ಹೊಟ್ಟೆ ನೋವಾದ್ರೆ; ಬಾಯಿಗೆ ಆಪರೇಶನ್‌ ಮಾಡ್ತಾರಾ!

Team Udayavani, Apr 22, 2019, 1:14 PM IST

ಬಾಗಲಕೋಟೆ: ಹೊಟ್ಟೆ ನೋವು ಕಾಣಿಸಿಕೊಂಡರೆ, ಅದಕ್ಕೆ ಹೊಟ್ಟೆಯ ಭಾಗದಲ್ಲೇ ಸೂಕ್ತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಬಾಯಿಗೆ ಆಪರೇಶನ್‌ ಮಾಡಲ್ಲ. ಆದರೆ, ಮೋದಿ ಅವರು, ತೆರಿಗೆ ವಸೂಲಿ ಹೆಚ್ಚಳಕ್ಕೆ ನೋಟು ನಿಷೇಧ ಮಾಡಿ, ಇಡೀ ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದ್ದಾರೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಹಿರಿಯ ಮುಖಂಡ ಡಾ|ಎಂ.ಪಿ. ನಾಡಗೌಡ ಹೇಳಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ನಿಷೇಧ ಮಾಡಿದ ಬಳಿಕ ಒಬ್ಬರಾದರೂ ಜೈಲಿಗೆ ಹೋದರಾ. ಶೇ.99.3ರಷ್ಟು ಹಳೆಯ ನೋಟು ಪುನಃ ಬಂದಿವೆ. ಹಾಗಾದರೆ, ನೋಟು ನಿಷೇಧದ ಉದ್ದೇಶ ಸಫಲವಾಯಿತೇ? ತೆರಿಗೆಗಳ್ಳರನ್ನು ಜೈಲಿಗೆ ಹಾಕಿಲಿಲ್ಲ ಏಕೆ. ತೆರಿಗೆಗಳ್ಳರನ್ನು ಹಿಡಿಯಲು ನೋಟು ನಿಷೇಧವೇ ಮಾಡಬೇಕಿತ್ತಾ. ಅದಕ್ಕೆ ಪರ್ಯಾಯ ಮಾರ್ಗಗಳು ಇರಲಿಲ್ಲವೇ ? ಎಂದು ಪ್ರಶ್ನಿಸಿದರು.

ನೆಹರೂ, ವಾಜಪೇಯಿ ಗೌರವಿಸಿದ್ದರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತಕ್ಕೆ ಒಂದು ಪ್ರಬಲವಾದ ವಿರೋಧ ಪಕ್ಷ ಇರಬೇಕು. ಆದರೆ, ಮೋದಿ ಎಷ್ಟು ಅದೃಷ್ಟವಂತರು ಎಂದರೆ, ಅವರಿಗೆ ಲೋಕಸಭೆಯಲ್ಲಿ ಪ್ರಭಲ ವಿರೋಧ ಪಕ್ಷವೇ ಇಲ್ಲ. ಹೀಗಿದ್ದಾಗ ಅವರು, ದೇಶಕ್ಕಾಗಿ ಅತ್ಯುತ್ತಮ ಯೋಜನೆ ನೀಡಬೇಕಿತ್ತು. ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.

ಹಿಂದೆ ವಾಜಪೇಯಿ ಅವರು ಒಂದು ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಅಲ್ಲಿ ನೀವು ಸೋಲುತ್ತೀರಿ. ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲ್ಲಿ. ನಿಮ್ಮಂತವರು ಲೋಕಸಭೆಯಲ್ಲಿ ಇರಬೇಕು ಎಂದು ಬಯಸಿದ್ದು. ಪ್ರಬಲ ವಿರೋಧ ಪಕ್ಷಗಳಿದ್ದಾಗಲೇ ಉತ್ತಮ ಆಡಳಿತ ಸಾಧ್ಯ. ಆದರೆ, ವಿರೋಧ ಪಕ್ಷಗಳನ್ನೇ ರಾಜಕೀಯವಾಗಿ ಮುಗಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದರು.

ಇವಿಎಂನಲ್ಲಿ ಮೋದಿ ಫೋಟೋ ಇದ್ರೆ ಮತ ಹಾಕಿ: 3ರಿಂದ 4 ಬಾರಿ ಆಯ್ಕೆಯಾದವರು, ಕೇಂದ್ರದಲ್ಲಿ ಸಚಿವರಾದವರು ತಮಗೆ ಮತ ಹಾಕಿ ಎನ್ನುವ ಬದಲು, ನರೇಂದ್ರ ಮೋದಿ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ತಮ್ಮ ಸಾಧನೆ ಹೇಳಿಕೊಂಡು, ಮತ ಕೇಳಲೂ ಆಗದಂತಹ ಸ್ಥಿತಿಯಲ್ಲಿ ಬಿಜೆಪಿಯ ಸಂಸದರು, ಸಚಿವರಿದ್ದಾರಾ? ಜಿಲ್ಲೆಯ ಲೋಕಸಭೆ ಚುನಾವಣೆಯ ಮತದಾನದಂದು ಇವಿಎಂ ಮತ ಯಂತ್ರದಲ್ಲಿ ಮೋದಿ ಫೋಟೋ ಇದ್ದರೆ, ಅವರಿಗೆ ಮತ ಕೊಡಿ ಎಂದು ಟೀಕಿಸಿದರು.

ವೀಣಾ ಕಾಶಪ್ಪನವರ, ಜಿ.ಪಂ. ಅಧ್ಯಕ್ಷೆಯಾಗಿ ಅತ್ಯುತ್ತಮ ಕೆಲಸ ಮಾಡಿದ್ದು, ಕ್ರಿಯಾಶೀಲರಾಗಿದ್ದಾರೆ. ಇಲ್ಲಿಂದ ಮೂರು ಬಾರಿ ಗೆದ್ದವರು, ಮೋದಿ ನೋಟಿ ಮತ ಕೊಡಿ ಎನ್ನುತ್ತಿದ್ದಾರೆ. ಹೀಗಾಗಿ ಜನರು, ಮೋದಿಯನ್ನು ನಂಬಲು ಸಿದ್ಧರಿಲ್ಲ. ಕಾಂಗ್ರೆಸ್‌ಗೆ ಮತ ಕೊಡಿ ಎಂದು ಮನವಿ ಮಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಾದಾಮಿ: ತಾಲೂಕಿನ ನೆರೆಪೀಡಿತ ಚೋಳಚಗುಡ್ಡ, ನಾಗರಾಳ ಎಸ್‌.ಬಿ., ಖ್ಯಾಡ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ಬೆಂಗಳೂರಿನ ಕಾರ್ಗಿಲ್‌...

  • ಗುಳೇದಗುಡ್ಡ: ಪಟ್ಟಣದ ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಕಚೇರಿ, ಪುರಸಭೆ ಕಚೇರಿಗಳಿಗೆನಿತ್ಯ ಒಂದಿಲ್ಲೊಂದು ಕೆಲಸಗಳಿಗೆ ನೂರಾರು ಜನರು ಬರುತ್ತಿದ್ದು, ವಿದ್ಯುತ್‌...

  • ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರುಹಂಗಾಮಿಗೆ 2019 ಡಿಸೆಂಬರ್‌ 1ರಿಂದ 2020ರ  ಮಾರ್ಚ್‌ 20ರ ವರೆಗೆ ವಾರಾಬಂದಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು...

  • ಮುಧೋಳ: ಟ್ರ್ಯಾಕ್ಟರ್‌ ಹಾಗೂ ಟಂಟಂಗಳಲ್ಲಿ ಕರ್ಕಶ ಶಬ್ದದಿಂದ ಜನರಿಗೆ ಆಗುವ ತೊಂದರೆ ತಪ್ಪಿಸಲು ತಾಲೂಕಿನ ಗ್ರಾಮ ಪಂಚಾಯತಗಳು ದಂಡ ವಿಧಿಸಿ ವಾಹನವನ್ನು ವಶಕ್ಕೆ...

  • ಬನಹಟ್ಟಿ: 1975ರಿಂದ 85ರ ಅವಧಿಯಲ್ಲಿ ಸ್ಥಾಪನೆಗೊಂಡ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಸರಕಾರ ನೇಕಾರ ಸಮುದಾಯದ ಈ ಕಾರ್ಖಾನೆಗೆ...

ಹೊಸ ಸೇರ್ಪಡೆ