ನೆರೆ ಸಂತ್ರಸ್ತ ವ್ಯಾಪಾರಿಗಳಿಗೆ ಸಹಾಯಧನ

Team Udayavani, Sep 30, 2019, 11:46 AM IST

ಮಹಾಲಿಂಗಪುರ: ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮತ್ತು ಮುಧೋಳ ತಾಲೂಕಾ ಹಾಗೂ ಮಹಾಲಿಂಗಪುರ ಔಷಧ ವ್ಯಾಪಾರಿಗಳ ಸಹಯೋಗದಲ್ಲಿ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ಸಹಾಯಧನ ಚೆಕ್‌ ವಿತರಿಸಲಾಯಿತು. ರವಿವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಸಂಗಪ್ಪ ಗೌರೋಜಿ ಸಮ್ಮುಖದಲ್ಲಿ ನೆರೆಸಂತ್ರಸ್ತ ಢವಳೇಶ್ವರ, ಮಿರ್ಜಿ ಮತ್ತು ಮುಧೋಳ ಸೇರಿದಂತೆ ಎಂಟು ಜನ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ತಲಾ 7 ಸಾವಿರದಂತೆ 56 ಸಾವಿರ ರೂಗಳ ಸಹಾಯಧನ ಚೆಕ್‌ ವಿತರಿಸಲಾಯಿತು.

ಔಷಧ ವ್ಯಾಪಾರಿಗಳ ಸಂಘದ ಮುಧೋಳ ತಾಲೂಕಾ ಅಧ್ಯಕ್ಷ ರಾಜು ನಾಯಿಕ, ಮಹಾಲಿಂಗಪುರ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ಲೋಕಾಪುರ ಅಧ್ಯಕ್ಷ ವೆಂಕಣ್ಣ ಕಮಕೇರಿ, ಮಹಾಲಿಂಗಪುರ ಸಂಘದ ಗೌರವಾಧ್ಯಕ್ಷ ಶ್ರೀಪಾದ ಗುಂಡಾ, ಕಾರ್ಯದರ್ಶಿ ಆನಂದ ಬೆಳ್ಳಿಕಟ್ಟಿ, ಖಜಾಂಚಿ ರವಿ ಗೊಬ್ಟಾಣಿ, ಔಷಧ ವ್ಯಾಪಾರಸ್ಥರಾದ ಈರಪ್ಪ ಹುಂಡೇಕಾರ, ಬಸವರಾಜ ಕೊಣ್ಣೂರಮಠ, ರವಿ ಖೋತ, ಮನೋಹರ ಜಮಖಂಡಿ, ಸಂತೋಷ ಮುಳ್ಳೂರ, ರಮೇಶ ಯಡ್ರಾವಿ, ಸಂಗಯ್ನಾ ಪೂಜಾರಿ, ಶ್ರೀಶೈಲ ಜಕಾತಿಮಠ, ನಾಗು ಬೆಂಗಳೂರು, ಮಹಾಂತೇಶ ಮಠದ, ಶಿವಪುತ್ರ ಮುಗಳಖೋಡ ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ರಾಜ್ಯದಲ್ಲಿ ಡಿಫ್ತೀರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಡಿ. 11ರಿಂದ 31ರವರೆಗೆ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ...

  • ಬಾಗಲಕೋಟೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ....

  • „ಶ್ರೀಶೈಲ ಕೆ. ಬಿರಾದಾರ ಬಾಗಲಕೋಟೆ: ಶಾಲೆ, ವಸತಿ ನಿಲಯಗಳಲ್ಲಿ ಊಟ ಮಾಡಿದ ಬಳಿಕ ಮಿಕ್ಕುವ ಆಹಾರವನ್ನು ಇಷ್ಟು ದಿನ ಚೆಲ್ಲಲ್ಲಾಗುತ್ತಿತ್ತು. ಆದರೆ ಇನ್ನು ತಿಪ್ಪೆಗೆ...

  • ಬಾಗಲಕೋಟೆ: ಕ್ಷೌರಿಕ ಸಮಾಜವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಾನಿಸಿದ್ದಾರೆ ಎಂದು ಆರೋಪಿಸಿ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಮಂಗಳವಾರ ಪ್ರತಿಭಟನೆ...

  • ಬನಹಟ್ಟಿ: ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ಸರಕಾರ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಂತೆಯೇ ಬನಹಟ್ಟಿ ನಗರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಸ್ಥಳೀಯ...

ಹೊಸ ಸೇರ್ಪಡೆ