ಪಕ್ಷೇತರರ ಹೊರ ಸರಿಸಲು ಹರಸಾಹಸ!


Team Udayavani, Apr 8, 2019, 11:34 AM IST

bagalkote
ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರ ಹಿಂದೆ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, ಕೆಲವು ಪ್ರಮುಖರು, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ಹಿಂದಕ್ಕೆ ತೆಗೆಸಲು ಎರಡೂ ಪಕ್ಷಗಳ ಪ್ರಮುಖರು ಹರಸಾಹಸಪಡುತ್ತಿದ್ದಾರೆ.
ಹೌದು, ಕೆಲವು ಸಂಘಟನೆಗಳ ಪ್ರಮುಖರು, ದಲಿತ ಹೋರಾಟಗಾರರು ನಾಮಪತ್ರ ಸಲ್ಲಿಸಿದ್ದಾರೆ. ಅವರು ಪಡೆಯುವ ಮತಗಳಿಂದ ನಮ್ಮ ಗೆಲುವಿಗೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ನಾಮಪತ್ರ ಸಲ್ಲಿಸಿರುವ ಪ್ರಮುಖರನ್ನು ಕಣದಿಂದ ಹಿಂದಕ್ಕೆ ಸರಿಸಲು ಪ್ರಯತ್ನ ನಡೆದಿವೆ ಎನ್ನಲಾಗಿದೆ.
16 ಅಭ್ಯರ್ಥಿಗಳಿಂದ ನಾಮಪತ್ರ: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ, ಪಕ್ಷೇತರ ರವಿ ಪಡಸಲಗಿ ಅವರು ತಲಾ 4, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಹಿಂದೂಸ್ತಾನ ಜನತಾ ಪಾರ್ಟಿಯ ರಾಮನಗೌಡ ಬಾಳವಾಡ, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಶಶಿಕುಮಾರ, ಸೆಕ್ಯುಲರ್‌ ಡೆಮೊಕ್ರೆಟಿಕ್‌ ಕಾಂಗ್ರೆಸ್‌ ನಿಂದ ಬಸನಗೌಡ ಮೇಟಿ, ರಿಪಬ್ಲಿಕ್‌ ಪಾರ್ಟಿ ಆಪ್‌ ಇಂಡಿಯಾ ಪಕ್ಷದಿಂದ ಪರಶುರಾಮ ನೀಲನಾಯಕ, ಬಹುಜನ ಮುಕ್ತಿ ಪಾರ್ಟಿಯ ರಾಜೇಂದ್ರ ಆಡಗಲ್ಲ ಅವರು ತಲಾ 2 ನಾಮಪತ್ರ, ರೈತ ಭಾರತ ಪಾರ್ಟಿಯ ಮುತ್ತಪ್ಪ ಹಿರೇಕುಂಬಿ, ಬಹುಜನ ಸಮಾಜ ಪಾರ್ಟಿಯ ಮಹಮ್ಮದ ಹುಸೇನ ಮುಜಾವರ, ಪಕ್ಷೇತರ ಶಿವರಾಜಕುಮಾರ ತಳವಾರ, ಮುತ್ತು ಸುರುಕೋಡ, ಪಕ್ಷೇತರದಿಂದ ಮಾಗುಂಡಪ್ಪ ಗಾಣಿಗೇರ, ಸಂಗಮೇಶ ಭಾವಿಕಟ್ಟಿ, ಬುಡ್ಡೇಸಾಬ ಪೆಂಡಾರಿ, ಕರ್ನಾಟಕ ಜನತಾ ಪಕ್ಷದಿಂದ ಮಾರುತಿ ಜಮಿನದಾರ್‌ ಅವರು ತಲಾ 1 ನಾಮಪತ್ರ ಸೇರಿದಂತೆ ಒಟ್ಟು 16 ಜನರು, 28 ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಹಿಂದೂಸ್ತಾನ ಜನತಾ ಪಾರ್ಟಿಯಿಂದ ರಾಮನಗೌಡ ಬಾಲವಾಡ ಅವರು ಸಲ್ಲಿಸಿದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಹೀಗಾಗಿ ಅಷ್ಟೂ 16 ಅಭ್ಯರ್ಥಿಗಳ ನಾಮಪತ್ರಗಳೂ ಕ್ರಮಬದ್ಧಗೊಂಡಿವೆ.
ಇಂದು ಕೊನೆ: ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಂತ ಪೂರ್ಣಗೊಂಡಿದ್ದು, ಏ.8ರಂದು ನಾಮಪತ್ರ ಮರಳಿ ಪಡೆಯಲು ಅಂತಿಮವಾಗಿದೆ. ಹೀಗಾಗಿ ತಮ್ಮ ಪಕ್ಷಗಳ ಕನಿಷ್ಠ 2ರಿಂದ 5 ಸಾವಿರ ಮತಗಳಾದರೂ ವಿಭಜನೆ ಮಾಡುವಂತಹ ಅಭ್ಯರ್ಥಿಗಳು ಯಾರು ಯಾರು ಇದ್ದಾರೆ ಎಂಬ ಲೆಕ್ಕಾಚಾರ ಮಾಡಿದ್ದು, ಅದರಲ್ಲಿ ತಮಗೆ ತೊಡಕಾಗಲ್ಲವರ ಮನವೋಲಿಸಿ, ನಾಮಪತ್ರ ಹಿಂದಕ್ಕೆ ತೆಗೆಸಲು ಗಂಭೀರ ಪ್ರಯತ್ನ ನಡೆದಿವೆ ಎಂದು ತಿಳಿದು ಬಂದಿದೆ.
ನೀಲನಾಯಕ ಮನವೋಲಿಕೆ?; ದಲಿತ ಯುವ ಹೋರಾಟಗಾರ ಪರಶುರಾಮ ನೀಲನಾಯಕ ಅವರು ಈ ಬಾರಿ ರಿಪಬ್ಲಿಕ್‌ ಪಾರ್ಟಿ ಆಪ್‌ ಇಂಡಿಯಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರು ದಲಿತ ಹೋರಾಟದ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದಿದ್ದು, ಒಂದಷ್ಟು ಯುವ ಸಮೂಹವನ್ನೂ ಕಟ್ಟಿಕೊಂಡಿದ್ದಾರೆ. ಇವರ ಸ್ಪರ್ಧೆಯಿಂದ ದಲಿತ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಅವರ ಮನವೋಸಿ, ನಾಮಪತ್ರ ಮರಳಿ ಪಡೆಯುವಂತೆ ಮಾಡಬೇಕು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆದಿದೆ. ಈ ಹೊಣೆಯನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ವಹಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಆದರೆ, ನೀಲನಾಯಕ ಅವರು ರಿಪಬ್ಲಿಕ್‌ ಪಾರ್ಟಿ ಆಪ್‌ ಇಂಡಿಯಾ ಪಕ್ಷದಿಂದ ಸ್ಪರ್ಧೆ ಮಾಡಿದ್ದು, ಕಣದಿಂದ ಹಿಂದೆ ಸರಿಯುವುದು ಅನುಮಾನ ಎಂದೂ ಹೇಳಲಾಗಿದೆ.
ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ವೀಣಾ 
ಇಳಕಲ್ಲ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನಗರದ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದಿಂದ ವಿಜಯ ಎಸ್‌ಆರ್‌ಕೆ ವಾಹನದಲ್ಲಿ ಮಠದಿಂದ ಪ್ರಚಾರ ಕೈಗೊಂಡರು.
ಪ್ರಚಾರಕ್ಕೂ ಮೊದಲು ಮಠದ ಗುರುಮಹಾಂತ ಸ್ವಾಮೀಜಿ ಆಶೀರ್ವಾದ ಪಡೆದರು. ನಂತರ ತೆರೆದ ವಾಹನದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮುಖಂಡರೊಳಗೊಂಡು ಅಭ್ಯರ್ಥಿ ವೀಣಾ ಕಾಶಪ್ಪನವರ, ನಾ ನಿಮ್ಮ ಮನೆಮಗಳು ನನಗೊಂದು ಅವಕಾಶ ನೀಡಿ, ಬಾಗಲಕೋಟೆ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಿಂದ ಮೇನ್‌ ಬಜಾರ್‌, ಬಸವೇಶ್ವರ ದೇವಸ್ಥಾನ, ಮೇಗಲಪೇಟೆ, ಕಾಯಿಪಲ್ಲೆ ಬಜಾರ್‌, ರಾಮಮಂದಿರ ರಸ್ತೆ, ಕೊಪ್ಪರದಪೇಟೆ, ಮಾರ್ಗವಾಗಿ ನೀಲಕಂಠೇಶ್ವರ ದೇವಸ್ಥಾನ, ಚಂದ್ರಶೇಖರ್‌
ಆಜಾದ್‌ ಸರ್ಕಲ್‌, ಮಹಾಂತೇಶ ಟಾಕೀಸ್‌ ರಸ್ತೆ, ಸುಭಾಷ ರೋಡ್‌, ನಗರಸಭೆ ಕಾರ್ಯಾಲಯ ರಸ್ತೆ, ಕಂಠಿ ಸರ್ಕಲ್‌ಗೆ
ಬಂದ ಮುಖಂಡರು, ಕಾರ್ಯಕರ್ತರು ದಾರಿಯುದ್ಧಕ್ಕೂ ಜಯಘೋಷ ಕೂಗಿದರು.
ಕಂಠಿ ಸರ್ಕಲ್‌ನ ಎಸ್‌.ಆರ್‌. ಕಂಠಿ ಪುತ್ಥಳಿಗೆ ವಿಜಯಾನಂದ ಹಾಗೂ ವೀಣಾ ಕಾಶಪ್ಪನವರ ಮಾಲಾರ್ಪಣೆ ಮಾಡಿದರು.
ನಂತರ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತ ಸೇರಿ ಅಲ್ಲಾಂಪುರಪೇಟೆ ಹೋಗಿ ಮುರ್ತುಜಾ ಖಾದ್ರಿ ದರ್ಗಾಕ್ಕೆ ಹೋಗಿ ಆಶೀರ್ವಾದ ಪಡೆದರು.
ಭವ್ಯ ಮೆರವಣಿಗೆ: ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಚಾರದಲ್ಲಿ ಮಹಿಳೆಯರು ಹೂಮಾಲೆ ಹಾಕಿ ಯುಗಾದಿ ಜತೆ ಚುನಾವಣೆ ಗೆಲುವಿಗೆ ಶುಭ ಹಾರೈಸಿದರು. ಇಳಕಲ್ಲನ ಮೇಗಲಪೇಟೆದಲ್ಲಿ ಪ್ರಚಾರ ವಾಹನ ನಿಂತು ಅಭ್ಯರ್ಥಿ ಪರ ಮುಖಂಡ ಡಾ| ಸುಭಾಸ ಕಾಖಂಡಕಿ ಮತಯಾಚನೆ ಮಾಡಿದರು.
ಕಳೆದ ಹದಿನೈದು ವರ್ಷಗಳ ಬಿಜೆಪಿ ಅಧಿಕಾರವಧಿಯಲ್ಲಿ ಪಿ.ಸಿ. ಗದ್ದಿಗೌಡರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ.
ಕೇವಲ ವಾಜಪೇಯಿ, ಬಿ.ಎಸ್‌. ಯಡಿಯೂರಪ್ಪ, ಮೋದಿ ಗಾಳಿ ಮೇಲೆ ಗದ್ದಿಗೌಡರ ಗೆದ್ದಿದ್ದಾರೆ. ಈ ಬಾರಿ ಜನರು ಪರಿವರ್ತನೆ ಬಯಸುತ್ತಿದ್ದಾರೆ. ಆದ್ದರಿಂದ ಮೈತ್ರಿ ಸರಕಾರದ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ನನ್ನ ಗುರಿ ಗ್ರಾಮೀಣ ಮತ್ತು ನಗರಪ್ರದೇಶಗಳ ಅಭಿವೃದ್ಧಿಯಾಗಬೇಕು
ಎಂಬುದು. ಜತೆಗೆ ನೇಕಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆದ್ದರಿಂದ ಅವಕಾಶ ನೀಡುವಂತೆ ಮನವಿ ಮಾಡಿದರು. ಪ್ರಚಾರದಲ್ಲಿ ವೆಂಕಟೇಶ, ಅರುಣಬಿ, ಡಾ| ಕಾಖಂಡಕಿ, ಶರಣಪ್ಪ ಆಮಾಳ, ಜಬ್ಬರ್‌ ಕಲ್ಬುರ್ಗಿ, ವೀಣಾ ಅರಳಿಕಟ್ಟಿ, ಸುಧಾರಾಣಿ ಸಂಗಮ, ಆಫ್ರೀನ್‌ ಸೋನಾರ್‌, ಮೌನೇಶ ಬಂಡಿವಡ್ಡರ, ಎಂ.ಎಲ್‌. ಶಾಂತಗಿರಿ ಇತರರಿದ್ದರು.
ನೇಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿಲ್ಲ. ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಒಂದು ಓಟು ಹಾಕಿ ಗೆಲ್ಲಿಸಿದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ. ಒಮ್ಮೆ ಅವಕಾಶ ಕೊಟ್ಟು ನೋಡಿ. ವಿಜಯ ಮಹಾಂತ ಸ್ವಾಮೀಜಿ ಸಾಕ್ಷಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕಾರ್ಯ ಮಾಡುತ್ತೇನೆ.
 ವೀಣಾ ಕಾಶಪ್ಪನವರ, ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ
ಹುನಗುಂದದಲ್ಲಿ ಕಾಂಗ್ರೆಸ್‌ ಮತಯಾಚನೆ
ಹುನಗುಂದ: ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಸ್‌. ಆರ್‌. ನವಲಿಹಿರೇಮಠ ರವಿವಾರ ಪ್ರಚಾರ ಆರಂಭಿಸಿದರು.
ತೆರೆದ ವಾಹನದಲ್ಲಿದ್ದ ಅಭ್ಯರ್ಥಿ ವೀಣಾ ಕಾಶಪ್ಪನವರ ಜತೆ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಸಾಥ್‌ ನೀಡಿದ್ದರು.
ಬಸವಮಂಟಪದಿಂದ ಆರಂಭಗೊಂಡು ಲಿಂಗದಕಟ್ಟಿ, ಮಾರ್ಕೆಟ್‌ ನಂತರ ಸಂಗಮೇಶ್ವರ ದೇವಸ್ಥಾನಕ್ಕೆ ಹೋಗಿ
ಆಶೀರ್ವಾದ ಪಡೆದರು.
ನಂತರದಲ್ಲಿ ವಿಜಯಮಹಾಂತೇಶ ಸರ್ಕಲ್‌ ಅಂಬೇಡ್ಕ ಸರ್ಕಲ್‌ನಲ್ಲಿ ಮಾಲಾರ್ಪಣೆ ಮಾಡಿದರು. ಆಜಾದ್‌ ನಗರ ಮಾರ್ಗವಾಗಿ ಮಲ್ಲಿಕಾರ್ಜುನ, ವಿದ್ಯಾನಗರದಲ್ಲಿ ಮನೆ-ಮನೆಗೆ ತರೆಳಿ ಜನರಿಗೆ ಮತ ನೀಡುವಂತೆ ಮನವಿ
ಮಾಡಿದರು.
ಬಳಿಕ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಸ್‌.ಆರ್‌. ನವಲಿಹಿರೇಮಠ ಮಾತನಾಡಿ, ಲೋಕಸಭಾ ಚುನಾವಣೆಗೆ ವೀಣಾ ಕಾಶಪ್ಪನವರ ಸ್ಪರ್ಧಿಸಿದ್ದಾರೆ. ಜಿಲ್ಲಾಭಿವೃದ್ಧಿಗೆ ಮತ ನೀಡಿ ಜನಾಶೀರ್ವಾದ ಮಾಡಿ ಗೆಲ್ಲಿಸಬೇಕು. ಜಿಲ್ಲೆಗೆ ಹಾಲಿ ಸಂಸದರ ಕೊಡುಗೆ ಶೂನ್ಯ ಎಂದರು.
ಜಿಲ್ಲೆಯಲ್ಲಿ ವೀಣಾ ಕಾಶಪ್ಪನವರ ಜಿಪಂ ಅಧ್ಯಕ್ಷರಾಗಿ ಗ್ರಾಮ ವಾಸ್ತವ್ಯ ಮಾಡಿ ಜನಮನಗೆದ್ದಿದ್ದಾರೆ. ಎಲ್ಲರ ಹೃದಯ
ಗೆದ್ದಿದ್ದಾರೆ. ಅಭಿವೃದ್ಧಿಗಾಗಿ ಅವರಿಗೆ ಸಿಕ್ಕ ಕಾಲಾವಧಿಯಲ್ಲಿ ಜನಸೇವೆ ಮಾಡಿ ಮನೆ-ಮಗಳಾಗಿದ್ದಾರೆ.  ನಮ್ಮ ತಾಲೂಕಿನಿಂದ ಅವರನ್ನು ಐವತ್ತು ಸಾವಿರ ಮತಗಳ ಮುನ್ನಡೆ ಪಡೆದು ಗೆಲ್ಲಿಸೋಣ ಎಂದು ತಿಳಿಸಿದರು.
ಭಾಷಣ ಮಾಡುವುದೇ ದೇಶದ ಅಭಿವೃದ್ಧಿಯಲ್ಲ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಮ್ಮ ತಾಲೂಕಿಗೆ ಅವಕಾಶ
ದೊರೆತಿದೆ. ಅದನ್ನು ಸದ್ಬಳಕೆಗೆ ಎಲ್ಲ ಮತದಾರರು ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮಾಜಿ ಶಾಸಕ
ವಿಜಯಾನಂದ ಕಾಶಪ್ಪನವರ ಮನವಿ ಮಾಡಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ನೀಡಿದ ಭರವಸೆ, ಮಾತುಗಳು ಉಳಿಸಿಕೊಂಡಿಲ್ಲ ಎಂದು
ಟೀಕಿಸಿದರು.  ಮೂರು ಅವಧಿಯಲ್ಲಿ ಗದ್ದಿಗೌಡರ ಅವರು ಅಭಿವೃದ್ಧಿ ಮಾಡದೇ ಮತ್ತೂಮ್ಮೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆಂದು ತಿಳಿಸಿದರು.
ಹುನಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ಜೆಡಿಎಸ್‌ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಜಬ್ಬರ್‌ ಕಲಬುರ್ಗಿ, ಮುಖಂಡ ಯಮನಪ್ಪ ಬೆಣ್ಣಿ ಪಾಲ್ಗೊಂಡಿದ್ದರು.
ಶೂನ್ಯ ಸಾಧಕರ ದೂರವಿಟ್ಟು ಕ್ರಿಯಾಶೀಲರ ಆಯ್ಕೆ ಮಾಡಲು ಮನವಿ 
ಬಾಗಲಕೋಟೆ: ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ವೀಣಾ ವಿಜಯಾನಂದ ಕಾಶಪ್ಪ ನವರ ಪರ ಮಾಜಿ ಸಚಿವ ಹಾಗೂ
ಬಿಟಿಡಿಎ ಅಧ್ಯಕ್ಷ ಎಚ್‌.ವೈ. ಮೇಟಿ ಹಳೇ ನಗರದ ಅಂಜುಮನ್‌ ಹೈಸ್ಕೂಲ್‌ ಆವರಣದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ಬಾರಿ ಆಯ್ಕೆಯಾದ ಸಂಸದ ಗದ್ದಿಗೌಡರ ಅಭಿವೃದ್ಧಿ ಕಾರ್ಯ
ಮಾಡುವಲ್ಲಿ ವಿಫಲರಾಗಿದ್ದಾರೆ. ಅವರ ಸಾಧನೆ ಶೂನ್ಯ. ಹೀಗಾಗಿ ಅವರನ್ನು ಈ ಬಾರಿ ದೂರವಿಟ್ಟು, ಕ್ರಿಯಶೀಲರಾಗಿರುವ ಕಾಂಗ್ರೆಸ್‌ನ ವೀಣಾ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜಿಲ್ಲೆಯ ಜನರ ಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ನಗರದ ಕಿಲ್ಲಾ ಓಣಿ, ಆಸಾರ್‌ ಮೊಹಲ್ಲ, ಹೊನ್ಯಾಳ ದೇಸಾಯಿ ಓಣಿಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಮತಯಾಚಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ನಗರ ಘಟಕದ ಅಧ್ಯಕ್ಷ ಹಾಜಿಸಾಬ ದಂಡಿನ, ನಗರ ಯೋಜನಾ
ಪ್ರಾಧಿಕಾರ ಮಾಜಿ ಅಧ್ಯಕ್ಷ ಎ.ಎ.ದಂಡಿಯಾ, ಮಹ್ಮದಗೌಸ್‌ ಟಂಕಸಾಲಿ, ಮಲ್ಲು ಶಿರೂರ, ವಿಜಯ ಕಮತಗಿ, ಖ್ವಾಜಾ ಹೊನ್ಯಾಳ, ಚನ್ನವೀರ ಅಂಗಡಿ, ಮಂಜುನಾಥ ವಾಸನದ, ಮುಖಂಡರಾದ ನಾಗರಾಜ ಹದ್ಲಿ, ಗೋವಿಂದ ಬಳ್ಳಾರಿ, ಹಣಮಂತ ರಾಕುಂಪಿ, ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಶ್ರವಣ ಖಾತೇದಾರ, ವೀರಣ್ಣ ಹುಂಡೇಕಾರ, ಮಲ್ಲಿಕಾರ್ಜುನ ಮೇಟಿ, ಐ.ಎಂ.ಬಳಬಟ್ಟಿ, ದಯಾನಂದ ಚಲವಾದಿ, ಮಹಾಂತೇಶ ಪೂಜಾರಿ, ಸೈಫುದ್ದೀನ್‌ ಕಲಾದಗಿ, ಜೆಡಿಎಸ್‌ ಮುಖಂಡರಾದ ಸಲೀಂ ಮೋಮೀನ್‌, ಘನಶ್ಯಾಂ ಭಾಂಡಗೆ, ಶರಣು ಹುರಕಡ್ಲಿ, ಯಾಸೀನ್‌ ಮಿರ್ಜಿ, ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಪಾರ್ವತಿ ಲಮಾಣಿ, ಮಂಜುಳಾ ಭೂಸಾರೆ, ಮಮತಾಜ ಸುತಾರ ಇದ್ದರು.
„ವಿಶೇಷ ವರದಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.