ಲಾಯದಗುಂದಿ ಗ್ರಾಪಂಗೆ ಮುತ್ತಿಗೆ-ಪ್ರತಿಭಟನೆ

Team Udayavani, Feb 19, 2020, 11:57 AM IST

ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಪ್ರವಾಹದಿಂದ ಹಾನಿಯಾದವರಿಗೆ ಬಿಟ್ಟು ಬೇರೆಯವರಿಗೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿ ಲಾಯದಗುಂದಿ ಸಂತ್ರಸ್ತರು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನೆರೆ ಸಂತ್ರಸ್ತರ ಸರ್ವೇ ಅವೈಜ್ಞಾನಿಕವಾಗಿ ಮಾಡಲಾಗಿದ್ದು, ಇದರಿಂದ ಅರ್ಹ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಪ್ರವಾಹದ ನೀರು ಹೋಗದ ಮನೆಗಳಿಗೆ ಪರಿಹಾರ ನೀಡಲಾಗಿದೆ. ಅಧಿ ಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಪರಿಹಾರ ಮಂಜೂರು ಮಾಡಿದ್ದಾರೆ. ಬಡವರಿಗೆ ಪರಿಹಾರ ನೀಡಿಲ್ಲ, ಕೂಡಲೇ ಮತ್ತೂಮ್ಮೆ ಸರ್ವೇ ಮಾಡಿ ನಿಜವಾದ ಸಂತ್ರಸ್ತರನ್ನು ಗುರುತಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಪಿಡಿಒಗೆ ತರಾಟೆ: ಸಂತ್ರಸ್ತರಲ್ಲದವರಿಗೂ ಪರಿಹಾರ ನೀಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮನೆ-ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದೇ ಶ್ರೀಮಂತರಿಗೆ ನೆರೆ ಪರಿಹಾರ ನೀಡಿದ್ದೀರಿ. ಫಲಾನುಭವಿಗಳ ಹೆಸರಿನ ಪಟ್ಟಿಯನ್ನು ಗ್ರಾಮ ಪಂಚಾಯತ್‌ ನೋಟಿಸ್‌ ಬೋಡ್‌ ಗೆ ಲಗತ್ತಿಸಿಲ್ಲ ಎಂದು ಗ್ರಾಪಂ ಪಿಡಿಒ ಪದ್ಮಾವತಿ ಜಿ.ಪಿ. ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್‌ಗೆ ಮನವಿ: ಲಾಯದಗುಂದಿ ಪಂಚಾಯತ್‌ಗೆ ಆಗಮಿಸಿದ್ದ ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ, 62 ಫಲಾನುಭವಿಗಳ ಬಗ್ಗೆ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಪುನರ್‌ ಪರಿಶೀಲನೆ ಮಾಡುತ್ತಾರೆ. ಹಾನಿಗೊಳಗಾಗದ ಮನೆಗಳಿಗೆ ಪರಿಹಾರ ಹೋಗಿದ್ದರೆ ಅಂತಹ ಮನೆಗಳ ಮೇಲೆ ಭೋಜಾ ದಾಖಲಿಸಿ, ಪರಿಹಾರ ನೀಡಿದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಕೂಡಲೇ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್‌ ನೋಟಿಸ್‌ ಬೋರ್ಡ್‌ಗೆ ಲಗತ್ತಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಿದರು.

ಪಿಡಿಒ ಜಿ. ಪದ್ಮಾವತಿ, ಗ್ರಾಪಂ ಅಧ್ಯಕ್ಷ ಶರಣು ಸಜ್ಜನ, ಗ್ರಾಮದ ಮಹೇಶ ಜಡಿ, ಮುತ್ತಪ್ಪ ಗೋಡಿ, ಭೀಮಪ್ಪ ಕರಕನ್ನವರ, ಮಂಜುನಾಥ ಜಡಿ, ಭೀಮಪ್ಪ ಮಾದರ, ರವಿ ವಾಲೀಕಾರ, ಸಿದ್ದಪ್ಪ ಬಂಡಿವಡ್ಡರ, ಪರಶುರಾಮ ಪಾತ್ರೋಟಿ, ಬಸವರಾಜ ಮಾದರ, ಮಹೇಶ ವಾಲೀಕಾರ, ಹನಮಂತ ಪಾತ್ರೋಟಿ, ಮಲ್ಲಪ್ಪ ಕುಚಲ, ಸಂಗಪ್ಪ ವಾಲೀಕಾರ, ಬೈಲಪ್ಪ ಗೋಡಿ, ಶರಣಪ್ಪ ಚಿಲ್ಲಾಪುರ, ಆಸಂಗೆಪ್ಪ ಹಾದಿಮನಿ. ಮಲ್ಲಪ್ಪ ಪಾತ್ರೋಟಿ, ಶರಣಪ್ಪ ಜಡಿ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

  • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...