ಕೃಷ್ಣಾ ನದಿಯಲ್ಲಿ 3.5 ಕಿಮೀ ಈಜಿದ 62ರ ವೃದ್ಧ

Team Udayavani, Sep 20, 2018, 6:00 AM IST

ban20091806medn.jpg

ಬಾಗಲಕೋಟೆ: 62 ವರ್ಷದ ವೃದ್ಧರೊಬ್ಬರು ಬರೋಬ್ಬರಿ 3.50 ಕಿಮೀ ದೂರದವರೆಗೆ ಕೃಷ್ಣಾ ನದಿಯಲ್ಲಿ ಈಜುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಮೊಹರಂ ಪ್ರಯುಕ್ತ ಬುಧವಾರ ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯಲ್ಲಿ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಹಿರಿಯರಾದ ಮಹಾದೇವಪ್ಪ ಮನಗೂಳಿ(62) ಎಂಬ ವೃದ್ಧರು, ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ಈಜಲು ಆರಂಭಿಸಿ, ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ (ಒಟ್ಟು 2 ಗಂಟೆ 35 ನಿಮಿಷ) ದಡ ಸೇರುವ ಮೂಲಕ ಮೊದಲ ಸ್ಥಾನ ಪಡೆದರು.

ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಮೊಹರಂ ನಿಮಿತ್ತ ಈಜು ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಲೋ ಸ್ವಿಮ್ಮಿಂಗ್‌ ಮಾಡಿ, ಯಾರು ಕೊನೆಯದಾಗಿ ದಡ ಸೇರುತ್ತಾರೋ ಅವರಿಗೆ ಗ್ರಾಮಸ್ಥರ ಪರವಾಗಿ 5 ತೊಲೆ ಬೆಳ್ಳಿ ಖಡ್ಗ ನೀಡಲು ತೀರ್ಮಾನಿಸಲಾಗಿತ್ತು. ಈ ಸ್ಪರ್ಧೆಗೆ ರೊಳ್ಳಿಯ ಇಬ್ಬರು ಶಿಕ್ಷಕರು, ಗಿರಿಸಾಗರದ ಓರ್ವ ಹೆಸ್ಕಾಂ ಜೆಇ, ಕೊರ್ತಿಯ ಇಬ್ಬರು ರೈತರು ಸೇರಿದಂತೆ ರೊಳ್ಳಿ, ಕೊರ್ತಿ, ಗಿರಿಸಾಗರ ಗ್ರಾಮಗಳ ಒಟ್ಟು 9 ಜನರು ಸ್ಪರ್ಧೆಗೆ ಸಜ್ಜಾದರು.

ವಿಜಯಪುರ ಜಿಲ್ಲೆಯ ಕೊಲ್ಹಾರ ದಡದಿಂದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ (ಕೊರ್ತಿ ಬಳಿ) ದಡದವರೆಗೆ ಕೃಷ್ಣಾ ನದಿ ಒಟ್ಟು 3.50 ಕಿಮೀ ದೂರವಿದೆ. ಬೃಹತ್‌ ಸೇತುವೆ ಕೆಳ ಭಾಗದಿಂದ ಒಟ್ಟು 9 ಜನರು ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ಗಂಗಾಪೂಜೆ ನೆರವೇರಿಸಿದ ಬಳಿಕ ಈಜು ಆರಂಭಿಸಿದರು. ಗ್ರಾಮದ ಕಾಂಗ್ರೆಸ್‌ ಮುಖಂಡ ಶಿವಾನಂದ ನಿಂಗನೂರ, ಸುಮಾರು ಒಂದು ಕಿಮೀ ದೂರ ಬಂದ ಬಳಿಕ, ಹೆಚ್ಚಿನ ತೆರೆ (ಚಿಕ್ಕ ಅಲೆ) ಬಂದಿದ್ದರಿಂದ ತೆಪ್ಪವೇರಿ ಈಜು ನಿಲ್ಲಿಸಿದರು. ಬಳಿಕ, ಸೇತುವೆಯ ಮೂರು ಕಂಬಗಳು ದಾಟುವವರೆಗೂ ತೆಪ್ಪದಲ್ಲಿ ಸಾಗಿ ಬಳಿಕ, ಮತ್ತೆ ಈಜಲು ಆರಂಭಿಸಿದರು.

ಉಳಿದ 8 ಜನರು ಈಜುತ್ತ ಕೊಲ್ಹಾರ ಕಡೆಯ ದಡದಿಂದ ಬೀಳಗಿ ತಾಲೂಕಿನ ಟಕ್ಕಳಕಿ ಕಡೆಯ ದಡಕ್ಕೆ ಬರುತ್ತಿದ್ದರು. ಒಂದೇ ಸ್ಥಳದಲ್ಲಿ ನಿಲ್ಲಲಾಗದೆ, ಮುಂಜಾಗ್ರತಾ ಕ್ರಮವಾಗಿ ಹಿಂದೆಯೇ ಇದ್ದ ತೆಪ್ಪವನ್ನೂ ಹತ್ತದೆ ನಿರಂತರ ಮತ್ತು ಸ್ಲೋ ಆಗಿ ಈಜುತ್ತ ಬರುವುದು ಹಲವರಿಗೆ ಕಷ್ಟವಾಯಿತು. ಹೀಗಾಗಿ, ಕೆಲವರು ಈಜುತ್ತ ವೇಗವಾಗಿ ದಡಕ್ಕೆ ಬಂದರು. ರೊಳ್ಳಿಯ ನಾಗಪ್ಪ ಬಿಳೆಂಡಿ ಎಂಬುವರು ಪ್ರಥಮವಾಗಿ ದಡಕ್ಕೆ ಬಂದರು. 

ಗಿರಿಸಾಗರದ ಭೀಮಶಿ ಚೌಧರಿ ಎಂಬುವರು 2ನೇಯವರಾಗಿ ದಡ ಸೇರಿದರು. ಆದರೆ, ಮಹಾದೇವಪ್ಪ ಮನಗೂಳಿ ಅತಿ ಹೆಚ್ಚು ಕಾಲ (ಒಟ್ಟು 2 ಗಂಟೆ 35 ನಿಮಿಷ) ಈಜಿ ಕೊನೆಯವರಾಗಿ ದಡ ಸೇರಿದರು. ಆ ಮೂಲಕ ಪ್ರಥಮ ಬಹುಮಾನ ಗಳಿಸಿದರು.

22 ವರ್ಷ ಬಳಿಕ ನೀರಿಗಿಳಿದಿದ್ದರು
ಕೊರ್ತಿ ಗ್ರಾಮದ ರೈತ ಮಹಾದೇವಪ್ಪ ಮನಗೂಳಿ 22 ವರ್ಷಗಳಿಂದ ಈಜುವುದನ್ನೇ ಬಿಟ್ಟಿದ್ದರಂತೆ. ” ಈಜು ಸ್ಪರ್ಧೆ ಏರ್ಪಡಿಸಿದ್ದನ್ನು ರೊಳ್ಳಿಯ ನಮ್ಮ ಸ್ನೇಹಿತರು ತಿಳಿಸಿದರು. ಆಗ ನಾನು ಬಂದು ಭಾಗವಹಿಸಿದ್ದೆ. ಗೆಲ್ಲುವುದು ನನ್ನ ಗುರಿ ಆಗಿರಲಿಲ್ಲ. ಸಾಧ್ಯವಾದಷ್ಟು ಹೆಚ್ಚು ಸಮಯ ನದಿಯಲ್ಲಿ ಈಜಬೇಕು ಎಂದು ಬಂದಿದ್ದೆ. ಈಜುತ್ತ ನದಿಯ ಮಧ್ಯೆ ಬಂದಾಗ, ಸ್ವಲ್ಪ ಹೆದರಿಕೆ ಬಿಟ್ಟರೆ ಬೇರೆನೂ ಆಗಲಿಲ್ಲ’ ಎಂದು ಬೆಳ್ಳಿ ಖಡ್ಗ ಬಹುಮಾನ ಗೆದ್ದ ಮಹಾದೇವಪ್ಪ ಮನಗೂಳಿ 
“ಉದಯವಾಣಿ’ಗೆ ತಿಳಿಸಿದರು.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.