ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ; ಗಮನ ಸೆಳೆದ ಗ್ರಾಮೀಣ ಕ್ರೀಡೆ

ಶಕುನಿ-ಪಾಂಡವರ ನಡುವಿನ ಆಟ ನೆನಪಿಸುವ ಗ್ರಾಮೀಣ ಕ್ರೀಡೆ

Team Udayavani, Oct 22, 2022, 3:53 PM IST

news10

ರಬಕವಿ-ಬನಹಟ್ಟಿ: ಸಮೀಪದ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ತ ಶುಕ್ರವಾರ, ಶನಿವಾರ ರಾಜ್ಯ ಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದಿದ್ದು, ಪಂದ್ಯಾವಳಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಪಗಡೆ ಪಂದ್ಯಗಳು ನೂರಾರೂ ಜನರನ್ನು ಆಕರ್ಷಿಸಿದವು.

ಇಂದಿನ ಆಧುನಿಕ ಕಾಲದಲ್ಲಿಯೂ ಮಹಾಭಾರತದ ಶಕುನಿ ಮತ್ತು ಪಾಂಡವರ ನಡುವಿನ ಆಟವನ್ನು ನೆನಪಿಸುವ ಈ ಆಟ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡಾ ಮಹತ್ವವನ್ನು ಪಡೆದಿದ್ದು, ಹಿರಿಯರ ಜೊತೆ ಯುವಕರು ಕೂಡಾ ಪಗಡೆಯಾಟ ಆಡುವುದರ ಮೂಲಕ ಆಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ.

ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ಸಂದರ್ಭ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆ ಆಟದ ಸ್ಪರ್ಧೆಯನ್ನು ಏರ್ಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ಬಾರಿ ಬಹುಮಾನ ಕೂಡಾ ಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ.

ಸುಮಾರು 28 ವರ್ಷಗಳಿಂದ ಪಗಡೆ ಆಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ವರ್ಷದಿಂದ ವರ್ಷಕ್ಕೆ ಈ ಆಟ ಜನಪ್ರೀಯತೆ ಪಡೆಯುತ್ತಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಪಗಡೆಯಾಟದ ಸ್ಫರ್ಧೆಗಳು ನಡೆಯುತ್ತಿವೆ. ಇಂದು ನಡೆದ ಸ್ಪರ್ಧೆಯಲ್ಲಿ ಬಾಗಲಕೋಟ, ಬಿಜಾಪೂರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗಳಿಂದ ಒಟ್ಟು 54 ತಂಡಗಳು ಆಗಮಿಸಿದ್ದವು.

ಬಾರಿ ಕೂತುಹಲ ಮೂಡಿಸಿದ್ದ ಪ್ರತಿ ಪಂದ್ಯಗಳು ನೋಡುಗರ ಕಣ್ಮಣ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಪಗಡೆ ಈಗಲೂ ಕೂಡಾ ಇಂತಹ ಹಳ್ಳಿಗಳಲ್ಲಿ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡಿದ್ದು, ಅದಕ್ಕೆ ಜಗದಾಳ ಗ್ರಾಮದ ಬ್ರಹ್ಮದೇವರ ಹಬ್ಬದ ಜಾತ್ರಾ ಮಂಡಳಿ ಕೂಡಾ ಟೊಂಕಕಟ್ಟಿ ನಿಂತಿದೆ.

ದೀಪಾವಳಿಯಂದು ವಿಶೇಷವಾಗಿ ಪೂಜಿಸಲ್ಪಡುವ ಬ್ರಹ್ಮದೇವರ ಹಬ್ಬವನ್ನು ಪ್ರತಿ ವರ್ಷ ದೇವಸ್ಥಾನದ ಮುಂದೆ ವಿಶೇಷವಾಗಿ ಬ್ರಹ್ಮದೇವರ ಜಾತ್ರಾ ಮಂಡಳಿಯ ಸದಸ್ಯರು ಆಚರಿಸುತ್ತಾ ಬಂದಿದ್ದಾರೆ. ಹಿರಿಯರಿಗೆ ಮಾತ್ರ ಸಿಮಿತವಾಗಿದ್ದ ಪಗಡೆಯಾಟ ಯುವಕರನ್ನು ಆಕರ್ಷಿಸುತ್ತಿರುವುದು ಪಗಡೆಯ ಉಳಿವಿಗೆ ಸಾಕ್ಷಿಯಾಗಿದೆ.

ಪ್ರಥಮ ಬಹುಮಾನ 50,001ರೂ., ದ್ವಿತೀಯ ಬಹುಮಾನ 30,001ರೂ., ತೃತೀಯ ಬಹುಮಾನ 20,001 ರೂ., ಚತುರ್ಥ ಬಹುಮಾನ 10,001 ರೂ. ಸೇರಿದಂತೆ 8 ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುರಲಿಂಗಪ್ಪ ಚಿಂಚಲಿ, ಶೇಖರ ನೀಲಕಂಠ, ಗುರು ಅಸ್ಕಿ, ಮಾರುತಿ ಸೋರಗಾವಿ, ಕಾಡಪ್ಪ ಕಬಾಡಗಿ, ಕಾಡಪ್ಪ ಉಳ್ಳಾಗಡ್ಡಿ, ಬಸಯ್ಯ ಕಾಡದೇವರ, ಹೊನ್ನಪ್ಪ ಕುಳ್ಳೋಳ್ಳಿ, ಹನಮಂತಗೌಡ ಪಾಟೀಲ, ಸದಾಶಿವ ದಡ್ಡಿಮನಿ, ಸುರೇಶ ಅಸ್ಕಿ, ಪಂಡಿತ ಬೋಸ್ಲೆ, ಅಶೋಕ ಆಸಂಗಿ, ಸದಾಶಿವ ಉಳ್ಳಾಗಡ್ಡಿ, ಮುತ್ತು ಉಳ್ಳಾಗಡ್ಡಿ, ಚಂದ್ರಶೇಖರ ಕುರಿ, ಹಣಮಂತ ಅತ್ಯವ್ವಗೋಳ, ಶ್ರೀಶೈಲಗೌಡ ಪಾಟೀಲ, ಅಶೋಕ ಗೊಬ್ಬಾಣಿ, ಬಸಪ್ಪ ನಾಯಕ, ಯಲ್ಲಪ್ಪ ದೊಡಮನಿ, ಬಸಪ್ಪ ಮುತ್ತೂರ, ಅಡಿವೆಪ್ಪ ಪಾಟೀಲ, ವಿಠ್ಠಲ ಕಲಮಡಿ, ಭೀಮಪ್ಪ ಹರಪನಹಳ್ಳಿ ಸೇರಿದಂತೆ ಅನೇಕರು ಇದ್ದರು.

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.