‘12 ದಿನಗಳು ಜೀವನದಲ್ಲಿ ಮೆರೆಯಲಾರದ ದಿನಗಳು’: ಉಕ್ರೇನ್ ನಿಂದ ಬಂದ ವಿದ್ಯಾರ್ಥಿ

Team Udayavani, Mar 10, 2022, 6:53 PM IST

‘12 ದಿನಗಳು ಜೀವನದಲ್ಲಿ ಮೆರೆಯಲಾರದ ದಿನಗಳು’: ಉಕ್ರೇನ್ ನಿಂದ ಬಂದ ವಿದ್ಯಾರ್ಥಿ

ರಬಕವಿ ಬನಹಟ್ಟಿ:  ಓಝೇಗ್ವಾ ರೈಲು ನಿಲ್ದಾಣದಿಂದ ಪಿಸೊಚ್ಚಿನ್ ನಗರವನ್ನು ಕಾಲ ನಡಿಗೆಯ ಮೂಲಕ ಹೋಗುವ ಸಂದರ್ಭದಲ್ಲಿ ಕೇವಲ 20 ಮೀಟರ್ ದೂರದಲ್ಲಿ ಬಾಂಬ್ ಸ್ಪೋಟಗೊಂಡಿತು. ಏಳು ಕಿ.ಮೀ ದೂರವನ್ನು ತಲುಪುವ ಸಂದರ್ಭದಲ್ಲಿ ಉಕ್ರೇನ್‌ದ ಮೂರು ಮಿಲಿಟರಿ ಬೇಸ್ ಕ್ಯಾಂಪ್‌ಗಳಿದ್ದವು. ಅಲ್ಲಿದ್ದ ಉಕ್ರೇನ್ ಸೈನಿಕರು ಭಾರತೀಯ ತ್ರಿವರ್ಣ ಧ್ವಜವನ್ನು ನೋಡಿ ನಮಗೆ ಆದಷ್ಟು ಬೇಗನೆ ಇಲ್ಲಿಂದ ಹೋಗಿ ಎಂದು ನಮಗೆ ಸಹಕರಿಸಿದರು ಎಂದು ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ಪತ್ರಿಕೆ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಉಕ್ರೇನ್‌ನಿಂದ ಬುಧವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಕಿರಣ ಸವದಿ ಅವರ ಮನೆಗೆ ಗುರುವಾರ ಪತ್ರಿಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಉಕ್ರೇನ್ ನಿಂದ ನಾವು ಉಳಿದುಕೊಂಡು ಬಂದಿರುವುದೇ ನಿಜಕ್ಕೂ ಅದ್ಭುತವಾದುದು. ಈ ಯುದ್ಧದ 12 ದಿನಗಳನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಯುದ್ಧವನ್ನು ಅತ್ಯಂತ ಹತ್ತಿರದಿಂದ ಅನುಭವಿಸಿದ್ದೇವೆ. 6 ದಿನಗಳ ಕಾಲ ಹಾಸ್ಟೆಲ್ ಬಂಕರ್ ನಲ್ಲಿ ಕಾಲ ಕಳೆದೆವು. ಅದೊಂದು ನರಕಯಾತನೆಯಾಗಿತ್ತು. ಓಲೆಸ್ಕವಿಸ್ಕಾದಿಂದ ರುಮೇನಿಯಾ ಗಡಿ ಪ್ರದೇಶ ತಲುಪುವವರಿಗೆ ಬಹಳಷ್ಟು ಕಷ್ಟ ಅನುಭವಿಸಿದೆವು. ಮೂರು ದಿನಗಳ ಕಾಲ ಊಟಕ್ಕೆ ಏನು ಆಹಾರ ದೊರೆಯಲಿಲ್ಲ. ಒಂದು ದಿನ ತರಾಕಾರಿ ಸೂಪ್ ನೀಡಿದರು. ರುಮೇನಿಯಾ ಗಡಿ ಪ್ರದೇಶಕ್ಕೆ ಬಂದ ನಂತರ ಅಲ್ಲಿರುವ ಭಾರತೀಯ ರಾಯಭಾರಿಗಳು ನಮಗೆ ಬಹಳಷ್ಟು ಸಹಾಯ ಮಾಡಿದರು. ಪಿಸೊಚ್ಚಿನ್ ನಗರದಿಂದ ರುಮೇನಿಯಾ ಗಡಿ ಪ್ರದೇಶ ತಲುಪಲು ೪೦ ಗಂಟೆಗಳ ಕಾಲ ಸುಧೀರ್ಘ ಬಸ್ನಲ್ಲಿ ಪ್ರವಾಸ ಮಾಡಿದೆವು. ರುಮೇನಿಯಾದಿಂದ ಬೆಂಗಳೂರು ತಲುಪುವವರೆಗೆ ಭಾರತ ಸರ್ಕಾರ ನಮಗೆ ಬಹಳಷ್ಟು ಸಹಕಾರ ನೀಡಿತು ಯಾವುದೆ ಖರ್ಚು ಇಲ್ಲದೆ ನಮ್ಮನ್ನು ಮನೆಗೆ ತಲುಪಿಸುವಲ್ಲಿ ಬಹಳಷ್ಟು ಸಹಕಾರ ನೀಡಿದ್ದಾರೆ ಎಂದು ಸವದಿ ತಿಳಿಸಿದರು.

ಕಿರಣ ಮನೆಗೆ ತಲುಪಿದ ನಂತರ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ತಂದೆ ಲಕ್ಷ್ಮಣ ತಾಯಿ ಮಹಾದೇವಿ ಹಾಗೂ ಸಂಬಂಧಿಕರೂ ಮಗನಿಗಿ ಸಿಹಿ ತಿನಿಸಿ ಸಂಭ್ರಮಿಸಿದರು.

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.