ಕಡು ಬೇಸಿಗೆಯಲ್ಲೂ ಭರಪೂರ ನೀರು

ರಬಕವಿ-ಬನಹಟ್ಟಿ ತಾಲೂಕಿಗಿಲ್ಲ ಕುಡಿಯುವ ನೀರಿನ ಸಮಸ್ಯೆ

Team Udayavani, Apr 19, 2022, 11:39 AM IST

6

ರಬಕವಿ-ಬನಹಟ್ಟಿ: ತಾಲೂಕಿಗೆ ಕೃಷಾ ನದಿ ಹಾಗೂ ಘಟಪ್ರಭಾ ನದಿ ಪ್ರಮುಖ ನೀರಿನ ಜಲ ಮೂಲಗಳಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಸಾಕಷ್ಟು ಇದ್ದು  ಬೇಸಿಗೆಯನ್ನು ಸರಾಗವಾಗಿ ಕಳೆಯಬಹುದು ಎಂಬುದು ತಾಲೂಕಿನ ಸಾರ್ವಜನಿಕರ ಅಭಿಪ್ರಾಯವಾಗಿದೆ. ಕಳೆದ 2-3 ವರ್ಷಗಳಿಂದ ಮಳೆಯ ಪ್ರಮಾಣ ಸಾಕಷ್ಟು ಆಗಿದ್ದು ಅಲ್ಲದೇ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿದು ಅಂತರ್ಜಲ ಮಟ್ಟ ಹೆಚ್ಚಾಗದ್ದು ನೀರಿನ ಅಭಾವ ಅಷ್ಟಾಗಿ ಕಾಣಸಿಗದು.

2-3 ವರ್ಷಗಳ ಹಿಂದೆ ಕುಡಿಯುವ ನೀರಿನ ಭವನೆ ಸಾಕಷ್ಟು ಇತ್ತು. ಆದರೆ ಇದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಾಸಕ ಸಿದ್ದು ಸವದಿಯವರು ಆಯಾ ಭಾಗದಲ್ಲಿ ಕೊಳವೇ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಅವಳಿ ನಗರಗಳಲ್ಲಿ ಉಂಟಾಗುತಿದ್ದ ನೀರಿನ ಭವನೆ ಸದಸ್ಯಕ್ಕೆ ಕಂಡು ಬರುತ್ತಿಲ್ಲ. ಕಾರಣ ನಗರದ ಎಲ್ಲ ವಾರ್ಡಗಳಲ್ಲಿ ನಗರಸಭೆ ವತಿಯಿಂದ ಕೃಷ್ಣಾ ನದಿಯಿಂದ ಜಾಕವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದು, ಅಲ್ಲದೇ ಪ್ರತಿಯೊಂದು ವಾರ್ಡ್ ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು ಇದರಿಂದಾಗಿ ಈ ಸಲದ ಬೇಸಿಗೆ ಸಂಪೂರ್ಣವಾಗಿ ನಿಭಾಯಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ತಾಲೂಕಿನ ಮಹಾಲಿಂಗಪುರದಲ್ಲಿಯೂ ಕೂಡಾ ನೀರಿನ ಸಮಸ್ಯೆ ಆಗಲಾರದು. ಕಾರಣ ಅಲ್ಲಿಯೂ ಕೂಡಾ ಕೆರೆ ತುಂಬಿದ್ದು, ಹಾಗೂ ಪುರಸಭೆಯ್ಯಾದ್ಯಂತ ಕೊಳವೆ ಬಾವಿಗಳನ್ನು ಕೊರೆಯಿಸಿದ್ದರಿಂದ ನೀರಿನ ಸಮಸ್ಯೆ ಉಂಟಾಗುವ ಸಂಭವವಿಲ್ಲ. ಅಲ್ಲದೇ ಅಲ್ಲಿನ ಪುರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಅದೇ ರೀತಿ ತೇರದಾಳದಲ್ಲಿಯೂ ಕೂಡಾ ನೀರಿನ ಸಮಸ್ಯೆ ಉಂಟಾಗದು ಅಲ್ಲಿಯೂ ಕೂಡಾ ಕೃಷ್ಣಾ ನದಿಯ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಬೇಸಿಗೆಯನ್ನು ನಿರಾಯಾಸವಾಗಿ ಕಳೆಯಬಹುದು.

ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿಯೂ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಯಸಿರುವುದರಿಂದ ಅಲ್ಲಿಯೂ ಕೂಡಾ ಈ ಭಾರಿ ನೀರಿನ ಭವನೆ ಉಂಟಾಗುವ ಸಾಧ್ಯತೆ ಕಡಿಮೆ ಅಲ್ಲದೇ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಿಂದಾಗಿ ಕೃಷ್ಣಾ ನದಿಯ ಮೂಲಕ ನೀರು ಕೊಡಿಸುವ ವ್ಯವಸ್ಥೆ ಮಾಡಿದ್ದು, ಅಲ್ಲದೇ ಆಸಂಗಿ ಹಾಗೂ ಜಗದಾಳ ಗ್ರಾಮಗಳಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳ ಮೂಲಕ ಗ್ರಾಮಪಂಚಾಯತಿಯವರು ನೀರು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಕೆಲವೊಂದು ಬಡಾವಣೆಗಳಿಗೆ ನೀರಿನ ಸಮಸ್ಯೆ ಆಗಬಹುದು ಆದರೂ ಅಲ್ಲಿ ಸಮರ್ಪಕ ನೀರು ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಾಲೂಕು ಆಡಳಿತ ಹೇಳುತ್ತಿದೆ.

ನೀರು ಪೂರೈಕೆಯಲ್ಲಿ ವಿಶೇಷ ಗ್ರಾಮ ಆಸಂಗಿ: ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿಯೂ ಕೃಷ್ಣಾ ನದಿ ಕೂಗಳತೆಯಲ್ಲಿ ಹರಿಯುತ್ತಿದ್ದರೆ ಅದರ ಗೋಜಿಗೆ ಹೋಗದೆ ತನ್ನದೇ ಆದ ಬಾವಿ ಹಾಗೂ ಕೊಳವೆ ಬಾವಿಗಳನ್ನು ಬಳಸಿಕೊಂಡು ಆಸಂಗಿ ಗ್ರಾಮಕ್ಕೆ ದಿನನಿತ್ಯ ವರ್ಷದ 12 ತಿಂಗಳು ಕೃಷ್ಣೆ ಬತ್ತಿದರೂ ಕೂಡಾ ನೀರು ಪೂರೈಕೆ ಮಾಡುತ್ತಿದ್ದು, ಇದೊಂದು ವಿಶೇಷವಾಗಿದೆ.

ಅದೇ ರೀತಿ ತಾಲೂಕಿನ ಜಗದಾಳ ಗ್ರಾಮದಲ್ಲಿಯೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲೂ ಇದ್ದರೂ, ಕೂಡಾ ಬೋರ್ ವೆಲ್ ಮೂಲಕ ಪ್ರತಿದಿನ ನೀರ ಪೂರೈಕೆ ವ್ಯವಸ್ಥೆ ಮಾಡಿಕೊಂಡಿದೆ. ಇದರಿಂದ ಈ ಭಾಗದಲ್ಲೂ ಕೂಡಾ ಯಾವುದೇ ನೀರಿನ ತೊಂದರೆ ಇಲ್ಲ.

ಈ ಭಾಗದ ಕೃಷ್ಣಾ ನದಿ ತುಂಬಿರುವುದರಿಂದ  ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಅಲ್ಲದೇ ಕೊಳವೆ ಬಾವಿಗಳು ಹೆಚ್ಚಾಗಿ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ನೀರು ದೊರೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಅಲ್ಲದೇ ಬೇಸಿಗೆಯ ತಾಪ ಮಾಣ ಹೆಚ್ಚಾಗಿರುವುದರಿಂದ ಸಾರ್ವಜನಿಕ ಸಂಘ ಸಂಸ್ಥೆಗಳು ಪ್ರತಿ ವರ್ಷದಂತೆ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೀರಿಣ ಅರವಟಿಗೆಗಳನ್ನು ಪ್ರಾರಂಭಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಯಾವುದು ಇಲ್ಲ. ಕೆಲವೊಂದು ಕಡೆ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಗಿದ್ದು, ಅಂತಹವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನೀರು ಕೊಡುತ್ತಿದ್ದೇವೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಕೊಳವೆ ಬಾವಿ ಕೊರೆಸಲು ಸೂಚಿಸಿದ್ದು, ಅವಶ್ಯವೆನಿಸಿದರೆ ನೀರಿನ ಸಮಸ್ಯೆ ನಿಭಾಯಿಸಲು ಸಿದ್ಧರಿದ್ದೇವೆ.   – ಸಿದ್ದು ಕ. ಸವದಿ, ಶಾಸಕರು, ತೇರದಾಳ ಮತ ಕ್ಷೇತ್ರ

ತಾಲೂಕಿನಲ್ಲಿ ನೀರಿನ ಯಾವುದೇ ಸಮಸ್ಯೆ ಇಲ್ಲಾ, ಈ ಕುರಿತು ಈಗಾಗಲೇ ಸಭೆ ಮಾಡಿದ್ದೇವೆ. ಹಿಪ್ಪರಗಿ ಬ್ಯಾರೇಜನ್ ಹಿಂಬಾಗದಲ್ಲಿ5 ಟಿಎಂಸಿ ನೀರಿದ್ದು ನಮ್ಮಲ್ಲಿ ಯಾವುದೇ ನೀರಿನ ಅಭಾವ ಆಗುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.  – ಎಸ್. ಬಿ. ಇಂಗಳೆ ತಹಶೀಲ್ದಾರರು, ರಬಕವಿ-ಬನಹಟ್ಟಿ

ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲಾ, ಆದರೂ ತಾಲೂಕಿನ ಬೋರವೆಲ್ಲಗಳನ್ನು ಹಾಗೂ ಟ್ಯಾಂಕರಗಳನ್ನು ಗುರುತಿಸಿದ್ದು, ಈ ಕುರಿತು ಸಭೆಯನ್ನು ಕೂಡಾ ಮಾಡಲಾಗಿದೆ. ಈ ವರ್ಷ ನೀರಿನ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.  – ಸಂಜಯ ಹಿಪ್ಪರಗಿ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ, ರಬಕವಿ-ಬನಹಟ್ಟಿ

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

marriage 2

ಆನ್‌ಲೈನ್‌ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ

Covid test

ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ

1-ssdd

ಏಷ್ಯಾ ಕಪ್‌ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

1-f-ffsdf

ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

siddu 2

ಆರ್ ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್: ಸವಾಲಿನ ಪ್ರಶ್ನೆಗಳ ಸುರಿಮಳೆ

ಹಾಡಹಗಲೇ ರಿಯಲ್‌ ಎಸ್ಟೇಟ್‌ ವ್ಯಾಪಾರಿಯ ಅಪಹರಣ: ಕೆಲವೇ ನಿಮಿಷಗಳೊಳಗೆ ಆರೋಪಿಗಳ ಬಂಧನ

ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯ ಅಪಹರಣ: ಕೆಲವೇ ನಿಮಿಷಗಳೊಳಗೆ ಆರೋಪಿಗಳ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

8

13 ಬೇಡಿಕೆ ಈಡೇರಿಕೆಗೆ 15 ದಿನ ಗಡುವು

6

ಮಳೆಹಾನಿ ಪರಿಹಾರಕ್ಕೆ ತುರ್ತು ಕ್ರಮ

ಕೃಷಿ ಹೊಂಡದ ಮೇಲೆ ಕೋಳಿ ಫಾರ್ಮ್ : ರೈತ ಧರೆಪ್ಪ ಕಿತ್ತೂರ ಅವರ ಹೊಸ ಅನ್ವೇಷಣೆ

ಕೃಷಿ ಹೊಂಡದ ಮೇಲೆ ಕೋಳಿ ಫಾರ್ಮ್ : ರೈತ ಧರೆಪ್ಪ ಕಿತ್ತೂರ ಅವರ ಹೊಸ ಅನ್ವೇಷಣೆ

1-dssdsa

ರಬಕವಿ- ಬನಹಟ್ಟಿ: ಕಟ್ಟಿಂಗ್ ಶಾಪ್ ನಲ್ಲಿ ಸ್ನೇಹಿತನಿಂದಲೇ ಇರಿದು ಯುವಕನ ಕೊಲೆ

MUST WATCH

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

ಹೊಸ ಸೇರ್ಪಡೆ

marriage 2

ಆನ್‌ಲೈನ್‌ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ

arrested

ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ

ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು

ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು

Covid test

ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ

1-ssdd

ಏಷ್ಯಾ ಕಪ್‌ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.