
ಶಿಷ್ಟಾಚಾರ ಉಲ್ಲಂಘಿಸಿದ ತಹಶೀಲ್ದಾರ್ : ಶರಣು ಬೆಲ್ಲದ ಆರೋಪ
Team Udayavani, Jan 18, 2021, 1:09 PM IST

ಹುನಗುಂದ: ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಪಟ್ಟಣದ ಪ್ರಥಮ ಪ್ರಜೆ ಪುರಸಭೆಯ ಅಧ್ಯಕ್ಷರಿಗೆ ಆಹ್ವಾನ ನೀಡದೇ ತಹಶೀಲ್ದಾರ್ ಬಸವರಾಜ ನಾಗರಾಳ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಶರಣು ಬೆಲ್ಲದ ಆರೋಪಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕೋವ್ಯಾಕ್ಸಿನ್ ಲಸಿಕೆ ವಿತರಣಾ ಅಭಿಯಾನಕ್ಕೆ ನನಗೆ ಆಹ್ವಾನವಿಲ್ಲ. ಇದನ್ನು ತಾಲೂಕು ವೈದ್ಯಾಧಿಕಾರಿ
ಡಾ| ಪ್ರಶಾಂತ ತುಂಬಗಿ ಅವರನ್ನು ಪ್ರಶ್ನಿಸಿದರೆ ಅದು ನನಗೆ ಗೊತ್ತಿಲ್ಲ. ಕಾರ್ಯಕ್ರಮದ ಎಲ್ಲ ಅತಿಥಿಗಳನ್ನು ಆಹ್ವಾನಿಸಿದ್ದು ತಹಶೀಲ್ದಾರ್ ಅವರನ್ನೇ ಕೇಳಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ತಹಶೀಲ್ದಾರ್ ಗೆ ಕರೆ ಮಾಡಿದರೇ ಕರೆ ಸ್ವೀಕರಿಸಲಿಲ್ಲ. ಮತ್ತೂಮ್ಮೆ ಕರೆ ಮಾಡಿದರೇ ಪೋನ್ ಬಂದ್ ಮಾಡಿರುವುದು ಕಂಡುಬಂದಿದೆ. ತಹಶೀಲ್ದಾರ್ ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆಯ ಅಧಿ ಕಾರಿಗಳು ಕಾರ್ಯಕ್ರಮದ ಶಿಷ್ಟಾಚಾರ ಮರೆತು ಬಿಜೆಪಿ ಪಕ್ಷದ ಶಾಸಕರ ಮಾತಿನಂತೆ ಅವರ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಆನೆಗೊಂದಿ ಆದಿಶಕ್ತಿ ದೇಗುಲದ ಬಳಿ ಬೋನಿಗೆ ಬಿದ್ದ ಚಿರತೆ
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸರ್ಕಾರಿ ಕಾರ್ಯಕ್ರಮಕ್ಕೆ ಪ್ರಥಮ ಪ್ರಜೆಗೆ ಆಹ್ವಾನ ನೀಡಿಲ್ಲ. ಇದಕ್ಕೆ ಕಾರಣ ನೀಡಬೇಕು ಮತ್ತು ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘಿಸಿದ ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳುತೇನೆ ಎಂದರು. ಪುರಸಭೆಯ ಸದಸ್ಯ ಯಲ್ಲಪ್ಪ ನಡುವಿನಮನಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಪರವೇಜ್ ಖಾಜಿ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್

ಗ್ರಾಮ ಪಂಚಾಯತ್ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ

ಹಡಪದ ಸಮಾಜ ಕುಲಶಾಸ್ತ್ರ ಅಧ್ಯಯನ,ನಿಗಮ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

ಗ್ರಾಮ ಪಂಚಾಯತ್ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಬೈಬಲ್ಗೆ ಬೆಂಕಿ ಹಚ್ಚಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಗೈದ ಆರೋಪಿಯ ಬಂಧನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು