ನೀರಾವರಿ ಯೋಜನೆ ಪ್ರಾಯೋಗಿಕ ಯಶಸ್ವಿ

| 3.6 ಟಿಎಂಸಿ ಬದಲು 6.7 ಟಿಎಂಸಿ ನೀರು ಪೂರೈಕೆ | ಯೋಜನೆಯಿಂದ ಮೂರು ಜಿಲ್ಲೆಗಳಿಗೆ ಅನುಕೂಲ

Team Udayavani, Oct 7, 2021, 10:02 PM IST

fghftgyty

ವರದಿ: ಮಲ್ಲೇಶ ರಾ. ಆಳಗಿ

ಜಮಖಂಡಿ: ತಾಲೂಕಿನಲ್ಲಿ 2014ರಲ್ಲಿ ಆರಂಭಗೊಂಡಿದ್ದ ಅಂದಾಜು 3600 ಕೋಟಿ ವೆಚ್ಚದ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಮಗಾರಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಅಥಣಿ, ಜಮಖಂಡಿ, ವಿಜಯಪುರದ ಕೆರೆಗಳಿಗೆ ನೀರು ತಲುಪಿದೆ.

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗೆ ಆರಂಭದಲ್ಲಿ ಹನಿ ನೀರಾವರಿ ಮೂಲಕ 3.6 ಟಿಎಂಸಿ ನೀರು ಹಂಚಿಕೆ ಕಾಮಗಾರಿ ಅನುಮತಿ ಪಡೆದುಕೊಂಡಿತ್ತು. ಮೂರು ಜಿಲ್ಲೆಗಳ ರೈತರು ಡ್ರಿಫ್‌ ಮೂಲಕ ನೀರು ಪೂರೈಸುವ ಈ ಕಾಮಗಾರಿಗೆ ವಿರೋಧಿಸಿದ ಹಿನ್ನೆಲೆಯಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕಾಲುವೆ ನೀರು ಹಂಚಿಕೆಯಾಗಿ ಪರಿವರ್ತನೆಗೊಂಡಿತು. 2014ರಲ್ಲಿ 950 ಕೋಟಿ ವೆಚ್ಚದಲ್ಲಿ 3.6 ಟಿಎಂಸಿ ನೀರು ಪೂರೈಕೆ ಯೋಜನೆ ಇದಾಗಿತ್ತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಯೋಜನೆ ಮಾರ್ಪಾಡುಗೊಂಡಿತು. ಈ ಪರಿಣಾಮ ಮೊದಲಿದ್ದ 3.6 ಟಿಎಂಸಿ ಬದಲಾಗಿ 6.7 ಟಿಎಂಸಿ ನೀರು ಪೂರೈಕೆಗೆ ಅನುಮತಿ ದೊರಕಿತು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಾಜಿ ಸಚಿವ ಹಾಲಿ ಶಾಸಕ ಎಂ.ಬಿ.ಪಾಟೀಲ, ದಿ| ಸಿದ್ದು ನ್ಯಾಮಗೌಡ ಹೆಚ್ಚಿನ ಶ್ರಮ ವಹಿಸಿದ್ದರು. ಸೆಪ್ಟೆಂಬರ್‌ನಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ.

ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಒಂದು ಕೆರೆ, ಸಾವಳಗಿಯಲ್ಲಿ 1, ಕಾಜಿಬೀಳಗಿಯಲ್ಲಿ 2, ಕುರಗೋಡದಲ್ಲಿ 1, ಕನ್ನೋಳ್ಳಿಯಲ್ಲಿ 1, ಗೋಠೆಯಲ್ಲಿ 1, ಗದ್ಯಾಳದಲ್ಲಿ 2, ಕಲಬೀಳಗಿಯಲ್ಲಿ 1, ತೊದಲಬಾಗಿಯಲ್ಲಿ 1 ಸೇರಿದಂತೆ ಜಮಖಂಡಿ ಮತಕ್ಷೇತ್ರದ 12 ಕರೆಗಳು, ಅಥಣಿ ತಾಲೂಕಿನ ಹಾಲಳ್ಳಿ, ಅರಟಾಳ, ತೆಲಸಂಗ, ಬನ್ನೂರ ಸಹಿತ 4 ಗ್ರಾಮದ ಕೆರೆಗಳು ಮತ್ತು ವಿಜಯಪುರದ ನಾಗರಾಳ, ಹೊನವಾಡ, ಕೋಟ್ಯಾಳ, ದಾಶ್ಯಾಳ ಸಹಿತ 4 ಗ್ರಾಮದ ಕೆರೆಗಳಿಗೆ ನೀರು ತಲುಪಿದೆ.

ಜಮಖಂಡಿ, ಅಥಣಿ ಮತ್ತು ವಿಜಯಪುರದ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹಂಚಿಕೆ ಮಾಡುವ ಯೋಜನೆ ಪ್ರಾಯೋಗಿಕ ಪರೀಕ್ಷೆ ಕೂಡ ಯಶಸ್ವಿಯಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗೆ 15500 ಎಚ್‌ಪಿ ಸಾಮರ್ಥ್ಯದ ಎರಡು ವಿದ್ಯುತ್‌ ಮೋಟರ್‌ ಜೋಡಿಸಲಾಗಿದೆ. ತಾಲೂಕಿನ ಕವಟಗಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಗೆ ಜೋಡಣೆ ಮಾಡಿರುವ 8 ಅಡಿ ಅಗಲದ ಪೈಪ್‌ಲೈನ್‌ ಮೂಲಕ ಜಮಖಂಡಿ ಮತಕ್ಷೇತ್ರದ 8 ಗ್ರಾಮದ 12 ಕೆರೆಗಳ ಮೂಲಕ 16 ಸಾವಿರ ಎಕರೆ ಜಮೀನಿಗೆ ನೀರಾವರಿ ಲಭಿಸಲಿದೆ.

ಅಥಣಿ ತಾಲೂಕು ಮತ್ತು ವಿಜಯಪುರದ 8 ಗ್ರಾಮಗಳ 22, 600 ಸಾವಿರ ಎಕರೆ ಜಮೀನುಗಳಿಗೆ ನೀರು ಲಭ್ಯವಾಗಲಿದೆ. 38670 ಎಕರೆ ಒಣಭೂಮಿಯಾಗಿದ್ದ 20 ಗ್ರಾಮಗಳ ಜಮೀನು ನೀರಾವರಿಯಾಗಿ ಪರಿವರ್ತನೆ ಆಗಲಿದೆ. ಉಪಕಾಲುವೆಗಳು ನಿರ್ಮಾಣಗೊಂಡಲ್ಲಿ ಸಂಪೂರ್ಣವಾಗಿ ಒಣಭೂಮಿ ಹಸಿರು ಭೂಮಿಯಾಗಿ ಪರಿವರ್ತನೆಯಾಗಲಿದೆ. ಜಮಖಂಡಿ ಮತಕ್ಷೇತ್ರದ 8 ಗ್ರಾಮಗಳ 12 ಕೆ‌ರೆಗಳಿಗೆ 8.50 ಕಿ.ಮೀ. ಉದ್ದದ ಪೂರ್ವ ಕಾಲುವೆ ಮೂಲಕ ನೀರು ಹರಿಯುತ್ತಿದೆ.

ಅಥಣಿ, ವಿಜಯಪುರ 8 ಗ್ರಾಮಗಳ ಜಮೀನುಗಳಿಗೆ 14 ಕಿ.ಮೀ. ಉದ್ದದ ಪಶ್ಚಿಮ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಕೃಷ್ಣಾ ಪ್ರಾಧಿಕಾರ ನಿರ್ದೇಶನದಂತೆ ಅಕ್ಟೋಬರ್‌ 15ರೊಳಗಾಗಿ ಆಲಮಟ್ಟಿ ಹಿನ್ನೀರು ಕಾಲುವೆ ಮೂಲಕ ಕೆ‌ರೆ, ಬಾಂದಾರ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಮಳೆಯಾಶ್ರಿತ 20 ಗ್ರಾಮಗಳಲ್ಲಿ ಅಂತರಜಲಮಟ್ಟ ಹೆಚ್ಚಾಗುವ ಮೂಲಕ ಹಸಿರು ವಾತಾವರಣ ನಿರ್ಮಾಣದೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ಮೂರು ತಾಲೂಕಿನ ರೈತರು ಈ ಭಾಗದಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ತೊಗರಿ, ಜೋಳ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು, ಕಾಲುವೆ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸ ತಂದಿದೆ. ಉಪಕಾಲುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಂದಾಜು 350 ಕೋಟಿ ಅನುದಾನ ನೀಡಡಬೇಕಾಗಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.