ಶತಮಾನದ ಬಾವಿಯೇ ಕಸದ ಗುಂಡಿ

•ಜಲಮೂಲ ನಿರ್ಲಕ್ಷಿಸಿದ ಪುರಸಭೆ•ಬಾವಿ ಸುತ್ತ ಕಟ್ಟಿದ್ದ ತಡೆಗೋಡೆ ನೆಲಸಮ

Team Udayavani, May 8, 2019, 11:28 AM IST

bagalkote-tdy-3..

ಹುನಗುಂದ: ಎಲ್ಲೆಡೆ ಬೇಸಿಗೆ ತೀವ್ರಗೊಂಡಿದ್ದು, ಜಲಮೂಲ ಹುಡುಕುವ ಪರಿಸ್ಥಿತಿ ಇದೆ. ಜಿಲ್ಲೆಯ ಕೆರೂರ, ರಬಕವಿ-ಬನಹಟ್ಟಿ ಪಟ್ಟಣಗಳಲ್ಲಿ ಐತಿಹಾಸಿಕ ಬಾವಿಗಳನ್ನು ಸ್ವಚ್ಛಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ, ಹುನಗುಂದ ಪುರಸಭೆ, ಶತಮಾನ ಕಂಡ ಐತಿಹಾಸಿಕ ಬಾವಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಅದು ಕಸ ಎಸೆಯುವ ಗುಂಡಿಯಾಗಿ ಪರಿಣಮಿಸಿದೆ.

ಹೌದು, ಪಟ್ಟಣದ ಬಸ್‌ ನಿಲ್ದಾಣ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆಯ ಜಾಗೆಯಲ್ಲಿ ಬ್ರಿಟಿಷ್‌ ಕಾಲದಲ್ಲಿ ನಿರ್ಮಾಣವಾಗಿರುವ ಬಾವಿಯಿದು. ಸುಮಾರು 20 ಅಡಿಗಳಷ್ಟು ಸುಂದರ ಕಲ್ಲಿನ ಗೋಡೆಯಿಂದ ನಿರ್ಮಿಸಲಾಗಿರುವ ಈ ಬಾವಿ 10 ಅಡಿ ಆಳವಾಗಿದೆ. ಸಿಹಿ ನೀರಿನ ಸೆಲೆಯಳ್ಳ ಬಾವಿಗೆ ಎಂಟು ಗಡಿ ಬಾವಿ ಎಂದೇ ಪ್ರಸಿದ್ಧಿ ಪಡೆದಿತ್ತು. ಇಂದು ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ಕಸದ ಗೂಡಾಗಿದೆ.

ಈ ಬಾವಿಯಲ್ಲಿ ಪಟ್ಟಣದ ತ್ಯಾಜ್ಯವೆಲ್ಲ ಗಾಳಿಗೆ ಹಾರಿ ಬಂದು ಬಿದ್ದರೆ, ಜನರೂ ಇದೇ ಬಾವಿಗೆ ಕಸ ಎಸೆಯುವುದು ರೂಢಿಸಿಕೊಂಡಿದ್ದಾರೆ. ಬಾವಿಯ ಸ್ವಚ್ಛ ನಿರ್ಮಲವಾದ ಕುಡಿಯುವ ನೀರು, ಇಂದು ಕಲ್ಮಶ ನೀರಿನಿಂದ ತುಂಬಿದೆ.

ಬಾವಿಯ ಪಕ್ಕದಲ್ಲಿಯೇ ತರಕಾರಿ ಮಾರುಕಟ್ಟೆ ಇದೆ. ಇಡೀ ಮಾರುಕಟ್ಟೆಯ ತ್ಯಾಜ್ಯ ಈ ಬಾವಿ ಸೇರುತ್ತಿದೆ. ಪ್ಲಾಸ್ಟಿಕ್‌ ಹಾಳೆಯ ಗಂಟು ಮತ್ತು ಪ್ಲಾಸ್ಟಿಕ್‌ ಬಾಟಲ್, ತೆಂಗಿನ ಕಾಯಿ, ಚಪ್ಪಲಿ, ಮದ್ಯದ ಬಾಟಲಿ, ಸತ್ತ ನಾಯಿ, ಬೆಕ್ಕುಗಳನ್ನು ಎಸೆಯುತ್ತಿದ್ದಾರೆ. ಅದು ಅಲ್ಲದೆ ಗಣೇಶ ಹಬ್ಬದಲ್ಲಿ ಇಡೀ ನಗರದ ಗಣೇಶ ಮೂರ್ತಿಗಳನ್ನು ಇದೇ ಬಾವಿಯಲ್ಲಿ ವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ನೀರು ಮಾಲಿನ್ಯಗೊಂಡು ಗಬ್ಬು ನಾರುತ್ತಿದೆ.

ಬಲಿಗಾಗಿ ಕಾಯುತ್ತಿರುವ ಬಾವಿ: ಬಾವಿ ಸುತ್ತ ಕಟ್ಟಿದ್ದ ತಡೆಗೋಡೆ ನೆಲಸಮವಾಗಿದೆ. ಇದು ಮುಖ್ಯವಾಗಿ ಬಜಾರ್‌ ಸ್ಥಳದಲ್ಲಿದ್ದು, ಚಿಕ್ಕಮಕ್ಕಳು ಆಡುತ್ತಾ ಬಂದು ಬಾವಿಗೆ ಬಿದ್ದರೇ ಆಶ್ಚರ್ಯಪಡುವಂತಿಲ್ಲ. ಇನ್ನು ರಾತ್ರಿಯಾದರೆ ಸಾಕು ಇಲ್ಲಿ ವಿದ್ಯುತ್‌ ಸೌಲಭ್ಯವಿಲ್ಲ. ಕತ್ತಲಿನಲ್ಲಿ ಗುರುತು ಪರಿಚಯವಿಲ್ಲದವರು ಬಂದರೆ ಬಾವಿ ಬಲಿಗೆ ಆಹುತಿಯಾಗುವುದು ಗ್ಯಾರಂಟಿ.

ಬಾವಿಯ ಜೀರ್ಣೋದ್ದಾರ ಅವಶ್ಯ: ಇಂತಹ ಶತಮಾನದ ಹಳೆಯ ಬಾವಿಯನ್ನು ಪುರಸಭೆಯ ಅಧಿಕಾರಿಗಳು ಮುತುರ್ವಜಿ ವಹಿಸಿಕೊಂಡು ಜೀರ್ಣೋದ್ಧಾರ ಮಾಡಬೇಕಾಗಿರುವುದು ಅವಶ್ಯವಾಗಿದೆ. ಅದನ್ನು ಬಿಟ್ಟು ಪುರಸಭೆ ಕೆಲವು ಅಧಿಕಾರಿಗಳು ಅದನ್ನು ಮುಚ್ಚಿ ಹಾಕುವ ಪ್ಲಾನ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಬರಗಾಲದಲ್ಲಿ ನೀರಿನ ಮೂಲಗಳನ್ನು ಹುಡುಕುವುದ್ದಕ್ಕಾಗಿ ಹತ್ತಾರು ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರಿಸಿ ನೀರು ಬಿಳದೇ ಹತಾಶೆ ಸ್ಥಿತಿಗೆ ಬರುವ ಅಧಿಕಾರಿಗಳು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರು ತುಂಬ ಹುಡುಕಿದಂತೆ. ನೀರಿನ ಮೂಲ ಹುಡುಕುವ ಬದಲು ಸಾಕಷ್ಟು ನೀರಿನ ಸೆಲೆ ಹೊಂದಿದ ಹಳೆಯ ಬಾವಿ ಜೀರ್ಣೋದ್ಧಾರಕ್ಕೆ ಮುಂದಾಗಬೇಕಾಗಿದೆ ಎನ್ನುತ್ತಿದ್ದಾರೆ ಪಟ್ಟಣದ ಪ್ರಜ್ಞಾವಂತರು.

•ಮಲ್ಲಿಕಾರ್ಜುನ ಬಂಡರಗಲ್ಲ

ಟಾಪ್ ನ್ಯೂಸ್

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

1-aasasas

Rabkavi Banhatti; ಕೃಷ್ಣಾ ನದಿಯಲ್ಲಿ ಮುಳುಗಿ ಮೀನುಗಾರ ಸಾವು

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.