭಟನೆ-ಮನವಿ

17panchayath

ಪಪಂ ಆಗಿ ವರ್ಷವಾದ್ರೂ ಇನ್ನೂ ನಡೆಯದ ಚುನಾವಣೆ

ಮಾಳಿಗೆಯಲ್ಲಿ ನಿಂತ ನೀರನ್ನು ಸರಿಸಲು ಹೋದ ವಿದ್ಯಾರ್ಥಿಗೆ ವಿದ್ಯುತ್ ಶಾಕ್: ಅಪಾಯದಿಂದ ಪಾರು

ಮಾಳಿಗೆಯಲ್ಲಿ ನಿಂತ ನೀರನ್ನು ಸರಿಸಲು ಹೋದ ವಿದ್ಯಾರ್ಥಿಗೆ ವಿದ್ಯುತ್ ಶಾಕ್: ಅಪಾಯದಿಂದ ಪಾರು

ಮುಧೋಳ: ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

ಮುಧೋಳ: ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ವಿದ್ಯುತ್ ಸ್ವಿಚ್ ಬೋರ್ಡ್ ಕೈ ಹಾಕಿದ 11 ತಿಂಗಳ ಮಗು ಸಾವು

ವಿದ್ಯುತ್ ಸ್ವಿಚ್ ಬೋರ್ಡ್ ಕೈ ಹಾಕಿದ 11 ತಿಂಗಳ ಮಗು ಸಾವು

ಕಾರು-ಬೈಕ್ ಢಿಕ್ಕಿ: ಓರ್ವ ಸಾವು; ಮತ್ತೋರ್ವನ ಸ್ಥಿತಿ ಗಂಭೀರ

ಕಾರು-ಬೈಕ್ ಢಿಕ್ಕಿ: ಓರ್ವ ಸಾವು; ಮತ್ತೋರ್ವನ ಸ್ಥಿತಿ ಗಂಭೀರ

NIA, Punjab Police crack Ludhiana bomb blast case

ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್ಐಎ; ಪ್ರಮುಖ ಆರೋಪಿಯ ಬಂಧನ

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

twenty one hours kannada movie review

‘ಟ್ವೆಂಟಿ ಒನ್‌ ಅವರ್’ ಚಿತ್ರ ವಿಮರ್ಶೆ: ನಿಗೂಢ ಇಪ್ಪತ್ತೂಂದು ಗಂಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.