Udayavni Special

ಪರಿಹಾರಕ್ಕೆ ನಿಯಮಗಳೇ ತೊಡಕು

ಆಧಾರ್‌ ಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಇಲ್ಲದವರಿಗೆ ಪ್ಯಾಕೇಜ್‌ ಸಿಗದ ಭೀತಿ | ಅರ್ಜಿ ಸಲ್ಲಿಕೆಗೆ ನಾಳೆ ಕೊನೆ ದಿನ

Team Udayavani, Jun 4, 2021, 7:18 PM IST

3gld4

ವರದಿ: ಮಲ್ಲಿಕಾರ್ಜುನ ಕಲಕೇರಿ

ಗುಳೇದಗುಡ್ಡ: ಕೊರೊನಾದಿಂದ ಅತಂತ್ರರಾಗಿರುವ ಕಲಾವಿದರಿಗೆ ಆಸರೆಯಾಗಲೆಂದು ಸರಕಾರ 3 ಸಾವಿರ ರೂ. ಸಹಾಯಧನ ನೀಡಲು ಮುಂದಾಗಿದೆಯೇನೋ ನಿಜ ಆದರೆ ಸರಕಾರದ ನಿಯಮಗಳೇ ತೊಡಕಾಗಿದ್ದು, ಸರಕಾರದ ಪ್ಯಾಕೇಜ್‌ ಸಿಗುವುದೇ ಕಷ್ಟವಾಗಿದೆ.

ಸಹಾಯಧನ ಪಡೆಯಲು ಕಡ್ಡಾಯವಾಗಿ ಆಧಾರ್‌ಗೆ ಮೊಬೈಲ್‌ ಜೋಡಣೆಯಾಗಿರಬೇಕು. ಜಿಲ್ಲೆಯಲ್ಲಿ ಅದೆಷ್ಟೋ ಕಲಾವಿದರ ಆಧಾರ್‌ ಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿಲ್ಲ. ಇದರಿಂದ ಕಲಾವಿದರಿಗೆ ಸರಕಾರದ ಸಹಾಯಧನ ಕೈತಪ್ಪುವ ಸಾಧ್ಯತೆಗಳು ದಟ್ಟವಾಗಿದೆ. ಸರಕಾರ ಕಲಾವಿದರ ಮಾಸಾಶನ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಿದೆ. ಆದರೆ ಈ ಅರ್ಜಿ ಸಲ್ಲಿಸುವಾಗ ಆಧಾರ್‌ಗೆ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆ ಓಟಿಪಿ ಹೋಗುತ್ತದೆ. ಆ ನಂತರವೇ ಅರ್ಜಿ ಸ್ವೀಕೃತವಾಗುತ್ತದೆ. ಅನೇಕ ಕಲಾವಿದರ ಮೊಬೈಲ್‌ ಸಂಖ್ಯೆ ಆಧಾರ್‌ಗೆ ಲಿಂಕ್‌ ಇಲ್ಲದೇ ಇರುವುದರಿಂದ ನಾಟಕ ಪ್ರದರ್ಶನಗಳು ಇಲ್ಲದೇ ಕೈ ಕೂಡ ಬರಿದಾಗಿದ್ದು, ಸರಕಾರದ ಈ ನಿಯಮ ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಕಲಾಗ್ರಾಮ ಹಂಸನೂರ: ಹಂಸನೂರು ಗ್ರಾಮ ಕಲಾವಿದರಿಗೆ ಹೆಸರಾದ ಗ್ರಾಮ. ವೃತ್ತಿ-ಹವ್ಯಾಸಿ ರಂಗಭೂಮಿ ಕಲಾವಿದರು ಇಲ್ಲಿದ್ದು, ರಂಗಭೂಮಿ ಕಲೆಯನ್ನೆ ಬದುಕಾಗಿಸಿಕೊಂಡ ಅನೇಕ ಕುಟುಂಬಗಳಿವೆ. ಈ ಎಲ್ಲ ಕುಟುಂಬಗಳು ಲಾಕ್‌ ಡೌನ್‌ನಿಂದ ನಲುಗಿ ಹೋಗಿವೆ. ಇಲ್ಲಿರುವ ಅನೇಕ ಕಲಾವಿದರ ಆಧಾರ್‌ಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಇಲ್ಲ. ಮೊಬೈಲ್‌ ಸಂಖ್ಯೆ ಆಧಾರ್‌ ಕಾರ್ಡ್ ಜೋಡಿಸಬೇಕಿದೆ. ಆದರೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಜೂನ್‌ 5 ಕೊನೆಯ ದಿನವಾಗಿದ್ದರಿಂದ ಕಲಾವಿದರು ಸರ್ಕಾರ ಯೋಜನೆ ಲಾಭ ಪಡೆಯಲು ಕಷ್ಟಸಾಧ್ಯವಾಗಿದೆ. ಆಧಾರ್‌ಗೆ ಮೊಬೈಲ್‌ ಸಂಖ್ಯೆ ಇಲ್ಲದೇ ಇರುವುದರಿಂದ ಸರಕಾರದ ಸಹಾಯಧನ ಪಡೆಯಲು ಕಲಾವಿದರು ವಂಚಿತರಾಗಿದ್ದು, ಗ್ರಾಮಕ್ಕೆ ಅಧಿ ಕಾರಿಗಳು ಬಂದು ಕಲಾವಿದರ ಮಾಹಿತಿ ಪಡೆದು ಆರ್ಥಿಕ ಸಹಾಯ ನೀಡಬೇಕು. ಕಲಾವಿದರಿಗೆ ಸರಕಾರ ನೀಡುವ ಕೇವಲ 3 ಸಾವಿರ ರೂಪಾಯಿ ಸಾಲಲ್ಲ. ಅದನ್ನು ಹೆಚ್ಚಿಸಬೇಕು.

ಕಾರ್ಮಿಕರಿಗೆ ನೀಡಿರುವಂತೆ ಕಲಾವಿದರಿಗೆ ಕಲಾವಿದರ ಗುರುತಿನ ಚೀಟಿ ನೀಡಬೇಕೆಂದು ಕಲಾವಿದರಾದ ಗೀತಾ ಚಿಂತಾಕಲ್ಲ, ಮಂಜುಳಾ ಚಿಂತಾಕಲ್ಲ, ಇಂದಿರಾ ಚಿಮ್ಮಲ, ನಾಗರತ್ನ ಜಮಖಂಡಿ, ರೇಖಾ ಕಮಲ, ಜಯಶ್ರೀ ಪೂಜಾರ, ಶಾರದಾ ಕಮಲ, ಶಾಮಲಾ ಜಮಖಂಡಿ, ಪ್ರಿಯಾ ಚಿಮ್ಮಲ, ರೇಣುಕಾ ಚಿಮ್ಮಲ, ಶೋಭಾ ಚಿಮ್ಮಲ, ಸೀತಾ ಚಿಮ್ಮಲ, ಶೃತಿ ಜಮಖಂಡಿ, ಮಧುರಾ ಚಿಮ್ಮಲ, ಆರತಿ ಚಿಮ್ಮಲ, ಶಾಂತವ್ವ ಜಮಖಂಡಿ, ಭಾರತಿ ಚಿಮ್ಮಲ, ಬಂಗಾರೆವ್ವ ಚಿಮ್ಮಲ್‌, ಶಾಂತವ್ವ ಚಿಮ್ಮಲ, ಪರಶುರಾಮ ಹುದ್ದಾರ, ಮನೋಹರ ಚಿಮ್ಮಲ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಅಲ್ಪಸಂಖ್ಯಾತರ ಆಯೋಗದ ವರದಿ ಸದನದಲ್ಲಿ ಮಂಡಿಸಿದ ವಿವರ ಕೇಳಿದ ಹೈಕೋರ್ಟ್‌

08

ಕೋವಿಡ್: 8111 ಸೋಂಕಿತರು ಗುಣಮುಖ, 3709 ಹೊಸ ಪ್ರಕರಣ ಪತ್ತೆ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

06

ಪ್ರಾಣಿ ಕಲ್ಯಾಣ ಸಹಾಯವಾಣಿ ನಾಳೆ(ಜೂನ್ 23) ಲೋಕಾರ್ಪಣೆ : ಸಚಿವ ಪ್ರಭು ಚವ್ಹಾಣ್

ಜಾರಕಿಹೊಲಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾ

ಜಾರಕಿಹೊಳಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-mlp-4

ಪ್ರವಾಹ ಇಳಿಮುಖ: ಸಂಚಾರಕ್ಕೆ ಢವಳೇಶ್ವರ ಸೇತುವೆ ಮುಕ್ತ

1340000218amd-1c

ಕೃಷಿಯಲ್ಲಿ ಖುಷಿ ಕಂಡ ವೈದ್ಯ

21bgk-8b

ದೈಹಿಕ-ಮಾನಸಿಕ ಆರೋಗ್ಯಕ್ಕೆ ಯೋಗ ಅಗತ್ಯ

20-jkd-1

ಪ್ರವಾಹ ಭೀತಿಯಲ್ಲಿ ನದಿ ತೀರದ ಗ್ರಾಮಸ್ಥರು

20hnd1

ಇಂದಿನಿಂದ ಬಸ್‌ ಸಂಚಾರ ಆರಂಭ

MUST WATCH

udayavani youtube

ಅಬ್ಬಾ Unlock ಆಯ್ತು | ಈಗ ಹೇಗಿದೆ ಬದುಕು ?

udayavani youtube

Chiffon ಸೀರೆಗಳು | ಮೊದಲು ತಿಳಿಯಿರಿ ನಂತ್ರ ಖರೀದಿಸಿ

udayavani youtube

ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್‌

udayavani youtube

ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತ

udayavani youtube

ಅಕ್ರಮ ಗೋಸಾಗಾಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಸಾಥ್..!

ಹೊಸ ಸೇರ್ಪಡೆ

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

yoga day

ಯೋಗದಿಂದ ರೋಗಗಳು ನಿವಾರಣೆ: ಸಂಸದ

hasana news

ಮೆಗಾಡೇರಿ ನಿರ್ಮಾಣ ಕಾಮಗಾರಿಗೆ ಚಾಲನೆ

covid vaccination

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

drone-experiment-successful

ಡ್ರೋಣ್‌ ಪ್ರಯೋಗ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.