Udayavni Special

ಮುಳ್ಳುಕಂಟಿ ಆವರಿಸಿದ ಮಹಿಳಾ ಶೌಚಾಲಯ!

ಅವ್ಯವಸ್ಥೆ ಸರಿಪಡಿಸದ ಪಟ್ಟಣ ಪಂಚಾಯತ

Team Udayavani, Jul 19, 2020, 11:40 AM IST

ಮುಳ್ಳುಕಂಟಿ ಆವರಿಸಿದ ಮಹಿಳಾ ಶೌಚಾಲಯ!

ಬೀಳಗಿ: ಪಟ್ಟಣದ ವಾರ್ಡ್‌ ನಂ. 6ರ ಮಂಕಣಿಯವರ ಮನೆಯ ಹತ್ತಿರ ಇರುವ ಮಹಿಳೆಯರ ತಡೆಗೋಡೆಯ ಮರ್ಯಾದಾ ಬಯಲು ಶೌಚಾಲಯದ ದುಸ್ಥಿತಿಗೆ ಸ್ಥಳೀಯ ಮಹಿಳೆಯರು ಹಿಡಿಶಾಪ ಹಾಕುವಂತಾಗಿದೆ.

ಗೋಳು ದೇವರೇ ಬಲ್ಲ: ಈ ಮಹಿಳಾ ಶೌಚಾಲಯಕ್ಕೆ ಹೋಗುವ ದಾರಿಯಗುಂಟ ಮುಳ್ಳುಕಂಟಿಗಳೇ ಆವರಿಸಿವೆ. ಶೌಚಾಲಯಕ್ಕೆ ಹೋಗುವ ರಸ್ತೆ ಮತ್ತು ಶೌಚಾಲಯ ಆವರಣ ಕೆಸರು ಗದ್ದೆಯಿಂದ ಗಲೀಜಾಗಿದೆ. ಶೌಚಾಲಯದ ಪ್ರವೇಶ ದ್ವಾರದಲ್ಲಿಯೇ ಮುಳ್ಳುಕಂಟಿ ಗಿಡಗಳು ಮೆತ್ತಿಕೊಂಡಿರುವ ಪರಿಣಾಮ, ಶೌಚಾಲಯಕ್ಕೆ ತೆರಳಬೇಕಿದ್ದ ಮಹಿಳೆಯರಿಗೆ ಕಾಡಿನ ಗುಹೆಯನ್ನು ಪ್ರವೇಶಿಸಿದಂತಹ ಅನುಭವವಾಗುತ್ತಿದೆ. ವಯೋವೃದ್ಧರ ಸ್ಥಿತಿಯಂತು ದೇವರೇ ಬಲ್ಲ. ರಾತ್ರಿ ವೇಳೆ ಇಲ್ಲಿ ಬೆಳಕಿನ ಸಂಪರ್ಕವೂ ಇಲ್ಲ. ಪರಿಣಾಮ, ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕ್ಯಾರೆ ಎನ್ನದ ಅಧಿಕಾರಿಗಳು: ಸ್ಥಳೀಯ ನಾಗರಿಕರು ಹಲವು ಬಾರಿ ಮನವಿ ಮಾಡಿದರೂ ಕೂಡ ಪಪಂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ವರ್ಷಾನುಗಟ್ಟಲೆ ಶೌಚಾಲಯದ ದಾರಿ ಹಾಗೂ ದ್ವಾರದ ಬಳಿ ಮುಳ್ಳುಕಂಟಿಯ ಗಿಡಗಳು ಆವರಿಸಿದ್ದರೂ ಕೂಡ ಈ ಕಡೆಗೆ ತಿರುಗಿಯೂ ಕೂಡ ನೋಡದ ಪಪಂ ಅಧಿಕಾರಿಗಳ ಮನಸ್ಥಿತಿಗೆ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶೌಚಾಲಯ ದಾರಿಗೆ ಅಂಟಿಕೊಂಡಿರುವ ಮುಳ್ಳುಕಂಟಿ ತೆರವುಗೊಳಿಸಬೇಕು.. ಶೌಚಾಲಯಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಬೇಕು, ಇಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯ ಆವರಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ಪಪಂ ಗಮನಹರಿಸುತ್ತಿಲ್ಲ. ಶೌಚಾಲಯ ಅವ್ಯವಸ್ಥೆಯಿಂದಾಗಿ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಪಪಂ ಕ್ರಮ ಕೈಗೊಳ್ಳಬೇಕು. –ಗುರಪ್ಪ ಮೋದಿ, ಪಪಂ ಮಾಜಿ ಸದಸ್ಯರು

ಶೌಚಾಲಯ ಅವ್ಯವಸ್ಥೆ ಕುರಿತು ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಶೀಘ್ರ ಶೌಚಾಲಯ ಬಳಿಯಿರುವ ಮುಳ್ಳುಕಂಟಿ ತೆರವುಗೊಳಿಸಲು ಹಾಗೂ ಅಲ್ಲಿನ ಶುಚಿತ್ವದ ಕುರಿತು ಕ್ರಮ ಕೈಗೊಳ್ಳುವೆ –ಪಿ.ಬಿ.ಜಂಬಗಿ, ಕಿರಿಯ ಆರೋಗ್ಯ ನಿರೀಕ್ಷಕರು, ಪಪಂ

 

ರವೀಂದ್ರ ಕಣವಿ

ಟಾಪ್ ನ್ಯೂಸ್

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bagalakote news

42 ಟನ್‌ ಅಕ್ರಮ ಪಡಿತರ ಅಕ್ಕಿ ವಶ

Channamma VV

ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರಕಗ್ಕೆ ಭೂಮಿ ಕೊಡಿ

dvSVD

ತಂದೆ-ತಾಯಿ ಸುಸಂಸ್ಕೃತ ಸಮಾಜದ ನಿರ್ಮಾಪಕರು

fghfdghdtyh

ಐಪಿಎಲ್ ಬೆಟ್ಟಿಂಗ್‌ಗೆ ಸಾಲ : ಹಣ್ಣಿನ ವ್ಯಾಪಾರಿ ಆತ್ಮಹತ್ಯೆ

xfgdtre

ಖಾಸಗೀಕರಣದಿಂದ ಉದ್ಯೋಗ ಹಾನಿ: ಜಬ್ಟಾರ್‌

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.