ರಾಜಾ ಹಂಡೆ ಹನುಮಪ್ಪ ನಾಯಕನ ವೃತ್ತ ಅನಾವರಣ
Team Udayavani, Jan 18, 2022, 10:04 PM IST
ಬಾಗಲಕೋಟೆ: ಅರಸು ಮನೆತನದಲ್ಲಿ ರಾಜಾ ಹಂಡೆ ಹನುಮಪ್ಪ ನಾಯಕ ವಿಶಿಷ್ಟ ಪರಂಪರೆ ಹೊಂದಿದ್ದಾರೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಹೇಳಿದರು. ಕಿರಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜಾ ಹಂಡೆ ಹನುಮಪ್ಪ ನಾಯಕನ ವೃತ್ತ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ವಿ. ಪಾಟೀಲ, ರಾಜ್ಯದಲ್ಲಿ ಬಹು ಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಧರ್ಮದ 39 ಒಳಪಂಗಡಗಳಲ್ಲಿ ಹಂಡೆವಜೀರ ಸಮಾಜಒಂದಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ಸಂಘಟನೆ ಅಭಿವೃದ್ಧಿಗೆ ಪ್ರೋತ್ಸಾಹ, ಬೆಂಬಲ ಅವಶ್ಯವಾಗಿದೆ ಎಂದರು.
ಹಡಗಲಿ-ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ಯುವ ಘಟಕದ ರಾಜ್ಯಧ್ಯಕ್ಷ ಬಿ.ಎಸ್.ಪಾಟೀಲ ಮಾತನಾಡಿದರು. ತಾಲೂಕು ಅಧ್ಯಕ್ಷ ಎಂ.ಬಿ. ಪಾಟೀಲ, ಎಸ್. ಎನ್. ಪಾಟೀಲ, ಜಿಲ್ಲಾಧ್ಯಕ್ಷ ವಿ.ಕೆ. ಪಾಟೀಲ, ತಾಲೂಕು ಅಧ್ಯಕ್ಷ ಬಿ.ಎಸ್. ಪಾಟೀಲ, ಎಸ್. ಎಸ್. ಪಾಟೀಲ, ಬಿ.ಎ. ಶಿವಣಗಿ, ರೇಣುಕಾ ಹಂಡರಗಲ್ಲ, ಅಪ್ಪನಗೌಡ ಬೊದುರು, ಯಮನಪ್ಪಗೌಡ ಗೌಡರ, ಪ್ರಕಾಶ ಪಾಟೀಲ, ಮಹಾಂತೇಶ ಗೌಡರು, ಸಿದ್ದನಗೌಡ ಗೌಡರ, ಅವ್ವನಗೌಡ ಗ್ವಾತಗಿ ಉಪಸ್ಥಿತರಿದ್ದರು.