ಆದಿಬಣಜಿಗ ಗೆಜೆಟ್‌ನಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ
Team Udayavani, Jan 18, 2022, 9:53 PM IST
ರಬಕವಿ-ಬನಹಟ್ಟಿ: ಆದಿಬಣಜಿಗ ಸಮಾಜವನ್ನು ಗೆಜೆಟ್ ನಲ್ಲಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ಸೋಮವಾರ ನಗರದ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಆದಿಬಣಜಿಗ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನಿಯೋಗದೊಂದಿಗೆ ಬಂದರೆ ಈ ವಿಷಯವಾಗಿ ಮತ್ತೂಮ್ಮೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸುವುದಾಗಿ ಹೇಳಿದರು. ಬನಹಟ್ಟಿ ಘಟಕದ ಅಧ್ಯಕ್ಷ ಶಿವು ಗುಂಡಿ ಹಾಗೂ ಮುಖಂಡ ಶರಣಬಸವ ಕಿವಡನ್ನವರ ಮಾತನಾಡಿ, ಸಮಾಜದ ಸಾವಿರಾರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಗೆಜೆಟ್‌ನಲ್ಲಿ ಹೆಸರು ಸೇರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಕರ್ನಾಟಕ ಆದಿ ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ, ಮಲ್ಲಿಕಾರ್ಜುನ ಗುರನಳ್ಳಿ, ಸದಾಶಿವ ದೊಡ್ಡಪ್ಪಗೋಳ, ಮಹಾದೇವ ಚೋಳಿ, ಸಂಜು ತೋರಿ, ಪ್ರಕಾಶ ಉಳ್ಳಾಗಡ್ಡಿ, ಅಲ್ಲಪ್ಪ ಹೊಸ, ಮಹಾಲಿಂಗಪ್ಪ ಹೆಗಾಡಿ, ಹನಮಂತಪ್ಪ ಬಿರಾದಾರ, ಎಸ್.ಟಿ. ಗೋಠೆ, ಷಣ್ಮುಖ ಗಾಡದಿ, ಸುನೀಲ ಗುಂಡಿ, ಕಲ್ಲಪ್ಪ ಚಿಂಚಲಿ, ಚಂದ್ರಕ್ಕ ಗೌಡರ, ಸುಮಿತ್ರಾ ಅವರನಾಳೆ, ಸರೋಜಾ ರಾಮೋಜಿ, ಆರತಿ ಜಗದಾಳ, ಮಹಾದೇವಿ ಜಗದಾಳ, ಡಾ| ಬಸವರಾಜ ಡಂಗಿ, ಲಕ್ಷ್ಮಣ ಗುಂಡಿ ಇತರರು ಇದ್ದರು.