ಉಟ್ಟ ಬಟ್ಟೆಯಲ್ಲಿ ಹೊರಗ್‌ ಓಡಿ ಬಂದ್ವಿ

•ಬೆಳಕ ನೋಡುದ್ರೊಳಗ ಮನಿ ಸರ್ವನಾಶ ಆಗೈತಿ •ಶಾಲಿಯಿಂದ ಹಾಸ್ಟೇಲಕ್ಕ್ಕ- ಮುಂದ್‌ ಎಲ್ಲೀಗಿ ಕಳಿಸ್ತಾರೋ ಗೊತ್ತಿಲ್ಲ

Team Udayavani, Aug 23, 2019, 11:06 AM IST

bk-tdy-1

ಅಮೀನಗಡ: ರಾತ್ರಿ ಮಲಕೊಂಡಾಗ ಏಕಾಏಕಿ ನೀರ ಬಂತ್ರಿ. ಉಟ್ಟ ಬಟ್ಟೆಯಲ್ಲಿ ಎದ್ದು ಹೊರಗ ಬಂದಿವಿ. ಹೊರಗ ಬಂದ ಎತ್ತರದ ಪ್ರದೇಶಕ್ಕ ಹೋಗಿ ಕುಂತೇವ್ರಿ. ಬೆಳಕು ಹರಿಯುವುದು ನೋಡುದ್ರೋಳಗೆ ನಮ್ಮ ಮನಿ ಸರ್ವನಾಶ ಆಗೈತಿರೀ. ಇಡೀ ಊರ ನೀರಿನಲ್ಲಿ ಮುಳಗೈತಿ. ಇದ್ದ ಒಂದು ಮನಿ ಬಿದ್ದು ಹೋಗೈತಿ. ದಿಕ್ಕು ತೋಚತ್ತಿಲ್ಲ. ದಾನಿಗಳು ಕೊಟ್ಟ ಬಟ್ಟಿ ಬಿಟ್ರ ಬ್ಯಾರೇ ಅರವಿ ಇಲ್ಲ. ತಿನ್ನಾಕ್‌ ಕಾಳ-ಕಡಿ ಇಲ್ಲ. ಎಲ್ಲಿ ಹೋಗೂದು, ಹೆಂಗ್‌ ಇರೂದು, ಏನು ಮಾಡೂದು ತಿಳೇಂಗಿಲ್ಲಾಗೈತ್ರಿ.

ಮನ್ಯಾಗಿಂದು ಎಲ್ಲಾ ಸಾಮಾನು ಹಾಳಾಗೈತಿ. ನಮ್ಮ ಬದುಕ್‌ ಅತಂತ್ರ ಆಗೈತಿ. ನಾವು ದುಡಿದ ತಿನ್ನುವರು. ಇರಾಕ ನೆಲಿ ಬೇಕಲ್ಲ ಸರ್‌. ನೆಲಿ ಇದ್ದರ ಬದಕಾಕ್‌ ಧೈರ್ಯ ಇರುತ್ತ. ಮನಿನ್‌ ಇಲ್ಲ ಅಂದರ ಬದಕೂದು ಹೆಂಗ್‌. ಪರಿಸ್ಥಿತಿ ಬಹಳ ಕೆಟ್ಟಿದೆ. ಇಲ್ಲಿತನಾ ಶಾಲ್ಯಾಗ್‌ ಇದ್ದೇವು. ಈಗ ಅಲ್ಲಿಂದ ಹೊರಗ ಹಾಕ್ಯಾರ. ಹಾಸ್ಟೆಲ್ಕ ಬಂದೀವಿ. ಇಲ್ಲಿಂದ ಹೊರಗ ಹಾಕಿದ್ರ ಎಲ್ಲಿ ಹೋಗಬೇಕು. ಶೆಡ್ಡರ ಹಾಕ್ರಿ ಅಂದ್ರ ಹಾಕವಲ್ಲರು..

ಹುನಗುಂದ ತಾಲೂಕಿನ ಕೂಡಲಸಂಗಮದ ಬಸವರಾಜ ಬುದುರಿ ತಮ್ಮ ಮನೆ ಹಾಗೂ ಎಲ್ಲಾ ಸಾಮಗ್ರಿಗಳು ಕಳೆದುಕೊಂಡ ನೋವಿನಿಂದ ಹೇಳಿದ ಮಾತು.

ಮಲಪ್ರಭಾ ನದಿಯ ಪಕ್ಕದಲ್ಲಿ ಇರುವ ಕೂಡಲಸಂಗಮ ಗ್ರಾಮ, ಪ್ರವಾಹದಿಂದ ನೀರಿನಲ್ಲಿ ಮುಳುಗಿದೆ. ಎಲ್ಲವನ್ನು ಕಳೆದುಕೊಂಡ ಕೆಲವರು ಜೀವನ ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ.

ಕೂಡಲಸಂಗಮ ಸೇರಿದಂತೆ ಸುತ್ತಲಿನ ಕಜಗಲ್ಲ, ಹೂವನೂರ, ಇದ್ದಲಗಿ, ಕೆಂಗಲ್ಲ, ಗಂಜಿಹಾಳ ಸೇರಿದಂತೆ ವಿವಿಧ ಗ್ರಾಮದ ಅನೇಕ ರೈತರ, ನಿವಾಸಿಗಳ ಸ್ಥಿತಿ ಅತಂತ್ರವಾಗಿದೆ. ರತರ ಅಪಾರ ಪ್ರಮಾಣದ ಆಸ್ತಪಾಸ್ತಿ ನಷ್ಟವಾಗಿದೆ. ನೀರು ನುಗ್ಗಿದ ಮನೆಗಳಲ್ಲಿ ಈಗ ಕೇಸರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಮನೆಗಳು ನೆಲಕಚ್ಚಿವೆ. ಕೆಲವು ಬಿರುಕು ಬಿಟ್ಟಿವೆ. ಇದರಿಂದ ಜನರ ಬದುಕು ಬೀದಿಗೆ ಬಂದಿದೆ. ಬಿದ್ದ ಮನೆಗಳಲ್ಲಿ ಉಳಿದ ಸಾಮಾನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವರು ಬಿದ್ದ ಮನೆಗಳಲ್ಲಿ ಸಾಮಗ್ರಿ ಹುಡುಕುತ್ತಿದ್ದಾರೆ. ಎಲ್ಲವೂ ಮಣ್ಣಿನಡಿ ಹೂತು ಹೋಗಿವೆ. ಅವರ ಬದುಕು ನೋಡಿದರೆ ಎಂತವರಿಗೂ ಕಣ್ಣೀರು ಬರುತ್ತಿವೆ. ಮನೆಯಲ್ಲಿದ್ದ ಬೇಳೆ ಕಾಳುಗಳು ನೀರಿನಲ್ಲಿ ಮುಳಗಿ ನಾಶವಾಗಿವೆ. ನಾಲ್ಕೈದು ದಿನ ನೀರಿನಲ್ಲಿ ನಿಂತ ಮನೆಗಳು, ಈಗೋ- ಆಗೋ ಬೀಳುವ ಹಂತದಲ್ಲಿವೆ.

 

•ಎಚ್.ಎಚ್. ಬೇಪಾರಿ

ಟಾಪ್ ನ್ಯೂಸ್

1-dsads

ನನ್ನನ್ನ ಗೋಮಾತೆ ಕೈ ಬಿಡಲ್ಲ..!: ಸಚಿವ ಪ್ರಭು ಚೌಹಾಣ್

1-ddsdd

ಸಿಎಂ ಸಾವಂತ್ ಗೆ ಸರಳ ಬಹುಮತದ ವಿಶ್ವಾಸ ; ಪಾರ್ಸೇಕರ್ ಸವಾಲು

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

11-fd

ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಲಿ

ರೈತರು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಲಿ

ವಿದ್ಯಾರ್ಥಿಗಳಲ್ಲಿರಲಿ ಸವಾಲು ಎದುರಿಸುವ ದಿಟ್ಟ ಶಕ್ತಿ; ಶಾಸಕ ದೊಡ್ಡನಗೌಡ

ದೆದ್ಗರಗಗ್

ಸಂತ್ರಸ್ತರಿಗೆ ಹಕ್ಕು ಪತ್ರ ಕೊಡಲು ತ್ವರಿತ ಕ್ರಮ

ವದಸಬ್ಸಬ್ಸವದ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

ಸ್ಗ್ಸಗಸ್ಗದಸ

ಅನುಮತಿ ಇಲ್ಲದ್ದರಿಂದ ತೆರವು

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

1-dsads

ನನ್ನನ್ನ ಗೋಮಾತೆ ಕೈ ಬಿಡಲ್ಲ..!: ಸಚಿವ ಪ್ರಭು ಚೌಹಾಣ್

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

1-ddsdd

ಸಿಎಂ ಸಾವಂತ್ ಗೆ ಸರಳ ಬಹುಮತದ ವಿಶ್ವಾಸ ; ಪಾರ್ಸೇಕರ್ ಸವಾಲು

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.