Udayavni Special

ಹಳ್ಳಿಗರ ಬದುಕೇ ಬುಡಮೇಲು

•ಇರಲು ಮನೆ ಇಲ್ಲ- ಕೈ ಮುಗಿಯಲು ದೇವಸ್ಥಾನವೂ ಉಳಿದಿಲ್ಲ •ಬಿದ್ದ ಮನೆಗಳೆದುರು ಬರೀ ಕಣ್ಣೀರು

Team Udayavani, Aug 18, 2019, 12:28 PM IST

bk-tdy-1

ಬಾಗಲಕೋಟೆ: ಜಲಾವೃತಗೊಂಡಿದ್ದ ಜಮಖಂಡಿ ತಾಲೂಕು ಕಂಕಣವಾಡಿಯಲ್ಲಿ ರೈತನ ಬಂಡಿಗಳು ಅನಾಥವಾಗಿ ನೀರಲ್ಲೇ ನಿಂತಿವೆ.

ಬಾಗಲಕೋಟೆ: ಊರು ಬಿದ್ರು, ಊರಾನ್‌ ದೇವರು ಉಳಿತಾನ್‌ ಎಂಬ ಗಾದೆ ಮಾತು ಹಳ್ಳಗರಲ್ಲಿದೆ. ಆದರೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರು, ನಮ್ಮನ್ನು ಕಾಪಾಡು ಎಂದು ಕೈ ಮುಗಿದು ಕೇಳಲು ದೇವಸ್ಥಾನಗಳೂ ಉಳಿದಿಲ್ಲ.

ಹೌದು, ಇದು ಹಳ್ಳಿಗರ ಬದುಕು ಬುಡಮೇಲು ಮಾಡಿದ ಪ್ರವಾಹ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಬಾಗಲಕೋಟೆ ಜಿಲ್ಲೆಗೆ, ಪ್ರವಾಹ ಈ ಬಾರಿ ಹೊಸದಾಗೇನು ಬಂದಿಲ್ಲ. 2007, 2009ರಲ್ಲಿ ಪ್ರವಾಹ ಕಂಡಿದ್ದಾರೆ. ಆಗ ಪ್ರವಾಹಕ್ಕೆ ಸಿಲುಕಿದವರೇ ಈಗ ಮತ್ತೆ ಪ್ರವಾಹಕ್ಕೊಳಗಾಗಿದ್ದಾರೆ. ಆದರೆ, ಅಂದಿನ ಪ್ರವಾಹಕ್ಕೂ, ಇಂದಿನ ಭೀಕರತೆಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಸ್ವತಃ ನಿರಾಶ್ರಿತರು.

ಕೈ ಮುಗಿಯಲು ದೇವರೂ ಉಳಿದಿಲ್ಲ: ಮನುಷ್ಯ ತನಗೆ ಯಾವುದೇ ಕಷ್ಟ ಬಂದರೂ ಉಪವಾಸ ವೃತ ಮಾಡಿ, ದೇವರಿಗೆ ಕೈ ಮುಗಿದು ಭಕ್ತಿಯಿಂದ ಕೇಳಿಕೊಳ್ಳುವುದು ನಮ್ಮ ಸಂಪ್ರದಾಯ. ಆದರೆ, ಪ್ರವಾಹಕ್ಕೆ ತುತ್ತಾದ ನೂರಾರು ಹಳ್ಳಿಗಳಲ್ಲಿ ದೇವಸ್ಥಾನಗಳೂ ಉಳಿದಿಲ್ಲ. ಮನೆ, ಮಠ, ದೇವಸ್ಥಾನ, ಬೆಳೆ, ಮನೆಯಲ್ಲಿನ ಕಾಳು-ಕಡಿ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ದೇವರ ಎದುರು ನಿಂತು ಕೈ ಮುಗಿದು ಸಂಕಷ್ಟ ಹೇಳಿ, ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡು ದೇವರೇ ಎಂದು ಕೇಳಲು, ದೇವಸ್ಥಾನ ಬಿದ್ದಿವೆ, ಅಲ್ಲಿನ ದೇವರೂ ಪಕ್ಕಕ್ಕೆ ಸರಿದು ಕುಳಿತಿದ್ದಾನೆ. ಹೀಗಾಗಿ ನಿರಾಶ್ರಿತರು ಯಾರ ಮೊರೆ ಹೋಗೋಣ ಎಂಬಂತೆ ತಲೆಯ ಮೇಲೆ ಕೈಹೊತ್ತು, ಬಿದ್ದ ಮನೆಯ ಎದುರು ಕಣ್ಣೀರುರಿಡುತ್ತಿದ್ದಾರೆ.

ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಮೂರೇ ದಿನ ಹರಿದರೂ, 113 ಹಳ್ಳಿಗರ ಬದುಕು ಛಿದ್ರಗೊಳಿಸಿವೆ. ಇನ್ನು ಕೃಷ್ಣಾ ನದಿಯಂತೂ ಹದಿನೈದು ದಿನಗಳಿಂದ ತನ್ನ ವ್ಯಾಪ್ತಿ ಮೀರಿ ಹರಿಯುತ್ತಿದೆ. ಈ ನದಿಯ ನೀರು 81 ಹಳ್ಳಿಗಳಿಗೆ ನುಗ್ಗಿ, ಅಲ್ಲಿನ ಜನರ ಬದುಕು ಮೂರಾಬಟ್ಟೆ ಮಾಡಿದೆ.

ಹಳ್ಳಿಗರ ಬದುಕು ಅಯೋಮಯ: ಮೂರು ನದಿಗಳ ಪ್ರವಾಹಕ್ಕೆ ಜಿಲ್ಲೆಯ 9 ತಾಲೂಕಿನ 194 ಹಳ್ಳಿಗಳ ಬದುಕು ಮೂರಾಬಟ್ಟೆಯಾಗಿದೆ. ಪ್ರವಾಹಕ್ಕೆ ತುತ್ತಾದ ಯಾವ ಗ್ರಾಮಕ್ಕೆ ಕಾಲಿಟ್ಟರೂ ಶ್ರಾವಣ ಸಂಭ್ರಮವಿಲ್ಲ. ಎಲ್ಲರಲ್ಲೂ ಈ ವರ್ಷ ಶ್ರಾವಣ ನಮಗ್‌ ಒಳ್ಳೆಯದ್‌ ಮಾಡ್ಲಿಲ್ರಿ ಎನ್ನುತ್ತಲೇ ಮಾತು ಆರಂಭಿಸುತ್ತಿದ್ದಾರೆ.

ಒಟ್ಟಾರೆ, ಜಿಲ್ಲೆಯ ಗ್ರಾಮೀಣರ ಬದುಕು ಪ್ರವಾಹಕ್ಕೆ ನಲುಗಿ ಹೋಗಿದೆ. ಅವರೆಲ್ಲ ಸಧ್ಯ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಅವರು ಪುನಃ ತಮ್ಮೂರಿನ ಮನೆಗೆ ಹೋಗಿ ನೆಲೆಸಲು ಹಲವು ದಿನಗಳೇ ಬೇಕು. ಅದರಲ್ಲೂ ಬಿದ್ದ ಮನೆಗಳ ದುರಸ್ತಿ, ಪುನರ್‌ ನಿರ್ಮಾಣ ಎಂದು ಬದುಕು ಕಟ್ಟಿಕೊಳ್ಳಬೇಕು. ಅದಕ್ಕೆಲ್ಲ ಸರ್ಕಾರ ಕೊಡುವ ಪರಿಹಾರ ಸಾಲುತ್ತಾ ಎಂಬುದು ಅವರ ಪ್ರಶ್ನೆ.

•ಶ್ರೀಶೈಲ ಕೆ. ಬಿರಾದಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid-positive-13

ಬೀದರ್‌: ಪಿಎಸ್‌ಐ ಸೇರಿ 28 ಮಂದಿಗೆ ಕೋವಿಡ್‌-19 ಸೋಂಕು

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

ನಿಲ್ಲದ ಕೋವಿಡ್ ಓಟ: ಉಡುಪಿ ಜಿಲ್ಲೆಯಲ್ಲಿಂದು 16 ಮಂದಿಗೆ ಸೋಂಕು ದೃಢ

ನಿಲ್ಲದ ಕೋವಿಡ್ ಓಟ: ಉಡುಪಿ ಜಿಲ್ಲೆಯಲ್ಲಿಂದು 16 ಮಂದಿಗೆ ಸೋಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕ ಗಣೇಶೋತ್ಸವ ರದ್ದು

ಸಾರ್ವಜನಿಕ ಗಣೇಶೋತ್ಸವ ರದ್ದು

ಆಯುರ್ವೇದ ಆಸ್ಪತ್ರೆ ನರ್ಸ್‌ಗೆ ಸೋಂಕು

ಆಯುರ್ವೇದ ಆಸ್ಪತ್ರೆ ನರ್ಸ್‌ಗೆ ಸೋಂಕು

ಮುಧೋಳ: 30 ಸ್ಥಳದಲ್ಲಿ ಕಾರ್ಯಕ್ರಮ ಯಶಸ್ವಿ

ಮುಧೋಳ: 30 ಸ್ಥಳದಲ್ಲಿ ಕಾರ್ಯಕ್ರಮ ಯಶಸ್ವಿ

ಕೆಪಿಸಿಸಿ ಪದಗ್ರಹಣ; ಉತ್ತಮ ಸ್ಪಂದನೆ

ಕೆಪಿಸಿಸಿ ಪದಗ್ರಹಣ; ಉತ್ತಮ ಸ್ಪಂದನೆ

ಆಯುಷ್ಮಾನ್‌ ಕಾರ್ಡ್‌ನಿಂದ ಉಚಿತ ಕೋವಿಡ್‌ ಚಿಕಿತ್ಸೆ

ಆಯುಷ್ಮಾನ್‌ ಕಾರ್ಡ್‌ನಿಂದ ಉಚಿತ ಕೋವಿಡ್‌ ಚಿಕಿತ್ಸೆ

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

ಹೊಸ ಸೇರ್ಪಡೆ

covid-positive-13

ಬೀದರ್‌: ಪಿಎಸ್‌ಐ ಸೇರಿ 28 ಮಂದಿಗೆ ಕೋವಿಡ್‌-19 ಸೋಂಕು

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಏರ್‌ಮ್ಯಾನ್‌ ಆತ್ಮಹತ್ಯೆ

ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಏರ್‌ಮ್ಯಾನ್‌ ಆತ್ಮಹತ್ಯೆ

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.