ಸಿಬ್ಬಂದಿ ಕೊರತೆ: ವೇತನಕ್ಕೆ ನೌಕರರ ಪರದಾಟ


Team Udayavani, Jan 3, 2019, 9:29 AM IST

3-january-17.jpg

ಗುಳೇದಗುಡ್ಡ: ಇಲ್ಲಿಯ ಪುರಸಭೆಯಲ್ಲಿ ಲೆಕ್ಕ ಶಾಖೆಗೆ ಸಿಬ್ಬಂದಿ ಇಲ್ಲದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಪುರಸಭೆ ಸಿಬ್ಬಂದಿ ವೇತನ ಸೇರಿದಂತೆ ಎಲ್ಲ ಹಣಕಾಸಿನ ವ್ಯವಹಾರಗಳು ಸ್ಥಗಿತಗೊಂಡಿದ್ದು, ಪುರಸಭೆ ಸಿಬ್ಬಂದಿ ಪರದಾಡುವಂತಾಗಿದೆ.

ಪುರಸಭೆಯ ಗುತ್ತಿಗೆ ಆಧಾರದ ಮೇಲೆ 59 ಜನ, 27 ಕಾಯಂ ನೌಕರರು ಮೂರು ತಿಂಗಳಿನಿಂದ ವೇತನವಿಲ್ಲದ ವಿಷಯ ಆಡಳಿತಾಧಿಕಾರಿಗಳು ಆಗಿರುವ ಉಪವಿಭಾಗಾಧಿ ಕಾರಿಗಳ ಗಮನಕ್ಕೂ ಬಂದಿಲ್ಲ. ಅಷ್ಟೇ ಅಲ್ಲದೇ ಸಿಬ್ಬಂದಿ ವೇತನದ ಜೊತೆಗೆ ಗುತ್ತಿಗೆದಾರರ ಬಿಲ್‌ ಹಾಗೂ ಇನ್ನಿತರೆ ಚೆಕ್‌ ಗಳೂ ಸಹ ಪಾಸಾಗದೇ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ನಿತ್ಯ ಪುರಸಭೆಗೆ ಅಲೆಯುವಂತಾಗಿದೆ.

ಏಕೆ ವಿಳಂಬ?: ಪಟ್ಟಣದ ಪುರಸಭೆಯಲ್ಲಿ ಈ ಹಿಂದೆ ಲೆಕ್ಕಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಅಮಾನತು ಆಗಿದ್ದರಿಂದ ಸಿಬ್ಬಂದಿ ವೇತನ ಬಟಾವಡೆಯಾಗಿಲ್ಲ. ಆ ಸಿಬ್ಬಂದಿ ಅಮಾನತುಗೊಂಡ ನಂತರ ಬೇರೊಬ್ಬರನ್ನು ನಿಯೋಜಿಸಿಲ್ಲ. ನಿಯೋಜಿಸಿದರೂ ಬಾರದ ಸಿಬ್ಬಂದಿ: ಕಳೆದ ತಿಂಗಳು ಬಾಗಲಕೋಟೆ ಜಿಲ್ಲಾಡಳಿತ ಸಿಬ್ಬಂದಿ ನಿಯೋಜಿಸಿ ಆದೇಶಿಸಿದರೆ ಆ ಸಿಬ್ಬಂದಿ ಬಂದಿಲ್ಲ. ನಂತರ ಬೇರೋಬ್ಬರನ್ನು ನಿಯೋಜಿಸಿದರೂ ಅವರೂ ಬೇರೆ ಕಾರಣಗಳ ನೆಪ ಹೇಳಿ ಹಾಜರಾಗಿಲ್ಲ. ಬೇರೆ ಸಿಬ್ಬಂದಿಯ ಕೇಳುವ ಬದಲು ಪುರಸಭೆ ತಮ್ಮ ಸಿಬ್ಬಂದಿಯವರನ್ನೇ ಈ ಕಾರ್ಯಕ್ಕೆ ನಿಯುಕ್ತಿ ಮಾಡಿದ್ದರೇ ಸರಿ ಹೋಗುತ್ತಿತ್ತು. ಆದರೆ ಆ ವ್ಯವಸ್ಥೆ ಮಾಡದಿರುವುದಕ್ಕೆ ಪುರಸಭೆಗೆ ಸಿಬ್ಬಂದಿಗಳ ವೇತನ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಬುಧವಾರ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಎಚ್‌.ಜಯಾ ಪುರಸಭೆಗೆ ಭೇಟಿ ನೀಡಿದಾಗ ಈ ವಿಷಯ ಗಮನಕ್ಕೆ ಬಂದಿದೆ. ಮುಖ್ಯಾಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಶುಕ್ರವಾರವೇ ಸಿಬ್ಬಂದಿ ವೇತನ ಹಾಗೂ ಇತರೇ ಬಿಲ್‌ಗ‌ಳ ಚೆಕ್‌ ಪಾಸಾಗಬೇಕು ಎಂದು ಸೂಚಿಸಿದ್ದಾರೆ.

ಗುಳೇದಗುಡ್ಡ ಪುರಸಭೆಯಲ್ಲಿ ಲೆಕ್ಕ ಶಾಖೆಗೆ ಸಿಬ್ಬಂದಿ ಇಲ್ಲದಿರುವ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದು, ಎರಡು ದಿನಗಳಲ್ಲಿ ಸರಿಪಡಿಸುವೆ. 
 ಎಚ್‌.ಜಯಾ, ಉಪವಿಭಾಗಾಧಿಕಾರಿ 
-ಆಡಳಿತಾಧಿಕಾರಿ, ಪುರಸಭೆ ಗುಳೇದಗುಡ್ಡ

ಜಿಲ್ಲಾಡಳಿತ ಸಿಬ್ಬಂದಿಯನ್ನು ಕಳೆದ ತಿಂಗಳು ನಿಯೋಜಿಸಿ ಆದೇಶಿಸಿದೆ. ಸಿಬ್ಬಂದಿ ಹಾಜರಾಗಿಲ್ಲ.ನಂತರ ಬೇರೋಬ್ಬರನ್ನು ನಿಯೋಜಿಸಿದರೂ ಅವರೂ ಬಂದಿಲ್ಲ. 
. ಏಸು ಬೆಂಗಳೂರು,
ಮುಖ್ಯಾಧಿಕಾರಿ, ಪುರಸಭೆ ಗುಳೇದಗುಡ್ಡ

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.