ಕಪ್ಪುಚುಕ್ಕೆ ಇಲ್ಲದ ಗದ್ದಿಗೌಡರ ಗೆಲ್ಲಿಸಿ: ಅಶ್ವತ್ಥನಾರಾಯಣ

Team Udayavani, Apr 21, 2019, 1:31 PM IST

ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ 15 ವರ್ಷ ಉತ್ತದ ಸಂಸದರಾಗಿ ಕಾರ್ಯ ನಿರ್ವಹಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಬೇಕು ಎಂದು ಬೆಂಗಳೂರಿನ ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಮನವಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ನಿಶ್ಚಿತ. ಯಾವುದೇ ಭ್ರಷ್ಟಾಚಾರ ನಡೆಸದೇ ಹಾಗೂ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿಯನ್ನು ಜಿಲ್ಲೆಯ ಜನರು ಬೆಂಬಲಿಸುತ್ತಾರೆ ಎಂದರು.

300 ಸ್ಥಾನಗಳಲ್ಲಿ ಗೆಲುವು: ದೇಶದಲ್ಲಿ ಬಿಜೆಪಿ 300ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದೇಶದಲ್ಲಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರಗಳಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯದ ಮೈತ್ರಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕುಮಾರಸ್ವಾಮಿ ಕೇವಲ ಮೂರು ಜಿಲ್ಲೆಗೆ ಸಿಎಂ ಆಗಿದ್ದು, ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಕುಮಾರಸ್ವಾಮಿ, 10 ತಿಂಗಳಾದರೂ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಹಲವಾರು ನಿಯಮ ಹಾಕಿ, ರೈತರು ಸಾಲ ಮನ್ನಾದಡಿ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೇಂದ್ರದ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ 2 ಸಾವಿರ ಕೋಟಿ ನೀಡಲಾಗಿದೆ. ಈ ಹಣವನ್ನು ರಾಜ್ಯದ ಆರೋಗ್ಯ ಸಚಿವ ಶಿವಾನಂದ ಪಾಟೀಲರು ಬಳಸಿಲ್ಲ. ಹಿಂದೆ ಯುಪಿಎ ಸರ್ಕಾರ ರಾಜ್ಯಕ್ಕೆ 70 ಸಾವಿರ ಕೋಟಿ ಅನುದಾನ ನೀಡುತ್ತಿದ್ದರೆ ಈಗಿನ ಮೋದಿ ಸರ್ಕಾರ 2.30 ಲಕ್ಷ ಕೋಟಿ ನೀಡಿದೆ ಎಂದರು.

ಕಾಂಗ್ರೆಸ್‌ ಪಕ್ಷ ಸದ್ಯ್ಯ ರಾಷ್ಟ್ರೀಯ ಪಕ್ಷವಾಗಿ ಉಳಿಯದೇ ಪ್ರಾದೇಶಿಕ ಪಕ್ಷವಾಗಿದೆ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂದು ಸ್ಪರ್ಧೆ ಮಾಡುತ್ತಿದ್ದರೆ, ಕುಮಾರಸ್ವಾಮಿ ನಾನೇ ಸಿಎಂ ಎನ್ನುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಜಯಂತ ಕುರಂದವಾಡ, ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಉಪಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ, ಯುವ ಮುಖಂಡ ರಾಘವೇಂದ್ರ ನಾಗೂರ ಉಪಸ್ಥಿತರಿದ್ದರು.

ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ: ನಿರಾಣಿ
ಲೋಕಾಪುರ:
ದೇಶದ ಸದಾ ಚಿಂತನೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಹೇಳಿದರು.

ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ರೋಡ್‌ ಶೋ ಹಾಗೂ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರು ಶಾಸಕ ಅಶ್ವಥ ನಾರಾಯಣ ಮಾತನಾಡಿ, ಜಿಲ್ಲೆಯ ಮತದಾರರು ಪಿ.ಸಿ ಗದ್ದಿಗೌಡ ಅವರಿಗೆ ಬೆಂಬಲ ನೀಡಿ ಗೆಲ್ಲಿಸಿ ತರಬೇಕು. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದು ಹೇಳಿದರು.

ಈ ಮುನ್ನ ಪಿ.ಸಿ ಗದ್ದಿಗೌಡರ ಪರ ರೋಡ್‌ ಶೋ ಮೂಲಕ ಮತಯಾಚಿಸಲಾಯಿತು.ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಲ್ಲಪ್ಪ ಅಂಗಡಿ, ತಾಲೂಕಾ ಬಿಜೆಪಿ ಅಧ್ಯಕ್ಷ ಕೆ.ಆರ್‌. ಮಾಚಪ್ಪನವರ, ಬಿಜೆಪಿ ನಗರಘಟಕ ಅಧ್ಯಕ್ಷ ಗುರುರಾಜ ಕಟ್ಟಿ, ಜಿಲ್ಲಾ ಬಿಜೆಪಿ ಒಬಿಸಿ ಘಟಕ ಅಧ್ಯಕ್ಷ ನಾಗಪ್ಪ ಅಂಬಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಬಬಲಾದಿ, ಬಿಜೆಪಿ ಮುಖಂಡರಾದ ಕುಮಾರ ಹುಲಕುಂದ, ಬಿ.ಎಚ್. ಪಂಚಗಾಂವಿ, ಕಲ್ಲಪ್ಪ ಸಬರದ, ಶಿವನಗೌಡ ಪಾಟೀಲ,ಲೋಕಣ್ಣ ಕತ್ತಿ, ಡಿ.ಆರ್‌. ದಾಸರಡ್ಡಿ, ಎಂ.ಎಂ. ವಿರಕ್ತಮಠ, ಯಮನಪ್ಪ ಹೊರಟ್ಟಿ, ವಿ.ಎಂ. ತೆಗ್ಗಿ, ಪ್ರಕಾಶ ಚುಳಕಿ, ಬೀರಪ್ಪ ಮಾಯನ್ನವರ, ಪ್ರಕಾಶ ಚಿತ್ತರಗಿ ಇದ್ದರು.

ಭ್ರಷ್ಟಾಚಾರ ನಿರ್ಮೂಲನೆಗೆ ಬಿಜೆಪಿ ಬೆಂಬಲಿಸಿ

ಗುಳೇದಗುಡ್ಡ: ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ, ದೇಶದ ಗಡಿ ಕಾಯುವ ಸೈನಿಕರಿಗೆ ಧೈರ್ಯ ತುಂಬಲು, ಬಡತನ ಹೋಗಲಾಡಿಸಲು, ಉಗ್ರವಾದ, ಭಯೋತ್ಪಾದಕತೆ ಮಟ್ಟ ಹಾಕಲು ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

ಪಟ್ಟಣದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ನಾನು ಕಳೆದ ಮೂರು ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ ಅದರ ಬಗ್ಗೆ ಪ್ರಚಾರ ಮಾಡಿಲ್ಲ. ರಾಜಕಾರಣದಲ್ಲಿ ನಾನು ಕೀಳುಮಟ್ಟದ ರಾಜಕೀಯ ಮಾಡಿಲ್ಲ ಎಂದರು.

ಕಾಶಪ್ಪನವರ ಆರೋಪಲ್ಲಿ ಹುರುಳಿಲ್ಲ. ಅಭಿವೃದ್ಧಿ ಮಾಡದಿದ್ದರೇ ನಾನು ಮತ ಕೇಳಲು ಇಲ್ಲಿಗೆ ಬರುತ್ತಿರಲಿಲ್ಲ. ಕೇಂದ್ರದ ಎನ್‌ಡಿಎ ಸರ್ಕಾರ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ ಎಂದು ಹೇಳಿದರು.

ಪಟ್ಟಣದ ಗಚ್ಚಿನಕಟ್ಟಿಯಿಂದ ರೋಡ್‌ ಶೋ ಮೂಲಕ ಮತಯಾಚಿಸಿದರು. ಮಾಜಿ ಶಾಸಕರಾದ ಪಿ.ಎಚ್. ಪೂಜಾರ, ಎಂ.ಕೆ.ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ, ಮಹಾಂತೇಶ ಮಮದಾಪುರ, ಶಾಂತನಗೌಡ ಪಾಟೀಲ, ಭಾಗ್ಯಾ ಉದ್ನೂರ, ಸಾವಿತ್ರಿ ಜೋಗುರ, ಅಶೋಕ ಹೆಗಡೆ, ಎಂ.ಎಸ್‌.ಪಾಟೀಲ, ಸಂಪತ್ತ ರಾಠಿ, ಕಮಲಕಿಶೋರ ಮಾಲಪಾಣಿ, ದೀಪಕ ನೇಮದಿ, ಮುರುಗೇಶ ರಾಜನಾಳ, ಸಿದ್ದು ಅರಕಾಲಚಿಟ್ಟಿ, ಶ್ರೀಕಾಂತ ಮಲಜಿ, ಪಿರಜಾದೆ, ಸಂಗಪ್ಪ ಆಲೂರ, ಶ್ರೀಕಾಂತ ಭಾವಿ ಇದ್ದರು.

ಭ್ರಷ್ಟಾಚಾರಮುಕ್ತ ಆಡಳಿತ: ಮಾಳವಿಕಾ
ಶಿರೂರ:
ಕಳೆದ 5 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಬಿಜೆಪಿಯವರು ದೇಶದ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಚಿತ್ರನಟಿ ಮಾಳವಿಕಾ ಅವಿನಾಶ ಹೇಳಿದರು.

ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಆವರು, ಕಾಂಗ್ರೆಸ್‌ 50 ವರ್ಷ ಆಳಿದರೂ ಸಹ ಕುಟುಂಬದ ಅಭಿವೃದ್ಧಿಯಾಗಿದೆ ಹೊರತು ದೇಶದ ಅಭಿವೃದ್ಧಿಯಾಗಿಲ್ಲ. ಈ ಚುನಾವಣೆ ನಮ್ಮ ಭವಿಷ್ಯದ ಚುನಾವಣೆಯಾಗಿದೆ. ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡುವುದರೊಂದಿಗೆ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ಎಮ್ಮಿಮಠ, ರಾಧಾ ಆಕಳವಾಡಿ, ಭಾಗ್ಯಶ್ರಿ ಹಂಡಿ, ಗುರಮ್ಮ ಸಂಕೀನಮಠ, ನಂದಾ ಹೊಸಮಠ, ಜಿಪಂ ಸದಸ್ಯ ರಂಗನಗೌಡ ಗೌಡರ, ತಾಪಂ ಸದಸ್ಯ ಆರ್‌ ಎಸ್‌ ಅಂಗಡಿ, ಸಿ.ಎಂ ಪ್ಯಾಟಿಶೆಟ್ಟರ, ಸುರೇಶ ದೇಸಾಯಿ, ರಾಜಶೇಖರ ಮುದೇನೂರ, ಗುರು ಅನಗವಾಡಿ, ಸುರೇಶ ಕೊಣ್ಣೂರ ಇದ್ದರು.

 

ಬಿಜೆಪಿ ಕಾರ್ಯಕರ್ತರಿಂದ ಪ್ರಚಾರ

ಲೋಕಾಪುರ: ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಗ್ರಾಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ನಡೆಸಿದರು. ಬಿಜೆಪಿ ಯುವ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆ ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಗ್ರಾಪಂ ಉಪಾಧ್ಯಕ್ಷ ಮಾರುತಿ ರಂಗಣ್ಣವರ, ಸೈಯದ ಜೀರಗಾಳ, ಹುಲ್ಲಪ್ಪ ತಳವಾರ ಪಿ.ಆರ್‌. ಚುಳಕಿ, ಪ್ರಮೋದ ತೆಗ್ಗಿ, ಜಾಕೀರ ಅತ್ತಾರ, ನಬಿ ಹಾಜಿಬಾಯಿ, ಪರಶುರಾಮ ಹಂಚಾಟೆ, ಸುರೇಶ ಮಾಳಿ, ಬಾಳಾಸಾಹೇಬ ದೇಸಾಯಿ, ಅಶೋಕ ಮೋದಿ, ಪರಶುರಾಮ ಜನ್ನಪ್ಪವನವರ, ಗೋಪಾಲಗೌಡ ಪಾಟೀಲ ಇದ್ದರು.


Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ